ಬೆಂಗಳೂರು:ಕರೊನಾ ನಿರ್ವಹಣೆಗೆ ಎದುರಾಗಿರುವ ಸಿಬ್ಬಂದಿ ಕೊರತೆ ನೀಗಿಸಲು ಇತರೆ ಇಲಾಖೆಯ ಸರ್ಕಾರಿ ನೌಕರರನ್ನು ಬಳಸಿಕೊಳ್ಳಬೇಕೆಂಬ ಕೂಗು ಕೇಳಿಬಂದಿದೆ. ರಾಜ್ಯದಲ್ಲಿ ಕರೊನಾ ಎರಡನೇ ಅಲೆ ತೀವ್ರಗತಿಯಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಆದ್ದರಿಂದ, ಈಗಿಂದಲ್ಲೇ ಸರ್ಕಾರ ಕರೊನಾ ನಿರ್ವಹಣೆಗೆ ಮತ್ತಷ್ಟು ಸಿದ್ಧವಾಗಬೇಕಿದೆ.
ರಾಜ್ಯದಲ್ಲಿ ಒಟ್ಟು 5.40 ಲಕ್ಷ ಸರ್ಕಾರಿ ನೌಕರರು ಇದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಶೇ.50 ಸಿಬ್ಬಂದಿ ಕಾರ್ಯ ನಿರ್ವಹಿಸತಕ್ಕದು ಎಂದು ಸರ್ಕಾರ ಆದೇಶಿಸಿದೆ. ಆರೋಗ್ಯ, ವೈದ್ಯಕೀಯ ಶಿಕ್ಷಣ, ಒಳಾಡಳಿತ, ಕಂದಾಯ, ಗ್ರಾಮೀಣಾಭಿವೃದ್ದಿ, ನಗರಾಭಿವೃದ್ಧಿ, ಆಹಾರ, ವಾರ್ತಾ ಹಾಗೂ ಇಂಧನ ಸೇರಿ 15 ಇಲಾಖೆಯ ಸಿಬ್ಬಂದಿ ಜೀವನವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ರೇಷ್ಮೆ, ಸಾರಿಗೆ, ಹಿಂದುಳಿದ ವರ್ಗಗಳ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ, ಪ್ರವಾಸೋದ್ಯಮ, ಶಿಕ್ಷಣ ಮತ್ತಿತರರ ಇಲಾಖೆ ಲಕ್ಷಾಂತರ ಸಿಬ್ಬಂದಿಗೆ ಸರಿಯಾಗಿ ಕೆಲಸವಿಲ್ಲದಂತಾಗಿದೆ. ಅಂಥವರನ್ನು ಕರೊನಾ ತುರ್ತು ಸೇವೆಗೆ ಬಳಸಿಕೊಂಡರೆ ಪರಿಣಾಮಕಾರಿ ಕರೊನಾ ನಿರ್ವಹಣೆ ಮಾಡಬಹುದು. ಜತೆಗೆ ಈ ಕ್ರಮದಿಂದ ಬಿಡುವಿಲ್ಲದೆ ಮತ್ತು ಹೆಚ್ಚುವರಿ ಕಾರ್ಯ ನಿರ್ವಹಣೆಯಿಂದ ಬಳಲುತ್ತಿರುವ ಸಿಬ್ಬಂದಿಗೆ ಅನುಕೂಲವಾಗಲಿದೆ.
ಎಲ್ಲರ ಜೀವ ಅಮೂಲ್ಯ:ಆರೋಗ್ಯ ಇಲಾಖೆಯ ವೈದ್ಯರು, ನರ್ಸ್, ಇತರೆ ವೈದ್ಯಕೀಯ ಸಿಬ್ಬಂದಿ ಇಂತಹ ಕಠಿಣ ಸಂದರ್ಭದಲ್ಲಿ ರಜೆ ರಹಿತವಾಗಿ ಕರೊನಾ ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಸೇವೆಯಲ್ಲಿ ನಿರತರಾಗಿದ್ದಾರೆ. ತಮ್ಮ ಕುಟುಂಬದವರನ್ನು ಬಿಟ್ಟು ವಾರಗಟ್ಟಲೆ ಕಾಲ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಅಧಿಕಾರಿಯೇತರ ಸಿಬ್ಬಂದಿಗಳ ಪಾಡು ಭಿನ್ನವಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದಲ್ಲಿ ಕರೊನಾ ಆತಂಕದಲ್ಲೇ ಕೆಲಸ ಮಾಡುತ್ತಿರುವ ಪೊಲೀಸರು ತಮ್ಮ ಮನೆಗೆ ತೆರಳಿದ್ದರೂ ಪತ್ನಿ ಹಾಗೂ ಮಕ್ಕಳನ್ನು ಮಾತನಾಡಿಸುವುದಕ್ಕೂ ಆಗುತ್ತಿಲ್ಲ. ಹೀಗಾಗಿ, ಆರೋಗ್ಯ ಹಾಗೂ ಪೊಲೀಸ್ ಸಿಬ್ಬಂದಿ ಕೈಯಲ್ಲಿ ಜೀವ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾರೆ.
ತುರ್ತು ಸೇವೆಗೆ ನಿಯೋಜಿಸಿ:ಚೆಕ್ ಪೋಸ್ಟ್​ಗಳಲ್ಲಿ ವಾಹನ ತಪಾಸಣೆ ಸೇರಿ ತುರ್ತು ಸೇವೆಗಳಲ್ಲಿ ಸಿಬ್ಬಂದಿಗಳ ಕೊರತೆ ಉಂಟಾಗಿದೆ. ಹೀಗಾಗಿ, ಸದ್ಯಕ್ಕೆ ಕೆಲಸವಿಲ್ಲದೆ ಇರುವ ನೌಕರರಿಗೆ ಅಗತ್ಯ ತರಬೇತಿ ನೀಡಿ ತುರ್ತು ಸೇವೆಗಳಿಗೆ ಬಳಸಿಕೊಳ್ಳಬಹುದು. ಈ ಕ್ರಮದಿಂದ ತುರ್ತು ಸೇವೆ ನೀಡುತ್ತಿರುವ ಎಲ್ಲ ಇಲಾಖೆಯ ನೌಕರರಿಗೂ ಒತ್ತಡ ಕಡಿಮೆ ಆಗು ವುದಲ್ಲದೆ ಸಿಬ್ಬಂದಿಗಳ ಕೊರತೆಯೂ ನಿಗಲಿದೆ.
ನೂರಾರು ಕೋಟಿ ಆದಾಯ ನಷ್ಟ:ರಾಜ್ಯ ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಡುವ ಪ್ರಮುಖ ಇಲಾಖೆಗಳಾದ ವಾಣಿಜ್ಯ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಸಾರಿಗೆ ಇಲಾಖೆಗಳು ಕರೊನಾದಿಂದ ಪ್ರತಿ ನಿತ್ಯ ಸರ್ಕಾರಕ್ಕೆ ನೂರಾರು ಕೋಟಿ ಆದಾಯ ನಷ್ಟವಾಗುತ್ತಿದೆ. ತುರ್ತು ಕೆಲಸಗಳು ಇದ್ದರೆ ಸಂಬಂಧ ವಿಭಾಗಪಟ್ಟ ಸಿಬ್ಬಂದಿಗಳನ್ನು ಆಯುಕ್ತರು ಕರೆಸಿಕೊಂಡು ಒಂದೆರಡು ಗಂಟೆಗಳ ಕೆಲಸ ಮಾಡಿಸಲಾಗುತ್ತಿತ್ತು. ದಿನದಲ್ಲಿ ನಾಲ್ಕು ಗಂಟೆಗಳ ಆಯಾ ಇಲಾಖೆ ಆಯುಕ್ತರು ಹಾಗೂ ಎ ದರ್ಜೆಯ ನೌಕರರು ಕೆಲಸಗಳನ್ನು ಮಾಡಿ ಮನೆಗೆ ತೆರಳುತ್ತಿದ್ದಾರೆ.
ಶಿಕ್ಷಣ ಇಲಾಖೆಯಲ್ಲೇ ಹೆಚ್ಚು ಸಿಬ್ಬಂದಿ:ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ವ್ಯಾಪಿಗೆ ಒಳಪಡುವ ಶಿಕ್ಷಣ ಇಲಾಖೆಯಲ್ಲೇ ಆಂದಾಜು 3 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇದೀಗ ಬೇಸಿಗೆ ರಜೆ ಇರುವುದರಿಂದ ಶಿಕ್ಷಕರು ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಹೀಗಾಗಿ ಅಂಥವರಿಗೆ ತರಬೇತಿ ನೀಡಿ ತುರ್ತು ಸೇವೆಗಳಿಗೆ ಬಳಸಿಕೊಳ್ಳಬಹುದು ಎಂಬುದು ಕೆಲವರ ಸಲಹೆ.
ಡಿಸೆಂಬರ್‌ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್
ರಸ್ತೆಗಿಳಿದು 100 ಕಾರಣ ಹೇಳಿ ವಾದ ಮಾಡ್ಬೇಡಿ: ನಮ್ಗೂ ಆಯ್ಕೆ ಇದ್ದಿದ್ರೆ ಒಳಗೇ ಇರ್ತಿದ್ವಿ ಅಂದ ಪೊಲೀಸ್ರು ಕೊಟ್ಟ ಆ ಒಂದು ಕಾರಣ ಇಲ್ಲಿದೆ..👇

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
