| ಪಂಕಜ ಕೆ.ಎಂ. ಬೆಂಗಳೂರು
ಕರೊನಾ ಕಾರಣದಿಂದಾಗಿ ಖಾಸಗಿ ಶಾಲಾ ಮಕ್ಕಳಿಗೆ ಆನ್​ಲೈನ್ ಪಾಠ ನಡೆಯುತ್ತಿದ್ದು, ಇದೇ ಈಗ ಆರೋಗ್ಯಕ್ಕೆ ಕಾಟವಾಗಿ ಕಾಡಲಾರಂಭಿಸಿದೆ. ಕರೊನಾ ಕಾಲಿಟ್ಟ ಬಳಿಕ ರಾಜ್ಯದಲ್ಲಿ ಮಕ್ಕಳ ಕಣ್ಣಿನ ಸಮಸ್ಯೆ ಪ್ರಕರಣಗಳ ಸಂಖ್ಯೆ ಶೇ.30 ಹೆಚ್ಚಾಗಿದೆ.
ಬೆಂಗಳೂರಿನ ನಾರಾಯಣ ನೇತ್ರಾಲಯ, ಮಿಂಟೋ ಆಸ್ಪತ್ರೆಯಂತಹ ಪ್ರಮುಖ ಕಣ್ಣಿನ ಆಸ್ಪತ್ರೆಗಳಿಗೆ ಕಣ್ಣಿನ ಸಮಸ್ಯೆ ಹೊತ್ತು ಬರುವ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಮೊಬೈಲ್, ಲ್ಯಾಪ್​ಟಾಪ್, ಕಂಪ್ಯೂಟರ್ ಹಾಗೂ ವಿಡಿಯೋ ಗೇಮ್ ಅತಿಯಾದ ವೀಕ್ಷಣೆಯಿಂದ ಎದುರಾಗುತ್ತಿದ್ದ ದೃಷ್ಟಿ ಸಮಸ್ಯೆ ಮುಂದಿಟ್ಟುಕೊಂಡು ನಿತ್ಯ ಸರಾಸರಿ 3 ರಿಂದ 4 ಮಕ್ಕಳು ಚಿಕಿತ್ಸೆಗೆ ಬರುತ್ತಿದ್ದರು. ಆದರೆ, ಕೋವಿಡ್ ಆರಂಭವಾದ ಬಳಿಕ ಆಸ್ಪತ್ರೆಗೆ ಭೇಟಿ ಕೊಡುವವರ ಸಂಖ್ಯೆ 8 ರಿಂದ 10ಕ್ಕೆ ಏರಿಕೆಯಾಗಿದೆ. ಕೋವಿಡ್ ಆರಂಭದ ದಿನಗಳಲ್ಲಿ ಒಂದೆರಡು ತಿಂಗಳು ಆನ್​ಲೈನ್ ತರಗತಿ ನಡೆಯಬಹುದೆಂದು ಅಂದಾಜಿಸಲಾಗಿತ್ತು. ಆದರೆ, ದಿನೇದಿನೆ ಪ್ರಕರಣ ಹೆಚ್ಚಾಗಿದ್ದರಿಂದಾಗಿ ಆನ್​ಲೈನ್ ಕಲಿಕೆ ಅವಧಿಯೂ ವಿಸ್ತರಣೆಯಾಗಿದೆ. ಇದರಿಂದ ಇನ್ನೂ ಕೆಲ ಸಮಯ ಇ-ತರಗತಿ ಅನಿವಾರ್ಯ ಆಗಿರುವುದರಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ನೇತ್ರತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
(ನೇತ್ರತಜ್ಞರ ಸಲಹೆಗಳು)
ಆನ್​ಲೈನ್​ನಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸದ್ಯಕ್ಕೆ ಶಾಲೆ ಆರಂಭವಾಗುವ ಲಕ್ಷಣಗಳಿಲ್ಲದಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಬಹುದು.
|ಸುಜಾತಾ ರಾಥೋಡ್, ನಿರ್ದೇಶಕಿ, ಮಿಂಟೋ ಆಸ್ಪತ್ರೆ
ಮೊದಲು ಪ್ರತಿನಿತ್ಯ 3 ಅಥವಾ 4 ಮಕ್ಕಳು ಕಣ್ಣಿನ ಸಮಸ್ಯೆ ಎಂದು ಬರುತ್ತಿದ್ದರು. ಈಗ ಆ ಸಂಖ್ಯೆ 8 ರಿಂದ 10ಕ್ಕೆ ಏರಿಕೆಯಾಗಿದೆ. ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಲ್ಲಿ ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರ ಬಳಿ ಕರೆದೊಯ್ದು ತೋರಿಸಿ.
|ಡಾ.ಭುಜಂಗ ಶೆಟ್ಟಿನಾರಾಯಣ ನೇತ್ರಾಲಯ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × five =
Remember me
