ಬೆಂಗಳೂರು:ರಾಜಧಾನಿಯಲ್ಲಿ ಪ್ರಥಮ ಬಾರಿಗೆ ಮರಗಳ ಗಣತಿ ಪ್ರಕ್ರಿಯೆಯನ್ನು ಬಿಬಿಎಂಪಿ ಕೈಗೆತ್ತಿಗೊಂಡಿದೆ. ಈಗಾಗಲೇ ಕಾರ್ಯಾರಂಭವಾಗಿದ್ದು, ಮುಂದಿನ 6 ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಮರ ಗಣತಿಗೆ ಆ್ಯಪ್ ಅಭಿವೃದ್ಧಿಪಡಿಸಿ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಕೊಟ್ಟಿದೆ.
ಮರ ಗಣತಿ ತಂಡದಲ್ಲಿ ಸಸ್ಯಶಾಸಜ್ಞರು ಇರಲಿದ್ದಾರೆ. 5.5 ಸೆಂಮೀ ಸುತ್ತಳತೆ ಅಥವಾ 1 ಮೀಟರ್ ಎತ್ತರವಿರುವ ಎಲ್ಲ ಮರ-ಗಿಡಗಳ ಗಣತಿ ಪ್ರಭೇದ ಸೇರಿ ಹಲವು ಮಾಹಿತಿ ಸಂಗ್ರಹಿಸಲಾಗುವುದು. ಆ್ಯಪ್ ಮೂಲಕ ಪಾಲಿಕೆ ಅಧಿಕಾರಿಗಳು ಮರ ಎಣಿಸುತ್ತಿದ್ದಾರೆ. ಗಿಡ-ಮರಗಳ ಚಿತ್ರ, ಪ್ರಭೇದ ಮತ್ತಿತರ ಸಮಗ್ರ ಮಾಹಿತಿ ಸಂಗ್ರಹಿಸಿ ಆ್ಯಪ್‌ನಲ್ಲಿ ನಮೂದಿಸುತ್ತಿದ್ದಾರೆ. ಗಣತಿಗೆ 4 ಕೋಟಿ ರೂ. ವೆಚ್ಚವಾಗಬಹುದು ಎಂದು ಪಾಲಿಕೆ ಅಂದಾಜಿಸಿದೆ. ಖಾಸಗಿ ಜಮೀನಿನಲ್ಲಿ 50ಗಿಂತ ಕಡಿಮೆ ಮರಗಳಿದ್ದರೆ ಬಿಬಿಎಂಪಿ ನೇಮಕ ಮಾಡಿದ ಗುತ್ತಿಗೆದಾರರೇ ಗಣತಿ ನಡೆಸಲಿದ್ದಾರೆ. ಇಲ್ಲವಾದರೆ, ಸಂಬಂಧಪಟ್ಟ ಇಲಾಖೆ ಅಥವಾ ಮಾಲೀಕರು ಗಣತಿ ನಡೆಸಿ ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಮಾಹಿತಿ ನೀಡಲಿದ್ದಾರೆ.
ದೇಶದಲ್ಲಿ 10 ವರ್ಷಕ್ಕೊಮ್ಮೆ ಜನಗಣತಿ, 5 ವರ್ಷಕ್ಕೊಮ್ಮೆ ಜಾನುವಾರು ಗಣತಿ ನಡೆಸಿಕೊಂಡು ಬರಲಾಗುತ್ತಿದೆ. ಬೆಂಗಳೂರನ್ನು ಉದ್ಯಾನಗರಿ, ಸಸ್ಯಕಾಶಿ ಎಂದೆಲ್ಲ ಕರೆಯಲಾಗುತ್ತದೆ. ಆದರೆ, ಇದುವರೆಗೆ ನಗರದಲ್ಲಿ ಮರಗಳ ಗಣತಿಗೆ ಬಿಬಿಎಂಪಿ ಅಥವಾ ಸರ್ಕಾರ ಪ್ರಾಶಸ್ತ್ಯ ನೀಡಿರಲಿಲ್ಲ. ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ 1976ರ ಪ್ರಕಾರ ಮರ ಗಣತಿ ನಡೆಸಬೇಕಾದದ್ದು ಪಾಲಿಕೆಯ ಜವಾಬ್ದಾರಿ. ಆದರೆ, ಕಾಯ್ದೆ ಜಾರಿಯಾಗಿ 47 ವರ್ಷಗಳು ಕಳೆದರೂ ಆ ಕೆಲಸವನ್ನು ಮಾಡಿಲ್ಲ. ಮೂರು ತಿಂಗಳಲ್ಲಿ ಗಣತಿ ಪ್ರಕ್ರಿಯೆ ಆರಂಭಿಸಬೇಕು ಎಂದು 2019ರಲ್ಲಿ ಹೈಕೋರ್ಟ್ ಸೂಚಿಸಿದ್ದರೂ ಬಿಬಿಎಂಪಿ ಗಣತಿಗೆ ಇಚ್ಛಾಶಕ್ತಿ ತೋರಿರಲಿಲ್ಲ. ನಾಲ್ಕು ವರ್ಷ ಬಳಿಕ ಎಚ್ಚೆತ್ತುಕೊಂಡಿದೆ.
ಹನುಮಾನ್ ಒಟಿಟಿ ರಿಲೀಸ್ ಕನ್ಫರ್ಮ್​? ಎಲ್ಲಿ ಯಾವಾಗ ಗೊತ್ತಾ?
ಪ್ರತಿ ಮರಕ್ಕೆ ಯೂನಿಕ್ ಐಡಿಪ್ರತಿ ಮರಕ್ಕೆ ಕ್ಯೂಆರ್ ಕೋಡ್ ಅಳವಡಿಕೆಗೆ ಪಾಲಿಕೆ ಚಿಂತಿಸಿತ್ತು. ಆದರೆ, ಪ್ರತಿ ಮರಕ್ಕೆ ಕ್ಯೂಆರ್ ಕೋಡ್ ಅಳವಡಿಕೆಗಾಗಿ ಮೊಳೆ ಹೊಡೆಯಬೇಕಾಗುತ್ತದೆ. ಇದರಿಂದಾಗಿ ಮರಕ್ಕೆ ಹಾನಿಯಾಗುತ್ತದೆ. ಹಾಗಾಗಿ, ಪ್ರತಿ ಮರಕ್ಕೆ ಮೊಳೆ ಬದಲು ಪಾಲಿಕೆ, ಯೂನಿಕ್ ಐಡಿ ನೀಡುತ್ತಿದೆ. ಯಾವ ಪ್ರಭೇದ, ಎಷ್ಟು ವರ್ಷದ ಮರ ಇತ್ಯಾದಿ ಮಾಹಿತಿ ಸಿಗಲಿದೆ. ಕಾನೂನುಬಾಹಿರವಾಗಿ ಮರ ಕಡಿಯುವಿಕೆ ತಡೆಗೆ, ಗಾಳಿ-ಮಳೆಗೆ ಬೀಳುವ ಮರಗಳ ಲೆಕ್ಕ, ಯಾವ್ಯಾವ ಯೋಜನೆಗೆ ಎಷ್ಟು ಮರ ಕಡಿಯಲಾಗುತ್ತದೆ ಎಂಬುದರ ಬಗ್ಗೆ ಗಣತಿ ಬಳಿಕ ಮಾಹಿತಿ ಸಿಗುತ್ತದೆ ಎಂದು ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರತಿ ರಸ್ತೆಯ ಒಂದು ಮರದ ಮುಂಭಾಗ ದೊಡ್ಡ ಕ್ಯೂಆರ್ ಕೋಡ್ ಲಕ ಅಳವಡಿಸಲಾಗುತ್ತದೆ. ಅದನ್ನು ಸ್ಕ್ಯಾನ್​ ಮಾಡಿದರೆ ಜನರಿಗೆ ರಸ್ತೆಯಲ್ಲಿ ಎಷ್ಟು ಮರಗಳಿವೆ, ಯಾವ ಜಾತಿಯ ಮರಗಳಿವೆ ಎಂಬುದರ ಬಗ್ಗೆ ಗೊತ್ತಾಗುತ್ತದೆ ಎಂದಿದ್ದಾರೆ.
ಶೇ.88 ಹಸಿರು ಹೊದಿಕೆ ಮಾಯ‘ಉದ್ಯಾನನಗರಿ’ ಎಂಬ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ದಿನೇದಿನೆ ಹಸಿರಿನ ಪ್ರಮಾಣ ಕುಗ್ಗುತ್ತಿದ್ದು, ಕಾಂಕ್ರೀಟ್ ಕಾಡಾಗಿ ಪರಿವರ್ತನೆಯಾಗುತ್ತಿದೆ. ಒಂದೆಡೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮರಗಳಿಗೆ ಕೊಡಲಿ ಏಟು ಬೀಳುತ್ತಲೇ ಇದೆ. ಮತ್ತೊಂದೆಡೆ, ಪ್ರತಿ ವರ್ಷವೂ ಕೋಟ್ಯಂತರ ರೂ. ವ್ಯಯಿಸಿ ಲಕ್ಷಾಂತರ ಸಸಿಗಳನ್ನು ನಡೆಲಾಗುತ್ತಿದೆ. ಸೂಕ್ತ ನಿರ್ವಹಣೆ ಇಲ್ಲದ ಪರಿಣಾಮ ಬಹುಪಾಲು ಗಿಡಗಳು ಮುರುಟಿ ಹೋಗುತ್ತಿವೆ. 2003 ಮತ್ತು 2021ರ ಅವಧಿಯಲ್ಲಿ ನಗರವು ಶೇ.59 ಹಸಿರು ಹೊದಿಕೆ ಕಳೆದುಕೊಂಡಿದೆ. ಅಲ್ಲದೆ, 45 ವರ್ಷಗಳಲ್ಲಿ ಬೆಂಗಳೂರು ಶೇ.88 ಹಸಿರನ್ನು ಕಳೆದುಕೊಂಡಿದ್ದು, ಶೇ.79 ನೀರಿನ ಮೂಲಗಳನ್ನು ಕಳೆದುಕೊಂಡಿದೆ. 1940ರಲ್ಲಿ ಬೆಂಗಳೂರು 260 ಕೆರೆಗಳನ್ನು ಹೊಂದಿತ್ತು. ಆದರೆ, ಈಗ ಕೇವಲ 65ಕ್ಕೆ ಇಳಿದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
