ಬೆಂಗಳೂರು:ಶುಲ್ಕ ಪಾವತಿಸದ ಮಕ್ಕಳಿಗೆ ಸದ್ಯಕ್ಕೆ ಆನ್​ಲೈನ್ ಕ್ಲಾಸ್ ಸ್ಥಗಿತಗೊಳಿಸುವುದಿಲ್ಲ, ಆದರೆ 15 ದಿನಗಳ ಒಳಗೆ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ತಿಳಿಸಿವೆ. ಶುಲ್ಕ ಪಾವತಿಸದ ಮಕ್ಕಳಿಗೆ ಡಿ.1ರಿಂದ ಆನ್​ಲೈನ್ ತರಗತಿಗಳನ್ನು ರದ್ದು ಮಾಡುತ್ತೇವೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ಜತೆ ಸಭೆ ನಡೆದಿತ್ತು. ಶುಲ್ಕ ಪಾವತಿ ಸೇರಿ ಆರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿರುವ ಖಾಸಗಿ ಶಾಲಾ ಸಂಘಟನೆಗಳು ಅವುಗಳ ಪರಿಹಾರಕ್ಕೆ 15 ದಿನ ಗಡುವು ನೀಡಿವೆ.
ಈ ಸಭೆಯಲ್ಲಿ ಕ್ಯಾಮ್್ಸ, ಕುಸ್ಮಾ, ಮಿಸ್ಕಾ, ರುಪ್ಸಾ, ಐಸಿಎಸ್​ಇ ಶಾಲಾ ಪ್ರತಿನಿಧಿಗಳ ಸಂಘ, ಅಲ್ಪಸಂಖ್ಯಾತ ಶಾಲೆಗಳ ಒಕ್ಕೂಟಗಳ ಸಂಘಟನೆಗಳು ಭಾಗವಹಿಸಿದ್ದವು. ಕ್ಯಾಮ್್ಸ ಸಂಘಟನೆ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮಾತನಾಡಿ, ಈವರೆಗೆ ಶೇ.40 ಪಾಲಕರು ಶುಲ್ಕ ಪಾವತಿಸಿ ಮಕ್ಕಳಿಗೆ ಪ್ರವೇಶವನ್ನು ಪಡೆದುಕೊಂಡಿಲ್ಲ. ಶುಲ್ಕ ಪಾವತಿಸದೇ ಇದ್ದರೂ ಮಕ್ಕಳನ್ನು ಮುಂದಿನ ವರ್ಷಕ್ಕೆ ಪಾಸ್ ಮಾಡುತ್ತಾರೆ ಎಂಬ ಕಲ್ಪನೆಯಲ್ಲಿದ್ದಾರೆ. ಸರ್ಕಾರ ಪಾಲಕರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪ್ರಮುಖವಾಗಿ ಶುಲ್ಕ ವಿವಾದ ಬಗೆರಿಸಲು ಕ್ರಮ ವಹಿಸಬೇಕು. ತಮಿಳುನಾಡಿನಲ್ಲಿ ಶೇ.75 ಶುಲ್ಕ ಪಡೆಯಲು ಅಲ್ಲಿನ ಹೈಕೋರ್ಟ್ ಅವಕಾಶ ನೀಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಶೇ.75 ಶುಲ್ಕ ಪಡೆಯಲು ಸರ್ಕಾರ ಅನುಮತಿ ನೀಡಬೇಕು. ಶಾಲೆಗಳ ಆರ್ಥಿಕ ಸಂಕಷ್ಟ ಪರಿಹಾರಕ್ಕೆ ಬಡ್ಡಿ ರಹಿತ ಸಾಲ ನೀಡಬೇಕು. ಖಾಸಗಿ ಶಾಲೆಗಳಿಗೆ ಬಾಕಿ ಇರುವ ಆರ್​ಟಿಇ ಮರುಪಾವತಿ ಹಣವನ್ನು ಕೂಡಲೇ ಬಿಡುಗಡೆ ಮಾಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿವೆ.
ಶುಲ್ಕ ಪಾವತಿಸದ ಕಾರಣ ಆನ್​ಲೈನ್ ಶಿಕ್ಷಣ ನಿಲ್ಲಿಸಿ ಯಾವುದೇ ಮಕ್ಕಳ ಕಲಿಕೆಗೆ ತೊಂದರೆಯಾಗುವ ನಿರ್ಧಾರಗಳನ್ನು ಕೈಗೊಳ್ಳದಂತೆ ಸೂಚಿಸಲಾಗಿದೆ. ಇದಕ್ಕೆ ಎಲ್ಲ ಸಂಘಟನೆಗಳ ಪ್ರತಿನಿಧಿಗಳು ಒಪ್ಪಿದ್ದಾರೆ. ಒಕ್ಕೂಟದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ.
|ಅನ್ಬುಕುಮಾರ್ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − fourteen =
Remember me
