ಚಿಕ್ಕಬಳ್ಳಾಪುರ:ಪತ್ನಿಯ ಹೊಟ್ಟೆಯಲ್ಲಿರುವ ಭ್ರೂಣ ಹೆಣ್ಣು ಎಂಬ ಕಾರಣಕ್ಕೆ ಗಂಡನೇ ಮುಂದೆ ನಿಂತು ಬಲವಂತವಾಗಿ ಮನೆಯಲ್ಲೇ ಅಬಾರ್ಷನ್ ಮಾಡಿಸಿದ್ದು, ಮಗುವಿನ ಜತೆಗೆ ತಾಯಿಯೂ ಮೃತಪಟ್ಟಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇಂತಹ ಅಮಾನವೀಯ ಘಟನೆ ಬಾಗೇಪಲ್ಲಿ ತಾಲೂಕಿನ ಕೊತ್ತಪಲ್ಲಿ ಗ್ರಾಮದಲ್ಲಿ ನಡೆದಿದೆ. ಕೊತ್ತಪಲ್ಲಿ ಗ್ರಾಮದ ಸೋಮಶೇಖರ್​ ಎಂಬುವರ ಪತ್ನಿ ಪಿ.ಎಸ್​.ಶ್ರೀಕನ್ಯಾ ಮೃತ ದುರ್ದೈವಿ.
2014ರಲ್ಲಿ ಸೋಮಶೇಖರ್​ ಜತೆ ಶ್ರೀಕನ್ಯಾರ ಮದುವೆ ಆಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಪತಿಯ ಕುಟುಂಬದವರು ಗಂಡು ಮಗು ಬೇಕು ಎಂದ ಕಾರಣಕ್ಕೆ 3ನೇ ಮಗು ಪಡೆಯಲು ದಂಪತಿ ನಿರ್ಧರಿಸಿದ್ದರು. ಶ್ರೀಕನ್ಯಾ ಗರ್ಭಿಣಿಯಾದಾಗ ಪತಿ ಕುಟುಂಬಸ್ಥರು ಭ್ರೂಣದ ಲಿಂಗ ಪರೀಕ್ಷೆ ಮಾಡಿಸಿದ್ದು, ಅದು ಹೆಣ್ಣು ಭ್ರೂಣ ಎಂದು ತಿಳಿದಿದೆ. ಹಾಗಾಗಿ ಪತಿ ಹಾಗೂ ಕುಟುಂಬಸ್ಥರು ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಡ ಹಾಕಿದ್ದರು.
ಗರ್ಭಪಾತ ಮಾಡಿಸಿಕೊಳ್ಳಲು ಶ್ರೀಕನ್ಯಾ ಒಪ್ಪಿರಲಿಲ್ಲ. ಶ್ರೀಕನ್ಯಾರ ತವರು ಮನೆಯವರೂ ಗರ್ಭಪಾತ ಮಾಡಿಸದಂತೆ ಸೋಮಶೇಖರ್​ ಮನೆಯವರಿಗೆ ಬುದ್ಧಿ ಹೇಳಿದ್ದರು.
ಅಷ್ಟಾದರೂ ನ.16ರಂದು ಮನೆಯಲ್ಲೇ ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು ಎನ್ನಲಾಗಿದೆ. ಈ ವೇಳೆ ಶ್ರೀಕನ್ಯಾಗೆ ತೀವ್ರ ರಕ್ತಸ್ರಾವವಾಗಿದ್ದರಿಂದ ಪಟ್ಟಣದ ಖಾಸಗಿ ಕ್ಲಿನಿಕ್​ಗೆ ದಾಖಲಿಸಲಾಗಿತ್ತು. ವೈದ್ಯರ ಸೂಚನೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಿಸಲದೆ ನ.19ರಂದು(ಗುರುವಾರ) ಮೃತಪಟ್ಟರು.
ಬಲವಂತವಾಗಿ ಗರ್ಭಪಾತ ಮಾಡಿಸಿದ ಹಿನ್ನೆಲೆಯಲ್ಲಿ ಮಗಳು ಮೃತಪಟ್ಟಿದ್ದಾಳೆ ಎಂದು ಮೃತಳ ತಂದೆ ಶ್ರೀನಿವಾಸ್​ ಬಾಗೇಪಲ್ಲಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಆರ್​ಎಂಪಿ ಡಾಕ್ಟರ್ ಇಬ್ರಾಹಿಂ ಖಾನ್ ಮತ್ತು ನರ್ಸ್ ಜಬೀಜಾ, ಶ್ರೀಕನ್ಯರ ಪತಿ ಸೋಮಶೇಖರ್​ನನ್ನು ಬಂಧಿಸಿದ್ದಾರೆ.
ಸೋಮಶೇಖರ್ ಮನೆಯಲ್ಲೇ ಶೀಕನ್ಯಗೆ ವೈದ್ಯ ಇಬ್ರಾಹಿಂ ಖಾನ್ ಅಬಾರ್ಷನ್ ಮಾಡಿದ್ದರು. ಈ ಕೆಲಸಕ್ಕೆ ನರ್ಸ್​ ಜಬೀಜಾ ಸಾಥ್​ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಡಾಕ್ಟರ್​ ಗೌರಿಬಿದನೂರು ತಾಲೂಕಿನ ಡಿ.ಪಾಳ್ಯದವರು ಎಂದು ತಿಳಿದು ಬಂದಿದೆ.
ನಾಲೆ ಬಳಿ ಬೈಕ್-ಚಪ್ಪಲಿ ಬಿಟ್ಟು ಹೋದ ಪ್ರೇಮಿಗಳು ಶವವಾಗಿ ಪತ್ತೆ: ಡೆತ್​ನೋಟ್​ನಲ್ಲಿತ್ತು ಯುವತಿಯ ಆಕ್ರೋಶ!

ದನ ಕಾಯೋಕೆ ಹೋಗಿ… ವೈದ್ಯರಿಗೆ ಸಚಿವ ಸುಧಾಕರ್​ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + three =
Remember me
