| ಕೀರ್ತಿನಾರಾಯಣ ಸಿ. ಬೆಂಗಳೂರು
ವಿದೇಶಿ ಅಡಕೆ ನಿಯಂತ್ರಿಸಲು ಆಮದು ಖರೀದಿ ಕನಿಷ್ಠ ದರವನ್ನು ಕೆಜಿಗೆ 251 ರೂ.ನಿಂದ 351 ರೂ.ಗೆ ಕೇಂದ್ರ ಸರ್ಕಾರ ಹೆಚ್ಚಿಸಿದ್ದರೂ ಫಾರಿನ್ ಸುಪಾರಿ ಕಾಟ ತಪ್ಪಿಲ್ಲ. ಕಳೆದ ಮೂರು ವರ್ಷದಲ್ಲಿ ಬರೋಬ್ಬರಿ 22,678 ಮೆಟ್ರಿಕ್ ಟನ್ ಅಡಕೆ ಜಪ್ತಿ ಮಾಡಿರುವುದು ಈ ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ.
ಚಿನ್ನದ ರೀತಿ ಸ್ಮಗ್ಲಿಂಗ್: ಅರಬ್ ದೇಶಗಳಿಂದ ಚಿನ್ನ ಕಳ್ಳಸಾಗಣೆ ಆಗುವ ರೀತಿ ಅಡಕೆ ಸ್ಮಗ್ಲಿಂಗ್ ನಡೆಯುತ್ತಿದೆ. ಭಾರತದ ಏರ್​ಪೋರ್ಟ್​ಗಳಲ್ಲೇ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಸಾಗಾಟದ ಅಡಕೆ ಪತ್ತೆಯಾಗುತ್ತಿದೆ. ಹೀಗಾಗಿ ಈ ಬಗ್ಗೆ ನಿಗಾ ವಹಿಸುವಂತೆ ಎಲ್ಲ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆಗಳಿಗೆ ಸೂಚನೆ ಕೊಡಲಾಗಿದೆ.
ಭಾರತಕ್ಕೆ ಅಡಕೆ ಆಘಾತ: ಕರ್ನಾಟಕ ಸೇರಿ ಭಾರತದಲ್ಲಿ ಅತಿಹೆಚ್ಚು ಅಡಕೆ ಬೆಳೆಯುವ ಹಲವು ಪ್ರದೇಶಗಳಿವೆ. ವಾರ್ಷಿಕ 16 ರಿಂದ 17 ಲಕ್ಷ ಮೆಟ್ರಿಕ್ ಟನ್ ಅಡಕೆ ಉತ್ಪಾದನೆಯಾಗುತ್ತದೆ. ಜಗತ್ತಿನಲ್ಲಿ ಉತ್ಪಾದನೆಯಾಗುವ ಶೇ.55ರಷ್ಟು ಅಡಕೆ ಭಾರತದಲ್ಲೇ ಬೆಳೆಯಲಾಗುತ್ತದೆ. ಆದರೆ, ದೊಡ್ಡ ಪ್ರಮಾಣದಲ್ಲಿ ವಿದೇಶಿ ಅಡಕೆ ಆಮದು ಆಗುತ್ತಿರುವುದರಿಂದ ದೇಶಿಯ ಅಡಕೆ ಮಾರುಕಟ್ಟೆ ಮತ್ತು ಧಾರಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದೇಸಿ ಅಡಕೆ ಧಾರಣೆ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಏಕಾಏಕಿ 100 ರೂ. ಆಮದು ಖರೀದಿ ದರ ಹೆಚ್ಚಿಸಲಾಗಿದೆ. ಆದರೆ, ವಾಯು, ಸಮುದ್ರ ಹಾಗೂ ಭೂ ಬಂದರುಗಳ (ಲ್ಯಾಂಡ್​ಪೋರ್ಟ್) ಮೂಲಕ ವಿದೇಶಗಳಿಂದ ಕಳ್ಳಮಾರ್ಗದಲ್ಲಿ ಅಡಕೆ ಬರುತ್ತಿರುವ ಸಂಗತಿ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್್ಸ ಮಂಡಳಿ (ಸಿಬಿಐಸಿ) ಪತ್ತೆಹಚ್ಚಿರುವ ಪ್ರಕರಣಗಳಿಂದ ದೃಢಪಟ್ಟಿದೆ.
ತೀವ್ರಗೊಂಡ ಕಾರ್ಯಾಚರಣೆ:2023-24ರಲ್ಲಿ ದೇಶದಲ್ಲಿ 643 ಪ್ರಕರಣ ದಾಖಲಿಸಿ, ಬರೋಬ್ಬರಿ 12,881 ಮೆಟ್ರಿಕ್ ಟನ್ ಕಳ್ಳಮಾರ್ಗದಲ್ಲಿ ಬರುತ್ತಿದ್ದ ಅಡಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ವರ್ಷ ಜೂನ್​ವರೆಗೆ ಅಂದರೆ 6 ತಿಂಗಳಲ್ಲೇ 3009 ಮೆಟ್ರಿಕ್ ಟನ್ ಸ್ಮಗ್ಲಿಂಗ್ ಅಡಕೆ ಜಪ್ತಿಯಾಗಿದ್ದು, 84 ಪ್ರಕರಣ ದಾಖಲಾಗಿದೆ. ಇದೇ ಜೂನ್​ವರೆಗೆ ಏರ್​ಪೋರ್ಟ್​ಗಳಲ್ಲೇ 10 ಸಾವಿರ ಕೆ.ಜಿ ಅಕ್ರಮ ಸಾಗಾಟದ ಅಡಕೆ ಸಿಕ್ಕಿಬಿದ್ದಿದ್ದು, 3 ಕೇಸ್ ದಾಖಲಿಸಲಾಗಿದೆ. ತನಿಖಾ ತಂಡಗಳ ಕೈಗೆ ಬೆರಳೆಣಿಕೆ ಪ್ರಕರಣಗಳು ಸಿಕ್ಕಿಬೀಳುತ್ತಿದ್ದು, ವಾರ್ಷಿಕ ನೂರಾರು ಕೋಟಿ ಮೌಲ್ಯದ ಅಡಕೆ ಕಳ್ಳಸಾಗಾಣೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಡ್ರೖೆಫ್ರೂಟ್ಸ್ ಹೆಸರಲ್ಲಿ ದಂಧೆ:ಡ್ರೖೆ ಫ್ರೂಟ್ಸ್ ಹೆಸರಲ್ಲಿ ಅಡಕೆಯನ್ನು ಕಳ್ಳಸಾಗಣೆ ಮಾಡಲಾಗುತ್ತದೆ. ಲ್ಯಾಂಡ್​ಪೋರ್ಟ್, ಏರ್​ಪೋರ್ಟ್​ಗಳು ಹಾಗೂ ಸಮುದ್ರ ಮಾರ್ಗಗಳ ಮೇಲೆ ಹದ್ದಿನ ಕಣ್ಣಿಡಲು ಸಿಬಿಐಸಿ ಅಧೀನದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ. ಜತೆಗೆ ಆಯಾ ರಾಜ್ಯಗಳ ವಾಣಿಜ್ಯ ತೆರಿಗೆ ಇಲಾಖೆಗಳು ಸಹ ವಿಶೇಷ ತಂಡ ರಚಿಸಿ, ನಿಗಾ ಇರಿಸಲಾಗಿದೆ. ಕಾನೂನು ಪ್ರಕಾರ ಕಳ್ಳಸಾಗಾಣೆ ನಿಯಂತ್ರಿಸಲು ಕೇಂದ್ರ ಸೂಚಿಸಿದೆ.
* ವಾಯು, ಸಮುದ್ರ ಹಾಗೂ ಭೂ ಬಂದರುಗಳಲ್ಲಿ ಅಡಕೆ ಕಳ್ಳಸಾಗಾಣೆ ಮೇಲೆ ನಿಗಾ ವಹಿಸಬೇಕು
* ಆಮದು ಸರಕು ತೆರವಿಗೂ ಮುನ್ನ ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಪರಿಶೀಲನೆ
* ಸುಂಕ ವಿನಾಯಿತಿ ದುರ್ಬಳಕೆ ಆಮದಾಗದಂತೆ ಪರಿಶೀಲಿಸುವುದು
* ಮೆ.ಟನ್​ಗೆ ಆಮದು ಸುಂಕವನ್ನು ಯುಎಸ್​ಡಿ ಮೌಲ್ಯ 6242 ನಿಗದಿಪಡಿಸಿರುವ ಸಿಬಿಐಸಿ
* ಶ್ರೀಲಂಕಾ
* ಮಯಾನ್ಮಾರ್ ? ನೇಪಾಳ
* ಇಂಡೋನೇಷ್ಯಾ ? ಮಾಲ್ಡೀವ್ಸ್
* ಸಿಂಗಾಪುರ
* ಯುಎಇ
* ಮಲೇಷ್ಯಾ
* ಭಾರತದ ಅಡಕೆಗಿಂತ ಶೇ.50ಕ್ಕಿಂತಲೂ ಕಡಿಮೆ ದರಕ್ಕೆ ವಿದೇಶಿ ಅಡಕೆ ಲಭ್ಯ
* ಗುಣಮಟ್ಟವಲ್ಲದ ಅಡಕೆಯಾಗಿರುವುದರಿಂದ ಅತಿಕಡಿಮೆಗೆ ಖರೀದಿಸಿ ಸ್ಮಗ್ಲಿಂಗ್
* ಕಳ್ಳಮಾರ್ಗದಲ್ಲಿ ತಂದ ಅಡಕೆಯನ್ನು ದೇಸಿ ಅಡಕೆಯೊಂದಿಗೆ ಮಿಶ್ರಣ ಮಾಡಿ ಸೇಲ್
* ವಿದೇಶಿ ಅಡಕೆಯಿಂದ ದೇಸಿ ಅಡಕೆ ಮಾರುಕಟ್ಟೆ ಮೇಲೆ ದೊಡ್ಡಮಟ್ಟದಲ್ಲಿ ಪರಿಣಾಮ
ದಿಲ್ಲಿಯ ಕೆಂಪುಕೋಟೆಯಲ್ಲಿ ಸತತ 11ನೇ ಬಾರಿಗೆ ಪ್ರಧಾನಿ ಮೋದಿಯಿಂದ ರಾಷ್ಟ್ರಧ್ವಜಾರೋಹಣ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × four =
Remember me
