ಬೆಂಗಳೂರು:ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ವಿದೇಶಿ ಹಣ ಬಳಕೆಯಾಗಿರುವ ಕುರಿತು ಪೊಲೀಸರಿಗೆ ಅನುಮಾನ ಮೂಡಿದೆ. ಪ್ರಕರಣ ಸಂಬಂಧ ಬಂಧಿತನಾಗಿರುವ ಶಂಕಿತ ಉಗ್ರ ಸಮಿಯುದ್ದೀನ್ ತನ್ನ ಪತ್ನಿ ಹೆಸರಿನಲ್ಲಿ ಸ್ವಯಂಸೇವಾ ಸಂಸ್ಥೆ(ಎನ್​ಜಿಒ) ನಡೆಸುತ್ತಿರುವುದು ಉಗ್ರ ನಿಗ್ರಹ ಪಡೆ (ಎಟಿಎಸ್) ತನಿಖೆಯಲ್ಲಿ ಬೆಳಕಿಗೆ ಬಂದ ಬಳಿಕ ಈ ಸಂಶಯ ಕಾಡಿದ್ದು, ಉಗ್ರರ ದೇಣಿಗೆ ಆಯಾಮದಲ್ಲೂ ತನಿಖೆ ಮುಂದುವರಿದಿದೆ.
ಮಡಿಕೇರಿ ಮೂಲದ ಸಮಿಯುದ್ದೀನ್, ಎಚ್​ಬಿಆರ್ ಲೇಔಟ್​ನಲ್ಲಿ ಪತ್ನಿ ಮುಂದಾಳತ್ವದಲ್ಲಿ ಎನ್​ಜಿಒ ತೆರೆದಿದ್ದಾನೆ. ಈ ಎನ್​ಜಿಒಗೆ ದೇಣಿಗೆ ರೂಪದಲ್ಲಿ ವಿದೇಶ ದಿಂದ ಕೋಟ್ಯಂತರ ರೂ. ಹಣ ಹರಿದು ಬಂದಿದೆ. ಈ ಹಣವನ್ನು ಉಗ್ರ ಚಟುವಟಿಕೆಗೆ ಬಳಸಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದು, ಸಮಿಯುದ್ದೀನ್​ನ ಮತ್ತು ಎನ್​ಜಿಒ ಬ್ಯಾಂಕ್ ಖಾತೆ ವಿವರ ಪಡೆದು ಹಣದ ಮೂಲ, ಹಣ ಬಂದ ಸಮಯದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಮತ್ತೊಂದೆಡೆ ಸಮಿಯುದ್ದೀನ್, ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವವರನ್ನು ಭೇಟಿ ಮಾಡಿರುವುದು ದೃಢಪಟ್ಟಿದೆ. ನಗರದಲ್ಲಿ ತಮಿಳುನಾಡು ಮೂಲದ ಅಲ್ ಉಮ್ಮಾ, ಅಲ್ ಹಿಂದ್ ಹಾಗೂ ಇಂಡಿಯನ್ ಮುಜಾಹಿದೀನ್ ಸಂಘಟನೆಗಳು ಸಕ್ರಿಯವಾಗಿರುವುದು ಎನ್​ಐಎ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಈ ಉಗ್ರ ಸಂಘಟನೆಗಳಿಗೆ ಕಾರ್ಯಕರ್ತರ ನೇಮಕ ಮತ್ತು ಸಂಘಟನೆ ಬಲಗೊಳಿಸಲು ಸ್ಥಳೀಯರು ಶ್ರಮಿಸುತ್ತಿರುವುದು ಗೊತ್ತಾಗಿತ್ತು. ಈ ಕೆಲಸಕ್ಕೆ ಎನ್​ಜಿಒ ನೆಪದಲ್ಲಿ ವಿದೇಶಿ ದೇಣಿಗೆ ಪಡೆದು ಬಳಸಲಾಗಿತ್ತೇ ಎಂಬ ಪ್ರಶ್ನೆ ಎದ್ದಿದೆ. ಆ.11ರಂದು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಗೆ ಮೊದಲೇ ಪೂರ್ವಭಾವಿಯಾಗಿ ದೊಡ್ಡ ಸಂಚು ರೂಪಿಸಿರುವುದಕ್ಕೆ ಸಾಕಷ್ಟು ಸಾಕ್ಷ್ಯ ಲಭ್ಯವಾಗಿವೆ. ಇದರ ಜಾಡು ಹಿಡಿದು ತನಿಖೆ ನಡೆಸಿದಾಗ ಉಗ್ರ ಬೆಂಬಲಿತರ ಫಂಡ್ ಲಿಂಕ್ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
7 ವರ್ಷಗಳಿಂದ ಟ್ರಸ್ಟ್
ಆರೋಪಿ ಸಮಿಯುದ್ದೀನ್ ಮತ್ತು ಆತನ ಪತ್ನಿ 7 ವರ್ಷಗಳಿಂದ ಎನ್​ಜಿಒ ನಡೆಸುತ್ತಿದ್ದಾರೆ. ರಾಜಕಾರಣಿಗಳು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳನ್ನು ಕರೆಸಿ ಶಾಲಾ-ಕಾಲೇಜು ಮತ್ತು ಸಾರ್ವಜನಿಕವಾಗಿ ಕಾರ್ಯಕ್ರಮ ಆಯೋಜಿಸುತ್ತಿದ್ದರು.
ವಿಡಿಯೋ ಸುಳಿವು
ಆ.11ರ ಗಲಭೆಗೆ ಮೊದಲು ಹಣ ಹಂಚಿಕೆಯಾಗುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಗಲಭೆಕೋರರಿಗೆ ಹಣ ಕೊಟ್ಟು ನಗರದ ವಿವಿಧೆಡೆಯಿಂದ ಯುವಕರನ್ನು ಕರೆಸಲಾಗಿದ್ದಕ್ಕೆ ಇದು ಸಾಕ್ಷ್ಯ ಎಂದು ಹೇಳಲಾಗಿತ್ತು. ಇದಕ್ಕೆ ಪುಷ್ಟಿಕೊಡುವಂತೆ ಎನ್​ಜಿಒಗೆ ವಿದೇಶಿ ದೇಣಿಗೆ ಬೆಳಕಿಗೆ ಬಂದಿದೆ. ತನಿಖೆಯಿಂದ ಮತ್ತಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
