ಬೆಂಗಳೂರು:ಕಬ್ಬನ್ ಪಾರ್ಕ್ ಮೆಟ್ರೋ ಸ್ಟೇಷನ್ ಬಳಿ ಕುಡಿದು ಕಾರು ಚಲಾಯಿಸಿದ ಇರಾನ್ ದೇಶದ ಪ್ರಜೆಗೆ ದಂಡ ವಿಧಿಸಿದ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ಕಾರು ವಶಕ್ಕೆ ಪಡೆದಿದ್ದಾರೆ.
ಬುಧವಾರ ರಾತ್ರಿ ಕ್ವೀನ್ಸ್ ರಸ್ತೆಯ ಕಬ್ಬನ್‌ಪಾರ್ಕ್ ಮೆಟ್ರೋ ಸ್ಟೇಷನ್ ಬಳಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಅದೇ ರಸ್ತೆಯಲ್ಲಿ ವೇಗವಾಗಿ ಅಜಾಗರೂಕತೆಯಿಂದ ವೋಕ್ಸ್ ವ್ಯಾಗನ್ ಕಾರೊಂದು ಬಂದಿದ್ದು, ಅದನ್ನು ತಡೆದ ಪೊಲೀಸರು ಪರಿಶೀಲಿಸಿದಾಗ ಇರಾನ್ ದೇಶದ ದಂಪತಿ ಕಾರಿನಲ್ಲಿದ್ದರು. ಚಾಲಕ ಕುಡಿದಿರುವುದು ಪತ್ತೆಯಾಗುತ್ತಿದ್ದಂತೆ ದಂಡ ವಿಧಿಸಿ, ಕಾರು ಜಪ್ತಿ ಮಾಡಿದ್ದಾರೆ.
ಈ ವೇಳೆ ಕಾರು ಮರಳಿಸುವಂತೆ ಇರಾನ್ ಪ್ರಜೆ ಪೊಲೀಸರಿಗೆ ಕೇಳಿಕೊಂಡಿದ್ದ. ಕುಡಿದ ಅಮಲಿನಲ್ಲಿದ್ದ ಆತನ ಪತ್ನಿ ಪೊಲೀಸರ ಬಳಿ ಹೋಗದಂತೆ ಪತಿಯೊಂದಿಗೆ ಜಗಳ ಮಾಡಿದ್ದಾಳೆ. ಇರಾನ್ ದಂಪತಿ ಜಗಳ ಮಾಡುತ್ತಿರುವುದನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.
ಕೋರ್ಟ್‌ನಲ್ಲಿ ದಂಡ ಕಟ್ಟಿ ಕಾರು ಬಿಡಿಸಿಕೊಳ್ಳುವಂತೆ ಪೊಲೀಸರು ಸಲಹೆ ಕೊಟ್ಟಿದ್ದಾರೆ. ಕಾರ್‌ನಲ್ಲಿ ಇಬ್ಬರು ಯುವಕರು ಸೇರಿ ಮೂವರು ಮಹಿಳೆಯರು ಇದ್ದರು ಎಂದು ತಿಳಿದು ಬಂದಿದೆ.
40ನೇ ಜನ್ಮದಿನದಂದು ಎಂಎಸ್ ಧೋನಿ ಹೊಸ ಲುಕ್ ವೈರಲ್!

ನಮೋ 2.0 ಸಂಪುಟ ವಿಸ್ತರಣೆ: ಮೋದಿ ಸಂಪುಟದಲ್ಲಿ 11 ಮಹಿಳೆಯರಿಗೆ ಸ್ಥಾನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 − 3 =
Remember me
