ಬೆಂಗಳೂರು: ಬೆಂಗಳೂರಿನಲ್ಲೇ ನೆಲೆಸಿರುವ ಕರಾವಳಿಗರಲ್ಲದೆ, ಇತರೆ ಭಾಗದ ಮಂದಿ ಕುತೂಹಲದಿಂದ ಕಂಬಳ ನೋಡಲು ಬಂದಿದ್ದರು. ಅದರಲ್ಲೂ ವಿದೇಶಿಗರಂತು ಕೋಣಗಳ ಓಟ ಕಂಡು ಪುಳಕಿತರಾದರು. ವಿವಿಧ ಕಾರಣಕ್ಕೆ ಬೆಂಗಳೂರಿಗೆ ಭೇಟಿ ನೀಡುವ ವಿದೇಶಿಗರ ಸಂಖ್ಯೆ ಹೆಚ್ಚಿದೆ.
ಸದ್ಯ ನಗರದ ವಿವಿಧ ಹೋಟೆಲ್​ಗಳಲ್ಲಿ ತಂಗಿದ್ದ ವಿದೇಶಿ ಮಂದಿಗೆ, ಇಲ್ಲೇ ಹತ್ತಿರದಲ್ಲಿ ಕಂಬಳ ನಡೆಯುತ್ತಿದೆ ಎಂಬ ವಿಷಯ ಗೊತ್ತಾಗಿದೆ. ಹೀಗಾಗಿ ಕೋಣಗಳ ಓಟ ಹೇಗಿರುತ್ತದೆ ಎಂಬುದನ್ನು ಕಾಣಲು ಅರಮನೆ ಮೈದಾನಕ್ಕೆ ಆಗಮಿಸಿದ್ದರು. ನೆದರ್​ಲೆಂಡ್​, ಇಂಗ್ಲೆಂಡ್​, ಫ್ರಾನ್ಸ್​, ಜರ್ಮನಿ, ಅಮೆರಿಕಾ ದೇಶದ ಮಂದಿ ಕಂಬಳವನ್ನು ಕಣ್ತುಂಬಿಕೊಂಡರು. ಜತೆಗೆ ಕೋಣಗಳ ಓಟವನ್ನು ಸೆರೆಹಿಡಿಯಲು ಕೆಲ ವಿದೇಶಿ ೋಟೋಗ್ರಾರ್​ಗಳು ತಮ್ಮ ಭಾರತೀಯ ಸ್ನೇಹಿತರೊಂದಿಗೆ ಆಗಮಿಸಿದ್ದರು.
ಕಂಬಳ ಮೈದಾನದ ಒಳಭಾಗಕ್ಕೆ ಆಗಮಿಸುತ್ತಿದ್ದಂತೆ ಕರಾವಳಿ ಭಾಗದ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟಂತಹ ಅನುಭವವಾಗುತ್ತದೆ. ಸಿನಿಮಾ, ಸಾಮಾಜಿಕ ಜಾಲತಾಣದ ಮೂಲಕ ಕಂಬಳವನ್ನು ಕಂಡಿದ್ದ ಮಂದಿ, ಇದೇ ಮೊದಲ ಬಾರಿಗೆ ನೇರವಾಗಿ ಕೋಣಗಳ ಓಟವನ್ನು ಕಣ್ತುಂಬಿಕೊಂಡರು. ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಜನರು ಆಶ್ಚರ್ಯ ಪಟ್ಟಿದ್ದರು. ರಾಜಧಾನಿಯಲ್ಲಿ ನೆಲೆಸಿರುವ ಕರಾವಳಿ ಭಾಗದ ಮಂದಿಯಲ್ಲಿ, ಅರ್ರೆ, ನಮ್ಮೂರಿನಲ್ಲಿ ನಡೆಯುವ ಜಾನಪದ ಕ್ರೀಡೆ, ಇಲ್ಲಿ ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದ್ದು, ಬೆಂಗಳೂರು ಕಂಬಳಕ್ಕೆ ಮೊದಲ ದಿನ ಬೆಳಗ್ಗಿನಿಂದಲೇ ಸಾಲು ಸಾಲಾಗಿ ಜನರು ಬಂದಿದ್ದಾರೆ. ಅರಮನೆ ಮೈದಾನದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಕಂಡು ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − eight =
Remember me
