ಬೆಂಗಳೂರು: ಸರ್ಕಾರ, ಆಡಳಿತ ಹಾಗೂ ಪ್ರತಿಪ ಕರೊನಾ ನಿರ್ವಹಣೆ ಮತ್ತು ರಾಜಕೀಯ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದರೆ ರಾಜ್ಯದ ಬರೋಬ್ಬರಿ 6 ಲ ಅರಣ್ಯವಾಸಿಗಳು ಬೀದಿಪಾಲಾಗುವ ಸನ್ನಿ ವೇಶಕ್ಕೆ ಸಿಲುಕಿದ್ದಾರೆ. ಮುಂದಿನ ಒಂದೂವರೆ ತಿಂಗಳಲ್ಲೇ ನ್ಯಾಯಾಲಯದಲ್ಲಿ ರಾಜ್ಯದ ಅರಣ್ಯವಾಸಿಗಳ ಕುರಿತ ಪ್ರಕರಣ ವಿಚಾರಣೆಗೆ ಬರುತ್ತಿದ್ದು, ಈ ಸಂದರ್ಭ ದಲ್ಲಿ ವ್ಯತಿರಿಕ್ತ ತೀರ್ಪು ಬಂದಲ್ಲಿ ನಂತರ ಪರಿಹಾರ ಹುಡುಕುವ ಬದಲು ಈಗಲೇ ಎಚ್ಚೆತ್ತು ಅಗತ್ಯ ಕ್ರಮಕೈಗೊಂಡರೆ ಆಗುವ ಅನಾಹುತ ತಪ್ಪಿಸಬಹುದಾಗಿದೆ. ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಈಗಾಗಲೇ ನ್ಯಾಯಾ ಲಯದಲ್ಲಿ ಹೋರಾಟ ನಡೆಸುತ್ತಿದ್ದು, ಸರ್ಕಾರದ ಕಣ್ಣು ತೆರೆಸಲೂ ಸಹ ಪ್ರಯತ್ನ ನಡೆಸಿದೆ.
| ಶ್ರೀಕಾಂತ್​ ಶೇಷಾದ್ರಿ
ಹರಿಯಾಣ ಆತಂಕ:ಸುಪ್ರಿಂಕೋರ್ಟ್​ ಜೂನ್​ 7ರಂದು ಹರಿಯಾಣದ ಅರಣ್ಯ ವಾಸಿಗಳ ಕುರಿತು ಆದೇಶ ನೀಡಿದ್ದು, ಅರಣ್ಯ ಪ್ರದೇಶದಲ್ಲಿನ 10 ಸಾವಿರ ಮನೆಗಳನ್ನು ಅನಧಿಕೃತ ಎಂದು ಘೋಷಿಸಿತು. ಜತೆಗೆ ಯಾವುದೇ ಕಾರಣಕ್ಕೂ ಅತಿಕ್ರಮಣದಾರರ ವಿಚಾರದಲ್ಲಿ ರಾಜೀಯೇ ಇಲ್ಲ. ಸಹಾನುಭೂತಿಯ ಅಗತ್ಯವೂ ಇಲ್ಲ ಎಂದು ಹೇಳಿತು. ಇದು ನಮಗೂ ಆಘಾತ ತಂದಿದೆ ಎಂದು ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಪ್ರಮುಖರಾದ ರವೀಂದ್ರ ನಾಯ್ಕ್​ ವಿಜಯವಾಣಿಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಗೊಂದಲ ಸೃಷ್ಟಿ:ರಾಜ್ಯದಲ್ಲಿ ಅಂದಾಜು 6 ಲ ರಾಜ್ಯದಲ್ಲಿ ಅರಣ್ಯವಾಸಿಗಳು ಇದ್ದಾರೆ. 2.67 ಲಕ್ಷ ಮಂದಿ ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ಹಾಕಿದ್ದಾರೆ, 2.40 ಲಕ್ಷ ಅರ್ಜಿ ತಿರಸ್ಕಾರಗೊಂಡಿವೆ. ಸರ್ಕಾರವೇ ಸುಪ್ರಿಂಕೋರ್ಟ್​ಗೆ ಹಾಕಿಕೊಂಡ ಪ್ರಮಾಣದಲ್ಲಿ ಈ ಸಂಗತಿ ಪ್ರಸ್ತಾಪವಾಗಿದೆ. ಇಡೀ ದೇಶದಲ್ಲಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ತಿರಸ್ಕಾರ ಆಗಿರುವ ಕುರಿತು ಹಾಗೂ ಅಲ್ಲಿ ಅರಣ್ಯೀಕರಣ ಆಗಬೇಕಾಗಿದೆ ಎಂದು ಎಂಟು ಪರಿಸರ ಸಂಬಂಧಿ ಎನ್​ಜಿಒಗಳು 2008ರಲ್ಲಿ ಸುಪ್ರಿಂಗೆ ರಿಟ್​ ಪಿಟಿಶನ್​ ಅಲ್ಲಿಸಿತ್ತು. ಈ ವೇಳೆ ರಾಜ್ಯ ಸರ್ಕಾರವು ಪ್ರಮಾಣ ಪತ್ರ ಸಲ್ಲಿಸಿ, ಅನರ್ಹರನ್ನು ಹಂತಹಂತವಾಗಿ ಹೊರಹಾಕುತ್ತೆವೆ ಎಂದು ಪ್ರಮಾಣ ಪತ್ರ ಸಲ್ಲಿಸಿತ್ತು.ಬಳಿಕ ಸರ್ಕಾರ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯವಾಸಿಗಳಿಂದ ಅರ್ಜಿ ಸ್ವೀಕರಿಸಿ ಅರ್ಹರು& ಅನರ್ಹರನ್ನು ಬೇರ್ಪಡಿಸುವ ಕಾರ್ಯ ಮಾಡಿತಾದರೂ ಪರಿಣಾಮಕಾರಿಯಾಗಿ ನಡೆಯಲೇ ಇಲ್ಲ.
ಈ ನಡುವೆ 2019ರ ೆಬ್ರವರಿ 12ರಂದು ನ್ಯಾಯಾಲಯವರು ಮಧ್ಯಂತರ ಆದೇಶ ಕೊಟ್ಟು, ಜುಲೈ ಒಳಗೆ ಅನರ್ಹರನ್ನು ಹೊರಗೆ ಹಾಕಿ ಎಂದು ಸಮಯ ನಿಗದಿ ಮಾಡಿತು. ತದ ನಂತರ ಕೇಂದ್ರ ಸರ್ಕಾರ ಅವ್ಯವಸ್ಥೆ ಗಮನಿಸಿ 2019ರ ಮಾರ್ಚ್​ ಮೊದಲ ವಾರದಲ್ಲಿ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪುನರ್​ ಪರಿಶೀಲನೆ ಮಾಡಬೇಕಾಗಿದೆ, ಇನ್ನೊಮ್ಮೆ ಅವಕಾಶ ಕೊಡಿ ಎಂದು ನ್ಯಾಯಾಲಯವನ್ನು ಕೋರಿತ್ತು. ರಾಜ್ಯದಲ್ಲೂ ಸಹ ಅರಣ್ಯ ಹಕ್ಕು ಕಾನೂನು ಅನುಷ್ಠಾನದಲ್ಲಿ ಸಾಕಷ್ಟು ವೈಲ್ಯ ಇತ್ತು. ಕಾನೂನು ಬದ್ಧವಾಗಿ ಅರ್ಜಿದಾರರ ವಿಚಾರಣೆ ನಡೆಯುತ್ತಿರಲಿಲ್ಲ. ಮೂರು ತಲೆ ಮಾರಿನ ದಾಖಲೆ ಬೇಕೆಂದು ಒಂದೇ ದಿನ ಸಾವಿರಾರು ಅರ್ಜಿ ತಿರಸ್ಕಾರ ಮಾಡಿರುವುದು ಸಹ ಕೇಂದ್ರ ಸರ್ಕಾರದ ಗಮನಕ್ಕೆ ಬಂದಿತ್ತು. ಹೀಗಾಗಿ ಕೇಂದ್ರ ಮಧ್ಯ ಪ್ರವೇಶಿಸಿತ್ತು. ಜತೆಗೆ 18 ತಿಂಗಳಲ್ಲಿ ಅರಣ್ಯ ವಾಸಿಗಳ ಅರ್ಜಿಯನ್ನು ಮತ್ತೊಮ್ಮೆ ಗಮನಿಸಿ ವಿಲೇವಾರಿ ಮಾಡುತ್ತೇವೆಂದು ಸರ್ಕಾರದ ಮುಖ್ಯಕಾರ್ಯದರ್ಶಿಯವರೇ ನ್ಯಾಯಾಲಯಕ್ಕೆ ಅಫಿಡೆವಿಟ್​ ಸಲ್ಲಿಸಿದ್ದರು. ಆ ಬಳಿಕ ಶೇ.5 ಅರ್ಜಿಯೂ ಪರಿಶೀಲನೆ ಆಗಿಲ್ಲ. ಈ ನಡುವೆ ಅರಣ್ಯ ವಾಸಿಗಳ ಪರ ದನಿಯೇ ಇಲ್ಲ ಎಂದಾದಾಗ ಅರಣ್ಯ ವಾಸಿಗಳ ಹೋರಾಟ ಸಮಿತಿ ಹುಟ್ಟಿಕೊಂಡು ನ್ಯಾಯಾಲಯಕ್ಕೆ ಅರ್ಜಿಹಾಕಿ ಒಂದಷ್ಟು ನಿಖರ ವಾಸ್ತವ ಸಂಗತಿಯನ್ನು ಪ್ರಸ್ತಾಪಿಸಿ, ತನ್ನನ್ನೂ ಪ್ರತಿವಾದಿಯಾಗಿ ಮಾಡಬೇಕೆಂದು ಕೋರಿತು. ಅದಕ್ಕೆ ಮಾನ್ಯತೆಯೂ ಸಿಕ್ಕಿತು. ಅಲ್ಲದೆ ಅರಣ್ಯ ವಾಸಿಗಳಿಗೆ ಮನೆಕಟ್ಟಲು ಅವಕಾಶ ನೀಡಿರುವ ಬಗ್ಗೆ ಹಾಗೂ ಸರ್ಕಾರ ಕಲ್ಪಿಸಿರುವ ಮೂಲ ಸೌಕರ್ಯಗಳ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ.
ಸಮಸ್ಯೆ ಎಲ್ಲೆಲ್ಲಿ?ಪ್ರಮುಖವಾಗಿ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಯಲ್ಲಿರುವ ಅರಣ್ಯವಾಸಿಗಳು ಸಮಸ್ಯೆ ಸಿಲುಕುವ ಸಾಧ್ಯತೆ ಇದೆ.

ಸರ್ಕಾರ ಏನು ಮಾಡಬೇಕು?1 ತಡಮಾಡದೇ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಪರಿಹಾರ ಹುಡುಕಬೇಕು.2 ತುರ್ತಾಗಿ ಪುನರ್​ ಪ್ರಮಾಣ ಪತ್ರ ಸಲ್ಲಿಸಿ, ವಾಸ್ತವ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತರಬೇಕು.3 ಅರಣ್ಯ ಹಕ್ಕು ಅರ್ಜಿಗಳನ್ನು ವಿಲೇವಾರಿ ಮಾಡುವ ಕಾರ್ಯಕ್ಕೆ ಆದ್ಯತೆ ಕೊಡಬೇಕು.4 ಅರಣ್ಯವಾಸಿಗಳೆಂಬುದನ್ನು ಸಾಬೀತು ಮಾಡಲು ಹಾಕಿದ ಷರತ್ತಿನ ಕುರಿತು ಇರುವ ಗೊಂದಲಗಳನ್ನು ಸ್ಪಷ್ಟಮಾಡಬೇಕು.5 ಒಂದು ವೇಳೆ ಭೂಮಿ ಕಳೆದುಕೊಳ್ಳುವವರಿದ್ದರೆ ಅವರಿಗೆ ಸರ್ಕಾರವೇ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು.6 ಅರಣ್ಯ ಹಕ್ಕು ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಮತ್ತು ತಪ್ಪು ಕಲ್ಪನೆಗಳನ್ನು ಹೊಂದಿರುವ ಸ್ಥಳಿಯ ಸರ್ಕಾರಿ ಅಧಿಕಾರಿಗಳಿಗೆ ಮೊದಲು ಜಾಗೃತಿ ಮೂಡಿಸಬೇಕು.7 ಅರಣ್ಯ ವಾಸಿಗಳನ್ನು ರಸಲು ರಾಷ್ಟ್ರೀಯ ನೀತಿ ಜಾರಿ ಮಾಡುವ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರಬೇಕು.

| ರವೀಂದ್ರ ನಾಯ್ಕ್​ ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಅಧ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fifteen =
Remember me
