ಹಾಸನ:ವಿಶ್ವವಿಖ್ಯಾತ ನಾಡಹಬ್ಬ ದಸರಾದಲ್ಲಿ 8 ಬಾರಿ ಅಂಬಾರಿ ಹೊತ್ತು ತನ್ನದೇ ಆದ ಛಾಪು ಮೂಡಿಸಿ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತಿ ಪಡೆದಿದ್ದ ಸಾಕಾನೆ ಅರ್ಜುನ ಕಳೆದ ವಾರ ಕಾರ್ಯಾಚರಣೆ ವೇಳೆ ಕಾಡಾಮೆ ದಾಳಿಯಿಂದ ಮೃತಪಟ್ಟಿದ್ದ. ಅರ್ಜುನನ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ವನ್ಯಜೀವಿ ವೈದ್ಯ ರಮೇಶ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ವನ್ಯಜೀವಿ ವೈದ್ಯ ಡಾ. ರಮೇಶ್ ಅರ್ಜುನನ ಕಾಲಿಗೆ ಯಾವುದೇ ಗುಂಡೇಟು ಬಿದ್ದಿಲ್ಲ. ಕಾಡಾನೆ ದಾಳಿಯಿಂದ ಅರ್ಜುನ ಮೃತಪಟ್ಟಿದ್ದಾನೆ. ಕಾರ್ಯಾಚರಣೆ ನಡೆಯುವ ದಿನ ನಮ್ಮ ಬಳಿ ಯಾವುದೇ ಬಂದೂಕು ಇರಲಿಲ್ಲ. ಜನರು ದಸರಾ ಅಂಬಾರಿ ಹೊತ್ತಾಗ ಮಾತ್ರ ಅರ್ಜುನನ ನೋಡಿರುತ್ತಾರೆ. ನಾವು ನಿತ್ಯ ಅವನ ಜೊತೆ ಇರುವವರು ನಮಗೆ ಆಗಿರುವ ನೋವು ಹೇಳಲು ಆಗಲ್ಲ ಎಂದಿದ್ದಾರೆ.
ಡಿಸೆಂಬರ್​ 04ರಂದು ಕಾರ್ಯಾಚರಣೆಯ ದಿನದಂದು ನಾನು ಮಾವುತ ವಿನು ಹಾಗೂ ಗುಂಡ ಅರ್ಜುನನ ಮೇಲೆ ಕುಳಿತಿದ್ದೆವು. ಪ್ರಶಾಂತ್ ಎಂಬ ಹೆಸರಿನ ಆನೆಯ ಮೇಲೆ ಕೊಡಗಿನ ಡಿಆರ್​ಎಫ್​ಒ ರಂಜನ್​ ಕುಳಿತಿದ್ದರು.  ವಿಕ್ರಾಂತ್ ಹೆಸರಿನ ಒಂದು ಹಾಗೂ ಮತ್ತೊಂದು ಸಲಗ ಸೇರಿ ಎರಡು ಆನೆಗಳ ಸೆರೆಗೆ ಟಾರ್ಗೆಟ್ ಫಿಕ್ಸ್ ಮಾಡಲಾಗಿತ್ತು.
ವಿಕ್ರಾಂತ್​ ಹಾಗೂ ಇನ್ನೊಂದು ಆನೆಗೆ ಅರವಳಿಕೆ ನೀಡಲು ನಾನು ಹಾಗೂ ರಂಜನ್​ ತಯಾರಿ ನಡೆಸಿದ್ದೆವು. ಅದರಂತೆ ನಾವು ಕಾಡು ಪ್ರವೇಶಿಸಿದ ಆನೆಗಳ ಒಂದು ಹಿಂಡು ಕಾಣಿಸಿತ್ತು. ಅದರಲ್ಲಿ ವಿಕ್ರಾಂತ್​ ಆನೆ ಇರಲಿಲ್ಲ. ಸ್ವಲ್ಪ ದೂರು ಮುಂದೆ ಹೋದಾಗ ಒಂದು ಆನೆ ಕಾಣಿಸಿತು. ಕಾಡಿನಲ್ಲಿ ಲಂಟಾನ ಹೆಚ್ಚಾಗಿ ಬೆಳೆದಿದ್ದರಿಂದ ಆನೆಯ ಮುಖ ಸರಿಯಾಗಿ ಕಾಣಲಿಲ್ಲ. ಆದರೆ, ನಮ್ಮ ಮುಂದೆ ಕಾಣುತ್ತಿದ್ದ ಆನೆ ಗಂಡೋ, ಹೆಣ್ಣೋ ಅಥವಾ ಸಣ್ಣ ಆನೆ ಎಂಬುದು ನಮಗೆ ಖಾತ್ರಿಯಾಗಬೇಕಿತ್ತು.
ನಮಗೆ ಅದು ಕಾಡಾನೆ ಎಂದು ಖಾತ್ರಿಯಾದ ತಕ್ಷಣ ನಾವು ಸಾಕಾನೆಗಳ ಸಮೇತ ಅದನ್ನು ಸುತ್ತುವರೆದೆವು. ಅರವಳಿಕೆ ನೀಡಲು ನಾನು ಸಿದ್ದನಾಗುತ್ತಿದ್ದೆ. ಆಗ ಅದು ಏಕಾಏಕಿ ದಾಳಿ ಮಾಡಿದ ಪರಿಣಾಮ ಸರಿಯಾಗಿ ಡಾಟ್​ ಮಾಡಲು ಆಗಲಿಲ್ಲ. ಏಕೆಂದರೆ ಅದು ಮುಖವನ್ನು ಮುಂದೆ ಮಾಡಿ ಬಂದಿದ್ದರಿಂದ ನಾವು ಮುಖ ಹಾಗೂ ಹೊಟ್ಟೆ ಭಾಗಕ್ಕೆ ಡಾಟ್​ ಮಾಡುವ ಹಾಗಿಲ್ಲ. ಏಕೆಂದರೆ ಅದು ಆನೆ ಜೀವಕ್ಕೆ ಅಪಾಯ ತರುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ:ನಮ್ಮ ಪಾಲಿನ ಬಾಕಿ ಹಣ ಬಿಡುಗಡೆ ಮಾಡಿ, ಇಲ್ಲವಾದಲ್ಲಿ ಕುರ್ಚಿ ಖಾಲಿ ಮಾಡಿ: ಮಮತಾ ಬ್ಯಾನರ್ಜಿ
ಆನೆ ದಾಳಿ ಮಾಡಿದಾಗ ನಾವೆಲ್ಲ ಕೆಳಗೆ ಬೀಳುವಂತೆ ಆದೆವು. ಈ ವೇಳೆಯಲ್ಲಿ ನನ್ನ ಕೈಯಲ್ಲಿದ್ದ ಅರವಳಿಕೆ ಟ್ರಿಗರ್ ಆಗಿ ಫೈರ್ ಆಗಿದೆ. ಅದು ಆಕಾಶದ ಕಡೆಗೆ ಹಾರಿ ಕೆಳಗೆ ಬೀಳುವಾಗ ಪ್ರಶಾಂತ್ ಆನೆ ಕಾಲಿಗೆ ಬಿದ್ದಿದೆ. ಅದು ನನಗೆ ಮಾಹಿತಿ ಇರಲಿಲ್ಲ. ಪ್ರಶಾಂತ್​ ಆನೆಗೆ ಅರವಳಿಕೆ ಮದ್ದು ಬಿದ್ದ ಬಗ್ಗೆ ಗೊತ್ತಾದ ಕೂಡಲೆ ನಾವು ಓಡಿದೆವು. ಅಷ್ಟರಲ್ಲಿ ಅರ್ಜುನ ಕಾಡಾನೆ ಜೊತೆ ಫೈಟ್ ಮಾಡಿ ಓಡಿಸಿತು. ನಾವು ಪ್ರಶಾಂತ್ ಆನೆಗೆ ರಿವರ್ಸ್ ಇಂಜೆಕ್ಷನ್ ಕೊಡುವ ವೇಳೆಗೆ ಕಾಡಾನೆ ಮತ್ತೆ ಬಂದು ಅರ್ಜುನನ ಜೊತೆಗೆ ಜಗಳಕ್ಕೆ ಬಿದ್ದಿದೆ.
ನಾವು ವಾಪಸ್ ಬರುವ ವೇಳೆಗೆ ಅಲ್ಲಿ ಎರಡೂ ಆನೆಗಳ ನಡುವೆ ಜಗಳ ಶುರುವಾಗಿತ್ತು. ನಾನು ಮತ್ತೊಂದು ಸುತ್ತು ಅರವಳಿಕೆ ಲೋಡ್ ಮಾಡಿ ಕಾಡಾನೆಗೆ ಹೊಡೆದೆ. ಆದರೆ ಆ ಆನೆ ಕೆಳಗೆ ಬೀಳಲಿಲ್ಲ ಅಷ್ಟೊತ್ತಿಗೆ ಅರ್ಜುನನಿಗೆ ಗಂಭೀರವಾಗಿ ಗಾಯವಾಗಿ ಕೆಳಗೆ ಬಿದ್ದಿದ್ದ. ಈ ಆನೆಗಳ ಕಾಳಗ ಶುರುವಾದಾಗ ಬೇರೆ ಆನೆಗಳು ಹೆದರಿ ಓಡಿವೆ. ಅರ್ಜುನ ತಾನು ಹೋರಾಡಿ ಪ್ರಾಣ ಬಿಡುವ ಮೂಲಕ ನಮ್ಮನ್ನು ಉಳಿಸಿದ್ದಾನೆ.
ಜನರು ದಸರಾ ಸಮಯದಲ್ಲಿ ಮಾತ್ರ ಅರ್ಜುನನ್ನು ನೋಡುತ್ತಾರೆ. ಆದರೆಮ ನಾವು ಪ್ರತಿನಿತ್ಯ ಅವನ ಜೊತೆ ಇರುತ್ತಿದ್ದೆವು ಅವನು ಹೋದ ಮೇಲೆ ನಮಗೆ ಆಗಿರುವ ನೋವು ಹೇಳಿ ತೀರಲಾಗದು. ನಾನು ಇದುವರೆಗೆ 65 ಆನೆ ಸೆರೆ ಕಾರ್ಯಾಚರಣೆ ಮಾಡಿದ್ದೇನೆ. 40 ಆನೆಗಳಿಗೆ ನಾನೇ ಅರವಳಿಕೆ ಡಾಟ್ ಮಾಡಿದ್ದೇನೆ. 7 ಹುಲಿ, 50 ಕ್ಕೂ ಹೆಚ್ಚು ಚಿರತೆ, 10 ಕರಡಿ ಡಾಟ್ ಮಾಡಿದ್ದೇನೆ. ಎಲ್ಲವು ಕೂಡ ಯೋಜನೆಯಂತೆಯೇ ನಡೆಯುತ್ತೆ ಎಂದು ವನ್ಯಜೀವಿ ವೈದ್ಯ ಡಾ. ರಮೇಶ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 10 =
Remember me
