ಶಿವಮೊಗ್ಗ:ನಗರದ ಹೃದಯ ಭಾಗದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಎರಡು ತಾಸು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆಹಿಡಿದರು. ಜನನಿಬಿಡ ಸ್ಥಳದಲ್ಲಿ ಕಾಣಿಸಿಕೊಂಡ ಕರಡಿಯು ವಾಯುವಿಹಾರಿ ತುಕರಾಮ್ ಎಂಬುವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.
ನಗರದ ಗೋಪಾಳದ ನಾಗಚೌಡೇಶ್ಬರಿ ದೇವಸ್ಥಾನದ ಬಳಿ ಕಾಣಿಸಿಕೊಂಡ ಕರಡಿಯು ಬಳಿಕ ಗೋಪಾಲಗೌಡ ಬಡಾವಣೆಯ ಸಾಯಿ ಇಂಟರ್ ನ್ಯಾಷನಲ್ ಹೋಟೆಲ್, ಆನಂತರ ಪೆಟ್ರೋಲ್ ಬಂಕ್, ಚಂದನ ಪಾರ್ಕ್ ಬಳಿ ಕಾಣಿಸಿಕೊಂಡಿತ್ತು. ಬಳಿಕ ಗೋಪಾಲಗೌಡ ಬಡಾವಣೆಯ ಡಿವಿಜಿ ಪಾರ್ಕ್ ಬಳಿ ಖಾಲಿ ನಿವೇಶನದಲ್ಲಿದ್ದ ಪೊದೆಯಲ್ಲಿ ಅಡಗಿಕುಳಿತಿತ್ತು.
ವನ್ಯಜೀವಿ ವಿಭಾಗದ ಡಾ. ವಿನಯ್ ಅವರು ಅರಿವಳಿಕೆ ಮದ್ದು ನೀಡುವ ಮೂಲಕ ಕರಡಿ ಸೆರೆ ಹಿಡಿಯಲು ನೆರವಾದರು. ಸುಮಾರು ಎರಡು ಗಂಟೆಗೂ ಅಧಿಕ ಕಾರ್ಯಾಚರಣೆ ನಡೆಸಿದರು.
ಪೊದೆಯಲ್ಲಿ ಅಡಗಿದ ಕರಡಿಡ್ರೋಣ್ ಮೂಲಕ ಕರಡಿ ಇರುವ ಜಾಗ ಧೃಡಪಡಿಸಿಕೊಂಡು ಅರವಳಿಕೆ ಮದ್ದು ನೀಡಲಾಯಿತು. ಪೊದೆ ಹೆಚ್ಚಿದ್ದ ಕಾರಣ ಮೊದಲ ಪ್ರಯತ್ನ ವಿಫಲಗೊಂಡಿತು. ಬಳಿಕ ಎರಡನೇ ಯತ್ನದಲ್ಲಿ ಯಶಸ್ಸು ಸಿಕ್ಕಿತು.
ಅರಣ್ಯ ಇಲಾಖೆಯ ಸಿಸಿಎಫ್ ಕೆ.ಟಿ.ಹನುಮಂತಪ್ಪ, ಡಿಸಿಎಫ್ ಇ.ಶಿವಶಂಕರ್, ಎಸಿಎಫ್ ಕೆ.ವಿ. ಸುಬ್ರಹ್ಮಣ್ಯ, ಆರ್ ಫ್ ಒ ಸುಧಾಕರ್, ಡಿವೈಆರ್ ಎಫ್ ಒ ನರೇಂದ್ರ ಕುಮಾರ್, ಫಾರೆಸ್ಟರ್ ಉಮೇಶ್ ನಾಯ್ಕ್, ರಮೇಶ್, ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ಐ ಎಂ.ರಘುವೀರ, ಸಿಬ್ಬಂದಿ ರಂಗನಾಥ ಮತ್ತು ಜಿಲಾನ್ ಪಾಶ ಸೇರಿ ವನ್ಯಜೀವಿ ವಿಭಾಗದ ಸಿಬ್ಬಂದಿ ಸೆರೆ ಹಿಡಿಯಲು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.
ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ್ದವರಿಗೆ ಕರಡಿಯನ್ನು ನಾಯಿಗಳು ಅಟ್ಟಿಸಿಕೊಂಡು ಬರುತ್ತಿದ್ದ ದೃಶ್ಯ ಕಂಡಿತ್ತು. ಕೆಲವರು ಬೈಕ್ ಗಳಲ್ಲಿ ಕರಡಿಯನ್ನು ಹಿಂಬಾಲಿಸಿ ಡಿವಿಜಿ ಪಾರ್ಕ್ ಪಕ್ಕದ ಖಾಲಿ‌ ನಿವೇಶನದ ಪೊದೆಯಲ್ಲಿ ಅಡಗಿಕೊಂಡಿದ್ದನ್ನು ದೃಢಪಡಿಸಿಕೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಕರಡಿ ಸೆರೆ ಹಿಡಿಯುವ ಕಾರ್ಯಾಚರಣೆ ವೀಕಿಸಲು ನೂರಾರು ಜನರು ನೆರೆದಿದ್ದರು. ಕೊನೆಗೂ ಕರಡಿ ಸೆರೆಯಾದ ಬೆನ್ನಲ್ಲೆ ಅರಣ್ಯ ಇಲಾಖೆ ಪರ ಜೈಕಾರ ಮೊಳಗಿಸಿದರು.
ಕಾರ್ಯಾಚರಣೆ ಕುರಿತು ಮಾತನಾಡಿದ ಡಿಸಿಎಫ್ ಇ.ಶಿವಶಂಕರ್, ಶೆಟ್ಟಿ ಹಳ್ಳಿ ವನ್ಯಜೀವಿ ವಿಭಾಗ ಸನಿಹದಲ್ಲಿದ್ದು ಅಲ್ಲಿಂದ ಬಂದಿರುವ ಸಾಧ್ಯತೆ ಇದೆ. ಆರರಿಂದ ಎಂಟು ವರ್ಷದ ಕರಡಿ ಇದಾಗಿದ್ದು ಅರಳವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಅದರ ಆರೋಗ್ಯ ಸ್ಥಿತಿ ಗಮನಿಸಿ ಅರಣ್ಯಕ್ಕೆ ಬಿಡಬೇಕೋ ಅಥವಾ ಹುಲಿ ಮತ್ತು ಸಿಂಹಧಾಮಕ್ಕೆ ಬಿಡಬೇಕೋ ಎಂಬುದನ್ನು ನಿರ್ಧರಿಸಲಾಗುವುದು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seven =
Remember me
