
ಬೆಂಗಳೂರು:ಪರಿಸರ ಸಮತೋಲನವಾಗಿರಬೇಕಾದರೆ, ಒಟ್ಟು ಭೂ ಭಾಗದಲ್ಲಿ ಶೇ.33ರಷ್ಟು ಅರಣ್ಯವಿರಬೇಕು. ರಾಜ್ಯದಲ್ಲಿ ಈಗಿರುವ ಶೇ.22 ರಷ್ಟು ಅರಣ್ಯವನ್ನು ಪ್ರತಿ ವರ್ಷವೂ ಹೆಚ್ಚಳ ಮಾಡಲು ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.ಅರಣ್ಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ 2022 ಮತ್ತು 2023 ನೇ ಸಾಲಿನ ಪದಕ ಪ್ರದಾನ ಮಾಡಿ ಮಾತನಾಡಿದರು.ಪ್ರತಿ ವರ್ಷ ಮೂರ‌್ನಾಲ್ಕು ಕೋಟಿ ಸಸಿಗಳನ್ನು ನೆಡುವುದಾಗಿ ಹೇಳುತ್ತಿದ್ದೀರಿ. ಅವುಗಳನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಅರಣ್ಯ ಒತ್ತುವರಿಯಾದ ಮೇಲೆ ಬಿಡಿಸುವುದು ಕಷ್ಟ. ಆದ್ದರಿಂದ ಅರಣ್ಯ ಒತ್ತುವರಿ ಆಗದಂತೆ ಮೊದಲೇ ತಡೆಯಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಕಾಡು ಪ್ರಾಣಿಗಳಿಗೆ ಆಹಾರ, ಮೇವು ಮತ್ತು ನೀರು ಕಾಡಿನ ಒಳಗೇ ಅಗತ್ಯವಿದ್ದಷ್ಟು ದೊರೆತರೆ ಅವು ಕಾಡಿನಿಂದ ಹೊರಗೆ ಬರುವುದಿಲ್ಲ. ಆಗ ಮಾನವ-ಪ್ರಾಣಿ ಸಂಘರ್ಷಕ್ಕೆ ತಡೆ ಬೀಳುತ್ತದೆ. ಜೀವ ಹಾನಿಯಾದಾಗ ಸಂತ್ರಸ್ತರಿಗೆೆ 15 ಲಕ್ಷ ರೂ, ಇಲಾಖೆ ಸಿಬ್ಬಂದಿಗಳಾದರೆ 50 ಲಕ್ಷ ರೂ ಪರಿಹಾರ ಕೊಡಬಹುದು. ಆದರೆ ಅದು ಜೀವ ತಂದುಕೊಡುವುದಿಲ್ಲ. ಆದ್ದರಿಂದ ಜೀವ ಉಳಿಸುವ ನಿಟ್ಟಿನಲ್ಲಿಯೂ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಆದ್ಯತೆ ಕ್ರಮ ತೆಗೆದುಕೊಳ್ಳಬೇಕು ಎಂದರು.ಅರಣ್ಯ ಸಂಪತ್ತಿನ ಸಂರಕ್ಷಣೆಯ ಮಹತ್ವ ಅರಿತಿದ್ದ ಇಂದಿಗಾಂಧಿ ಅವರು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದ್ದರಿಂದ ಇಷ್ಟಾದರೂ ಕಾಡು ಉಳಿಯಲು ಸಾಧ್ಯವಾಗಿದೆ ಎಂದು ಶ್ಲಾಸಿದರು.ಪ್ರಕೃತಿ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆ. ಆದರೆ ದುರಾಸೆಗಳನ್ನು ಅಲ್ಲ ಎಂದು ಮಹಾತ್ಮಗಾಂಧಿ ಹೇಳಿದ್ದಾರೆ. ಇವತ್ತಿನ ಪರಿಸರದ ಅನಾಹುತಗಳಿಗೆ ಮನುಷ್ಯನ ದುರಾಸೆಯೇ ಕಾರಣ ಎಂದು ಹೇಳಿದರು.ಇನ್ನು ಮುಂದೆ ಆಯಾ ವರ್ಷದ ವರ್ಷದ ಪದಕಗಳನ್ನು ಆಗಲೇ ವಿತರಿಸಬೇಕು ಎಂದು ಸೂಚನೆ ನೀಡಿದ ಸಿಎಂ, ಪ್ರಶಸ್ತಿ ಸ್ವೀಕರಿಸಿದವರು ಸಮಾಜಕ್ಕೆ ಸ್ಪೂರ್ತಿಯಾಗಲಿ ಎಂದು ಹಾರೈಸಿದರು.7 ಕೋಟಿ ಜನರಲ್ಲಿ ಶೇ.1ರಷ್ಟು ಅಂದರೆ, 7 ಲಕ್ಷ ಜನರು ಸರ್ಕಾರಿ ನೌಕರರಿದ್ದಾರೆ. ಇಂದು 267 ವಾಚರ್ ಹುದ್ದೆಗಳಿಗೆ ಇಂದೇ ನೇಮಕಾತಿ ಆದೇಶ ಪತ್ರ ಪಡೆಯುತ್ತಿರುವ ಭಾಗ್ಯಶಾಲಿಗಳು ನೀವಾಗಿದ್ದೀರಿ. ಅಷ್ಟೆ ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದರು.ಸಚಿವ ಈಶ್ವರ್ ಖಂಡ್ರೆಯವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಇವರಿಗೆ ನಿಮ್ಮ ಸಂಪೂರ್ಣ ಸಹಕಾರ ಸಿಕ್ಕರೆ ಇನ್ನಷ್ಟು ಕ್ರಾಂತಿಕಾರಕ ಕೆಲಸ ಮಾಡಲು ಸಾಧ್ಯವಿದೆ ಎಂದರು.ವನ್ಯಜೀವಿ ಮತ್ತು ಅರಣ್ಯ ಸಂಪತ್ತು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಆಫ್ರಿಕಾ ಬಿಟ್ಟರೆ ಅತಿ ಹೆಚ್ಚು ಅರಣ್ಯ ಪ್ರಾಣಿ ಸಂಪತ್ತು ಇರುವುದು ಭಾರತದಲ್ಲೇ ಎನ್ನುವುದು ಹೆಮ್ಮೆ. ಹಾಗೆಯೇ ಅರಣ್ಯದ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ. ಅರಣ್ಯ ಸಂಪತ್ತು ಕಾಪಾಡುವ ವಿಚಾರದಲ್ಲಿ ಪದಕ ಪುರಸ್ಕತರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ ಎಂದರು.ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸಚಿವರಾದ ಈಶ್ವರ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಉಪಸ್ಥಿತರಿದ್ದರು.ನಾನಾ ವಿಭಾಗದಲ್ಲಿ 25 ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಪದಕವನ್ನು ಸಿಎಂ ಪ್ರದಾನ ಮಾಡಿದರು.
ಪೋಟೋ-ಸಿಎಂ ಾರೆಸ್ಟ್
ಬಾಕ್ಸ್:
ಸಿಎಂ ಸಿದ್ದರಾಮಯ್ಯ ಹೇಳಿದ್ದು…
-ನಮ್ಮ ಭಾಷೆಯಲ್ಲಿ 267 ಅಂಕಿಯನ್ನು ಇನ್ನೂರ ಅರವತ್ತೇಳು ಎನ್ನುತ್ತೇವೆ. ಆದರೆ ಈಶ್ವರ ಖಂಡ್ರೆ ಅವರು ಅದನ್ನು ಬೀದರ್ ಭಾಷೆಯಲ್ಲಿ ಎರಡು ನೂರ ಅರವತ್ತೇಳು ಎನ್ನುತ್ತಾರೆ ಅಷ್ಟೆ ಎಂದಾಗ ಸಭೆ ನಗೆಗಡಲಿನಲ್ಲಿ ಮುಳುಗಿತು.
-ರಾಜ್ಯದಲ್ಲಿ ಶೇ.20ರಷ್ಟು ಮಾತ್ರ ಅರಣ್ಯ ಇದೆ ಎನ್ನುವ ಮಾಹಿತಿ ನನಗಿದೆ. ಆದರೆ, ಸಚಿವರಾದ ಈಶ್ವರ ಖಂಡ್ರೆ ಮಾತು ನಂಬುವುದಾದರೆ ಶೇ.22ರಷ್ಟು ಅರಣ್ಯ ಇದೆ. ಈ ಪ್ರಮಾಣ ಪ್ರತಿ ವರ್ಷ ಶೇ.1ರಷ್ಟಾದರೂ ಹೆಚ್ಚಾಗಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 15 =
Remember me
