|ಮೃತ್ಯುಂಜಯ ಕಪಗಲ್ಬೆಂಗಳೂರು
ವಿದ್ಯುತ್ ಕ್ಷೇತ್ರದ ಮೇಲೆ ಖಾಸಗಿ ಏಕಸ್ವಾಮ್ಯ ತಪ್ಪಿಸಿ, ಸ್ಪರ್ಧಾತ್ಮಕ ದರ, ಕಾರ್ಯದಕ್ಷತೆಗಾಗಿ ಜನಸ್ನೇಹಿ ‘ವಿದ್ಯುತ್ ಉತ್ಪಾದನಾ ನೀತಿ’ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಸಂಘಗಳ ಒಕ್ಕೂಟ, ತಾಂತ್ರಿಕ ತಜ್ಞರು ಹಾಗೂ ಸಾರ್ವಜನಿಕ ಹಿತ ಬಯಸುವವರು ಬಜೆಟ್ ಪೂರ್ವ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅಲ್ಲದೆ, ಕೆಪಿಸಿಎಲ್ ಉಳಿಸಿ ಆಂದೋಲನಕ್ಕೂ ವೇದಿಕೆ ಸಜ್ಜುಗೊಳಿಸಿದೆ. ವಿವಿಧ ಕ್ಷೇತ್ರಗಳ ಗಣ್ಯರು, ತಜ್ಞರು, ಜನಪರ ಕಾಳಜಿಯುಳ್ಳವರನ್ನು ಸಂರ್ಪಸಿ ಅಭಿಪ್ರಾಯ ರೂಪಿಸುವ ಪ್ರಯತ್ನ ನಡೆದಿದೆ. ನಿಗಮದ ಅಧಿಕಾರಿಗಳು, ನೌಕರರು ಹಾಗೂ ಕಾರ್ವಿುಕರ ಹಿತರಕ್ಷಣೆಯೊಂದೇ ಕೆಪಿಸಿಎಲ್ ರಕ್ಷಣೆ ಅಭಿಯಾನದ ಗುರಿಯಲ್ಲ, ಸಾರ್ವಜನಿಕರ ಹಿತವೂ ಅಡಗಿದೆ. ಸಾರ್ವಜನಿಕ ವಲಯದ ಉದ್ಯಮವು ಜನರ ಹಿತರಕ್ಷಣೆ ಜತೆಗೆ ಸದ್ಯೋಭವಿಷ್ಯತ್ತಿನಲ್ಲಿ ಖಾಸಗಿ ಯವರು ಪರಿಸ್ಥಿತಿ ದುರ್ಲಾಭ ಪಡೆಯವುದನ್ನು ನಿಯಂತ್ರಿ ಸಲು ಸಾಧ್ಯವೆಂಬ ವಾದವನ್ನು ಒಕ್ಕೂಟ ಮಂಡಿಸಿದೆ.
ಆರ್ಥಿಕ ಮುಗ್ಗಟ್ಟು:ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕಾಗಿ ವಿವಿಧ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಕೆಪಿಸಿಎಲ್ ಪಡೆದ ಸಾಲದ ಮೊತ್ತ 40,000 ಕೋಟಿ ರೂ.ಗಳಿಗೇರಿದೆ. ಅದೇ ಕಾಲಕ್ಕೆ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳು 22,000 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಎನ್​ಟಿಪಿಸಿಗೆ ಕೇಂದ್ರ ಸರ್ಕಾರ ನಗದುಪತ್ರ ನೀಡುತ್ತದೆ. ಅದೇ ಮಾದರಿಯಲ್ಲಿ ಕೆಪಿಸಿಎಲ್​ಗೆ ಸರ್ಕಾರ ಬಜೆಟ್ ಬೆಂಬಲ ಒದಗಿಸಿದರೆ, ಬಿಕ್ಕಟ್ಟು ಬಗೆಹರಿಯಲಿದೆ. ಜತೆಗೆ ಕಲ್ಲಿದ್ದಲು, ಅನಿಲ ಹಾಗೂ ಬ್ಯಾಂಕ್​ಗಳು ವಿಧಿಸುವ ಬಡ್ಡಿ ದರ ತಗ್ಗಿಸಬೇಕೆಂದು ಕೇಂದ್ರದ ಮನವೊಲಿಸುವುದು ಮತ್ತೊಂದು ಪರಿಹಾರ ಮಾರ್ಗವಾಗಿದೆ ಎಂದು ಒಕ್ಕೂಟ ಸಲಹೆ ನೀಡಿದೆ. ಶಾಖೋತ್ಪನ್ನ ಸ್ಥಾವರಗಳ ಕಾರ್ಯ ಮತ್ತು ಪಾಲನೆ ಖಾಸಗೀಕರಣ ರದ್ದುಪಡಿಸಿ, ನಿಗಮದಲ್ಲಿ ಲಭ್ಯ ನುರಿತ, ಅನುಭವಿ ಮಾನವ ಸಂಪನ್ಮೂಲ ಬಳಸಿಕೊಳ್ಳಬೇಕು. ಇದರಿಂದ ನಿಗಮ ಉಳಿಯಲಿದೆ, ಸರ್ಕಾರಕ್ಕೂ ಹೆಚ್ಚಿನ ಖರ್ಚು ಬೀಳದು ಎಂದು ಸಿಎಂ, ಇಂಧನ ಸಚಿವರಿಗೆ ಒಕ್ಕೂಟ ವಿವರಿಸಿದೆ.
ಯಲಹಂಕ ಸಮಸ್ಯೆ ಪರ್ಯಾಯ ಪರಿಹಾರ:ಯಲಹಂಕ ಅನಿಲ ಆಧಾರಿತ 370 ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸ್ಥಾವರ ಕಳೆದ ನವೆಂಬರ್​ನಿಂದಲೇ ಕಾರ್ಯಾ ರಂಭಿಸಬೇಕಿತ್ತು. ಆದರೆ ಅನಿಲ ದರ ಏರಿಕೆಯಾಗಿ ಪ್ರತಿ ಯೂನಿಟ್​ಗೆ 8-9 ರೂ.ಗಳಾಗುತ್ತದೆ ಎಂಬ ಕಾರಣಕ್ಕೆ ಹಿಂಜರಿಯಲಾಗುತ್ತಿದೆ. ಪ್ರತಿ ಯೂನಿಟ್ ದರ ದುಬಾರಿ ಎಂಬ ನೆಪವೊಡ್ಡಿ ಸ್ಥಗಿತ ಸ್ಥಿತಿಯಲ್ಲಿ ಇರಿಸಿದರೆ 2,500 ಕೋಟಿ ರೂ. ಹೂಡಿಕೆ ವ್ಯರ್ಥವಾಗಲಿದೆ. ಈ ಘಟಕದಲ್ಲಿ ಉತ್ಪಾದಿತ ವಿದ್ಯುತನ್ನು ಮೆಟ್ರೋ, ಬಿಎಚ್​ಇಎಲ್​ನಂತಹ ದೊಡ್ಡ ಸಂಸ್ಥೆಗಳಿಗೆ ನೇರ ಮಾರಾಟಕ್ಕೆ ಅನುಮತಿ ನೀಡಿ ಪರ್ಯಾಯ ಪರಿಹಾರ ಕ್ರಮಕೈಗೊಳ್ಳಬಹುದಾಗಿದೆ ಎಂದು ಒಕ್ಕೂಟ ಸಲಹೆ ನೀಡಿದೆ.
ನವರತ್ನ ಕಂಪನಿಗಳಲ್ಲಿ ಒಂದಾಗಿರುವ ಕೆಪಿಸಿಎಲ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಬದ್ಧತೆ ತೋರಿಸಬೇಕು. ಖಾಸಗೀಕರಣ ಕೈಬಿಟ್ಟರೆ ನಾಗರಿಕರ ಮೇಲೆ ಅನಗತ್ಯ ಹೊರೆ ತಪ್ಪಲಿದೆ.
|ಎಚ್.ಎಂ.ಸುರೇಶ್ಸಮನ್ವಯಕಾರ, ಕೆಪಿಸಿಎಲ್ ಸಂಘಗಳ ಒಕ್ಕೂಟ

ತೇಲುವ ಸೌರ ಘಟಕವೂ ಖಾಸಗಿಗೆ ಬೇಡ:ರಾಜ್ಯದ ಜಲಾಶಯಗಳ ಹಿನ್ನೀರ ಮೇಲೆ ತೇಲುವ ಸೌರ ಫಲಕಗಳನ್ನು ಅಳವಡಿಸಿ 7,000 ಮೆಗಾ ವಿದ್ಯುತ್ ಉತ್ಪಾದನೆಗೆ ಅವಕಾಶವಿರುವ ಅಂದಾಜಿದೆ. ಕದ್ರಾ ಜಲಾಶಯದ ಹಿನ್ನೀರಿನಲ್ಲಿ 20 ಮೆಗಾ ವಾಟ್ ಉತ್ಪಾದಿಸುವ ಪ್ರಾಯೋಗಿಕ ಯೋಜನೆ ಕೈಗೆತ್ತಿಕೊಳ್ಳಲು ಕೆಆರ್​ಇಡಿಎಲ್ ಚಿಂತನೆ ನಡೆಸಿ ಖಾಸಗಿಗೆ ಕೊಡಲು ಮುಂದಾಗಿದ್ದು, ಕೆಪಿಸಿಎಲ್​ನ ಒಪ್ಪಿಗೆಯನ್ನೂ ಪಡೆದಿಲ್ಲ. ಭೂಸ್ವಾಧೀನ ಅಗತ್ಯವಿಲ್ಲ, ನಿರ್ವಹಣೆಗೆ ಕೆಪಿಸಿಎಲ್ ತಾಂತ್ರಿಕ, ಆಡಳಿತ ಸಿಬ್ಬಂದಿಯಿದ್ದು, ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳದು. ಜಲಾಶಯದ ಭದ್ರತೆ, ಸುರಕ್ಷತೆ ದೃಷ್ಟಿಯಿಂದಲೂ ಖಾಸಗಿಗೆ ಕೊಡುವುದು ಸರಿಯಲ್ಲ ಎನ್ನುವುದು ಒಕ್ಕೂಟದ ನಿಲುವು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
