| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಅಸಂಘಟಿತ ವಲಯದಲ್ಲಿರುವ ಲಕ್ಷಾಂತರ ಕಾರ್ವಿುಕರಿಗೆ ಹೊಸ ವರ್ಷದ ಕೊಡುಗೆಯಾಗಿ ಜೀವನಭದ್ರತೆಯನ್ನು ಒದಗಿಸುವ ಮಹತ್ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ರಾಜ್ಯಾದ್ಯಂತ ಅಸಂಘಟಿತ ವಲಯದ ಕಾರ್ವಿುಕರು ಸಂಕಷ್ಟಕ್ಕೆ ಸಿಲುಕಿದ್ದರು. ಭವಿಷ್ಯದಲ್ಲಿ ಇಂಥ ದುಸ್ಥಿತಿ ಮರುಕಳಿಸದಂತೆ ಈ ಕಾರ್ವಿುಕರ ಜೀವನ ಭದ್ರಪಡಿಸಲು ಸರ್ಕಾರ ಹೊಸ ಹೆಜ್ಜೆ ಇರಿಸಿದೆ.
ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕಟ್ಟಡ ಕಾರ್ವಿುಕರ ಕಲ್ಯಾಣ ಮಂಡಳಿ ಕಟ್ಟಡ ಕಾರ್ವಿುಕರಿಗೆ ಸಾಕಷ್ಟು ನೆರವು ನೀಡುತ್ತಿದೆ. ಅದೇ ಮಾದರಿಯನ್ನು ಇತರ ಅಸಂಘಟಿತ ಕಾರ್ವಿುಕ ವಲಯಕ್ಕೂ ವಿಸ್ತರಿಸುವುದು ಸರ್ಕಾರದ ಒಟ್ಟಾರೆ ಉದ್ದೇಶ.
ಸಂಪನ್ಮೂಲ ಸಂಗ್ರಹ:ರಾಜ್ಯದಲ್ಲಿ 32 ವಲಯಗಳಲ್ಲಿ ಅಸಂಘಟಿತ ಕಾರ್ವಿುಕರಿದ್ದಾರೆಂದು ಸರ್ಕಾರ ಗುರುತಿಸಿದೆ. ಅಷ್ಟೂ ವಲಯದ ಕಾರ್ವಿುಕರಿಗೆ ಹಂತ ಹಂತವಾಗಿ ಕಲ್ಯಾಣ ಮಂಡಳಿ ರಚಿಸಲಾಗುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕುವ ಅಸಂಘಟಿತ ಕಾರ್ವಿುಕರ ನೆರ ವಾಗಬೇಕೆಂದರೆ, ಯಾವುದೇ ಮಾಹಿತಿ ಲಭ್ಯವಿಲ್ಲ. ಆ ಹಿನ್ನೆಲೆಯಲ್ಲಿ ಮಂಡಳಿ ರಚಿಸಿ ಬೇರೆ ಬೇರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಿಸುವ ಮೂಲಕ ಸಹಾಯ ಹಸ್ತ ಚಾಚುವ ಉದ್ದೇಶ ಹೊಂದಿದೆ.
ಕೇರಳ-ತಮಿಳ್ನಾಡು ಮಾದರಿ:ಕೇರಳ, ತಮಿಳುನಾಡು ಸರ್ಕಾರಗಳು ಅಸಂಘಟಿತ ಕಾರ್ವಿುಕರಿಗಾಗಿ ವಿಶೇಷ ಮಂಡಳಿ ರಚಿಸಿವೆ. ಅಲ್ಲಿನ ಮಂಡಳಿಗಳ ಕಾರ್ಯವೈಖರಿಯನ್ನು ಅಧ್ಯಯನ ಮಾಡಲಾಗಿದ್ದು, ಅದೇ ಮಾದರಿಯನ್ನು ಇಲ್ಲಿಯೂ ಜಾರಿಗೆ ತರಲಾಗುತ್ತಿದೆ. ತಮಿಳುನಾಡಿನಲ್ಲಿ 19 ಮಂಡಳಿಗಳಿದ್ದರೆ, ಕೇರಳದಲ್ಲಿ 24 ಮಂಡಳಿಗಳಿವೆ ಎಂದು ಮೂಲಗಳು ಹೇಳಿವೆ.
ಪ್ರಯತ್ನ ಹೊಸತಲ್ಲ:ರಾಜ್ಯದಲ್ಲಿ ಅಸಂಘಟಿತ ಕಾರ್ವಿುಕರಿಗೆ ನೆರವು ನೀಡಲು 2017ರಲ್ಲೇ ಸರ್ಕಾರ ಯೋಜನೆಯೊಂದನ್ನು ರೂಪಿಸಿತ್ತು. ಆದರೆ ನೋಂದಣಿ ಹಾಗೂ ಇತರ ಪ್ರಕ್ರಿಯೆಗಳು ಸರಿಯಾಗಿ ನಡೆಯಲಿಲ್ಲ. ಸಾಕಷ್ಟು ಪ್ರಚಾರ ನೀಡಲೂ ಸಾಧ್ಯವಾಗಿರಲಿಲ್ಲ. ಆದ್ದರಿಂದ ಈಗ ವ್ಯವಸ್ಥಿತವಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
ಕಾನೂನಿಗೆ ಸಿದ್ಧತೆ:ಅಸಂಘಟಿತ ವಲಯದ ಕಾರ್ವಿುಕರಿಗೆ ಮಂಡಳಿ ರಚಿಸುವ ಸಂಬಂಧ ಕಾನೂನು ರೂಪಿಸುವ ಕಾರ್ಯ ಕೊನೆಯ ಹಂತದಲ್ಲಿದೆ. ಜನವರಿ ತಿಂಗಳಿನಲ್ಲಿ ಮಂಡಳಿಗಳನ್ನು ಕಾರ್ಯಾರಂಭ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಎಲ್ಲೆಲ್ಲಿ ಅಸಂಘಟಿತರು?
ಟೇಲರ್, ಅಕ್ಕಸಾಲಿಗರು, ಮೆಕ್ಯಾನಿಕ್​ಗಳು, ಮಂಡಕ್ಕಿ ಬಟ್ಟಿಯಲ್ಲಿ ಕೆಲಸ ಮಾಡುವವರು, ಅಡುಗೆಯವರು, ವಾದ್ಯಗಾರರು, ಮನೆ ಕೆಲಸದವರು, ಹಮಾಲಿಗಳು, ಸವಿತಾ ಸಮಾಜ, ಕುಂಬಾರ, ಕಮ್ಮಾರ, ಸಾರಿಗೆ ನೌಕರರು, ತೋಟದ ಕಾರ್ವಿುಕರು, ಬಡಗಿಗಳು, ಗಣಿಯಲ್ಲಿ ಕೆಲಸ ಮಾಡುವವರು, ಕೃಷಿ ಕಾರ್ವಿುಕರು, ತೋಟಗಳಲ್ಲಿ ದುಡಿಯುವವರು, ಬೀದಿಬದಿ ವ್ಯಾಪಾರಿಗಳು ನೇಕಾರರು, ಅಂಗಡಿಗಳಲ್ಲಿ ಕೆಲಸ ಮಾಡುವವರು ಹೀಗೆ ಒಟ್ಟಾರೆ 32 ವರ್ಗದ ಅಸಂಘಟಿತ ವಲಯದ ಕಾರ್ವಿುಕರನ್ನು ಗುರುತಿಸಲಾಗಿದೆ.
ಮಂಡಳಿಗಳ ಕಾರ್ಯವೇನು?
ಬಜೆಟ್ ನೆರವು
ಮುಂದಿನ ಬಜೆಟ್​ನಲ್ಲಿ ರಚನೆಯಾಗುವ ಮಂಡಳಿ ಗಳಿಗೆ ವಿಶೇಷವಾದ ನೆರವನ್ನು ನೀಡುವ ಉದ್ದೇಶ ಸರ್ಕಾರಕ್ಕೆ ಇದೆ. ಸಂಪನ್ಮೂಲ ಕ್ರೋಡೀಕರಣ ಸವಾಲಾಗಿದೆ.
ಸಂಪನ್ಮೂಲ ಎಲ್ಲಿಂದ?
ಅಸಂಘಟಿತ ಕಾರ್ವಿುಕರು ಕೆಲಸ ಮಾಡುವ ಸ್ಥಳಗಳಿಂದ ಪಾಲು ಪಡೆಯು ವುದು, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ಹಾಕುವುದು ಹೀಗೆ ವಿವಿಧ ಮೂಲಗಳನ್ನು ಗುರುತಿಸಲಾಗುತ್ತಿದೆ. ಕೆಲವು ಕಡೆಯಿಂದ ದೇಣಿಗೆ ಪಡೆಯು ವುದು ಕಷ್ಟ, ಕಾರ್ವಿುಕರಿಂದ ಪಾಲು ಪಡೆಯುವುದು ಸುಲಭವಲ್ಲ. ಆದ್ದರಿಂದಲೇ ಸಂಪನ್ಮೂಲಕ್ಕೆ ವಿವಿಧ ಮೂಲಗಳನ್ನು ಸರ್ಕಾರ ನೋಡುತ್ತಿದೆ.
ಡೇಟಾ ಸಂಗ್ರಹ
ವಲಸೆ ಕಾರ್ವಿುಕರ ಕುರಿತು ಅಂಕಿಅಂಶ ಸಂಗ್ರಹಿಸಲು ಉತ್ತರ ಪ್ರದೇಶದಲ್ಲಿ ಜಾರಿ ಯಲ್ಲಿರುವ ಕಾನೂನು ಅಧ್ಯಯನ ಮಾಡ ಲಾಗುತ್ತದೆ. ರಾಜ್ಯದ ಕಾರ್ವಿುಕರು ನೆರೆ ರಾಜ್ಯಗಳ ಬದಲಾಗಿ ಜಿಲ್ಲೆಯಿಂದ ಜಿಲ್ಲೆಗೆ ಹೋಗುತ್ತಾರೆ. ಉತ್ತರ ಕರ್ನಾಟಕದ ಕೆಲ ಕಾರ್ವಿುಕರು ಗೋವಾಕ್ಕೆ ಕಬ್ಬು ಕಡಿಯಲು ಹೋಗುವುದು ಹೆಚ್ಚು. ಆದರೂ ಜಿಲ್ಲೆಯಿಂದ ಜಿಲ್ಲೆಗೆ ಬೇರೆ ರಾಜ್ಯದಿಂದ ರಾಜ್ಯಕ್ಕೆ ಬಂದಿರುವವರ ಡೇಟಾ ಸಂಗ್ರಹಿಸಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − five =
Remember me
