ತಾಳೆ ಆಗದ ಪರಿಹಾರದ ಮೊತ್ತ

ಅರಣ್ಯ ಇಲಾಖೆ ಹಾಗೂ ಇತರ ಇಲಾಖೆಗಳ ನಡುವೆ ವ್ಯತ್ಯಾಸ

ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯದ ವಿವಿಧ ಇಲಾಖೆಗಳಲ್ಲಿ ಬೆಳೆ ಹಾನಿಗೆ ನೀಡಲಾಗುವ ಪರಿಹಾರದ ಮೊತ್ತಕ್ಕೂ ಅರಣ್ಯ ಇಲಾಖೆ ನೀಡುತ್ತಿರುವ ಮೊತ್ತಕ್ಕೂ ತಾಳೆ ಆಗದ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ಪರಿಹಾರ ಹೆಚ್ಚಳಕ್ಕೆ ಶಿಫಾರಸು ಮಾಡಲು ಸಮಿತಿ ರಚನೆಗೆ ಅರಣ್ಯ ಇಲಾಖೆ ಮುಂದಾಗಿದೆ.
ರಾಮನಗರ, ಹಾಸನ, ಕೊಡಗು ಸೇರಿ ವಿವಿಧ ಜಿಲ್ಲೆಗಳಲ್ಲಿ ಆನೆಗಳು ಸತತ ದಾಳಿ ನಡೆಸುವ ಮೂಲಕ ರೈತರಿಗೆ ಸಾಕಷ್ಟು ನಷ್ಟ ಉಂಟು ಮಾಡುತ್ತಿವೆ. ಕೆಲವು ಕಡೆ ಜಮೀನುಗಳನ್ನೇ ವಾಸ ಸ್ಥಾನ ಮಾಡಿಕೊಂಡಿರುವ ಆನೆಗಳು ಆತಂಕಕ್ಕೂ ಕಾರಣವಾಗಿವೆ.
ಆದರೆ, ಕಾಡುಪ್ರಾಣಿಗಳಿಂದ ದಾಳಿಗೆ ಒಳಗಾಗಿ ಬೆಳೆ ನಷ್ಟಕ್ಕೆ ಒಳಗಾದಾಗ ನೀಡುವ ಪರಿಹಾರ ಮೊತ್ತ ಅವೈಜ್ಞಾನಿಕವಾಗಿದೆ ಹಾಗೂ ಇತರ ಇಲಾಖೆಗಳಲ್ಲಿ ನೀಡಲಾಗುವ ಪರಿಹಾರಕ್ಕೂ ಇದಕ್ಕೂ ತಾಳೆಯೇ ಆಗುವುದಿಲ್ಲ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಬೆಲೆ ಹಾಗೂ ಮಾನದಂಡಗಳ ಅಧ್ಯಯನಕ್ಕೆ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
10 ವರ್ಷದ ತೆಂಗಿನ ಮರಕ್ಕೆ ಅರಣ್ಯ ಇಲಾಖೆ ಪ್ರಸ್ತುತ 4 ಸಾವಿರ ರೂ. ಪರಿಹಾರ ನೀಡುತ್ತಿದೆ. ಆದರೆ ತೋಟಗಾರಿಕೆ ಇಲಾಖೆಯಿಂದ ಮಾಲ್ಕಿ ಪರಿಹಾರದಲ್ಲಿ ಸಲು ಬಿಡುವ ತೆಂಗಿನ ಮರಕ್ಕೆ 15-20 ಸಾವಿರ ರೂ.ವರೆಗೂ ಪರಿಹಾರ ನೀಡಲಾಗುತ್ತದೆ. ಕೆಐಎಡಿಬಿ ವಶಪಡಿಸಿಕೊಳ್ಳುವ ಭೂಮಿಯಲ್ಲಿರುವ ತೆಂಗಿಗೆ 35 ಸಾವಿರ ರೂ.ವರೆಗೂ ಪರಿಹಾರ ನೀಡಲಾಗಿದೆ ಎನ್ನುವುದು ರೈತರ ವಾದ.
ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳಿಂದ ದಾಳಿಗೆ ತುತ್ತಾಗುವ ಮರಗಳಿಗೆ ತೋಟಗಾರಿಕೆ ಇಲಾಖೆ, ಕೆಐಎಡಿಬಿ ಮಾದರಿಯಲ್ಲಿಯೇ ಪರಿಹಾರ ನೀಡಬೇಕು ಎನ್ನುವ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅರಣ್ಯ, ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳನ್ನು ಒಳಗೊಂಡ ಅಧಿಕಾರಿಗಳ ಸಮಿತಿಯನ್ನು ನೇಮಕ ಮಾಡಲು ಮುಂದಾಗಿದೆ.
ಸರ್ಕಾರ ಕಳೆದ ಹಲವು ವರ್ಷಗಳಿಂದಲೂ ಬಳಕೆ ಮಾಡುತ್ತಿರುವ ದಯಾತ್ಮಕ ಪದ ಬಳಕೆಗೆ ರೈತರಿಂದ ವಿರೋಧ ವ್ಯಕ್ತವಾಗಿದೆ. ಅರಣ್ಯ ಇಲಾಖೆಯಿಂದ ಬೆಳೆ ಹಾನಿ ಮತ್ತು ನಷ್ಟಕ್ಕೆ ಕೊಡುವ ಪರಿಹಾರ ಮೊತ್ತಕ್ಕೆ ದಯಾತ್ಮಕ ಧನ ಎಂದು ಕರೆಯಲಾಗುತ್ತಿದೆ. ಆದರೆ ರೈತರು ನಾವು ಸರ್ಕಾರದ ಬಳಿ ಭಿಕ್ಷೆ ಬೇಡಿಲ್ಲ.
ಸರ್ಕಾರ ತನ್ನ ವೈಫಲ್ಯದಿಂದ ರೈತರ ಬೆಳೆಗಳಿಗೆ ನಷ್ಟ ಕಟ್ಟಿಕೊಡುತ್ತದೆಯೇ ಹೊರತು, ಸುಮ್ಮನೆ ಕೊಡುವುದಿಲ್ಲ ಎನ್ನುವುದು ರೈತರ ವಾದ. ಈ ಹಿಂದೆಯೂ ಪ್ರಕೃತಿ ವಿಕೋಪಕ್ಕೆ ಸಿಲುಕಿದವರಿಗೆ ನೀಡಲಾಗುವ ಆಶ್ರಯ ಕೇಂದ್ರವನ್ನು ಗಂಜಿ ಕೇಂದ್ರ ಎಂದು ಕರೆಯಲಾಗುತ್ತಿತ್ತು. ನಂತರ ಇದನ್ನು ಕಾಳಜಿ ಕೇಂದ್ರ ಎಂದು ಮರು ನಾಮಕರಣ ಮಾಡಲಾಗಿತ್ತು.

ತೋಟಗಾರಿಕೆ ಬೆಳೆ ನಷ್ಟಕ್ಕೆ ಬೇರೆ ಇಲಾಖೆಗಳಿಂದ ನೀಡುವ ಪರಿಹಾರಕ್ಕೂ ಅರಣ್ಯ ಇಲಾಖೆ ನೀಡುವ ಪರಿಹಾರಕ್ಕೂ ವ್ಯತ್ಯಾಸವಿದೆ ಎಂದು ರೈತರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಒಳಗೊಂಡ ಸಮಿತಿ ರಚಿಸಿ, ಅಧ್ಯಯನ ನಡೆಸಿ ದರ ಹೆಚ್ಚಳ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗುವುದು.
ಶಾಶ್ವತಿ ಮಿಶ್ರಾ, ಎಪಿಸಿಸಿಎಫ್, ಆನೆ ಯೋಜನೆ
ಬೆಳೆದ ಫಸಲು ಕಾಡುಪ್ರಾಣಿಗಳ ದಾಳಿಗೆ ನಷ್ಟವಾದಾಗ ಸರ್ಕಾರ ಕೊಡುವ ಪರಿಹಾರವೇ ಹೊರತು ಭಿಕ್ಷೆ ಅಲ್ಲ. ದಯಾತ್ಮಕ ಎನ್ನುವ ಪದವನ್ನು ತೆಗೆದು ಹಾಕಲೇಬೇಕು. ವಿವಿಧ ಇಲಾಖೆಗಳಿಂದ ನೀಡಲಾಗುವ ಪರಿಹಾರಕ್ಕೂ ಅರಣ್ಯ ಇಲಾಖೆ ನೀಡುವ ಪರಿಹಾರಕ್ಕೂ ಭಾರಿ ವ್ಯತ್ಯಾಸವಿದ್ದು, ಸರಿಪಡಿಸಬೇಕು.
ಸಿ.ಪುಟ್ಟಸ್ವಾಮಿ, ರೈತ ಮುಖಂಡ

ದಯಾತ್ಮಕ ಎನ್ನುವ ಪದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ತೆಗೆದು ಹಾಕಲು ಕ್ರಮ ವಹಿಸಲಾಗುವುದು.
ಎಸ್.ಎಸ್.ಲಿಂಗರಾಜು, ಸಿಸಿಎಫ್, ಬೆಂಗಳೂರು ವೃತ್ತ

ಅಡಕೆ/ತೆಂಗು (10 ವರ್ಷ ಮೇಲ್ಪಟ್ಟಿದ್ದು) 4000.ರೂಕಾಫಿ – ಅರೇಬಿಕ (4 ವರ್ಷ ಮೇಲ್ಪಟ್ಟಿದ್ದು) 1200 ರೂ.ರೊಬೋಸ್ಟಾ (6 ವರ್ಷ ಮೇಲ್ಪಟ್ಟಿದ್ದು) 3000 ರೂ.ಮಾವು (10 ವರ್ಷ ಮೇಲ್ಪಟ್ಟಿದ್ದು) 1800 ರೂ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
