ಬೆಂಗಳೂರು:ರಾಜ್ಯ ಸರ್ಕಾರ ಜಲಾಶಯ ಸುರಕ್ಷತಾ ಸಮಿತಿ ರಚಿಸಿದ್ದು, ಎಲ್ಲ ಜಲಾಶಯಗಳ ವರದಿ ಕೇಳಿದೆ. ತುಂಗಭದ್ರಾ ಆಣೆಕಟ್ಟಿನ ಕ್ರೆಸ್ಟ್ ಗೇಟ್ ಚೈನ್ ಹರಿದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ವಿಧಾನಸೌಧದಲ್ಲಿ ಈ ಕುರಿತು ಮಾಹಿತಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದ ಎಲ್ಲ ಜಲಾಶಯಗಳ ಸುರಕ್ಷತೆ ಕುರಿತು ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಈ ಸಮಿತಿಗೆ 15 ದಿನದಿಂದ 1 ತಿಂಗಳ ಒಳಗಾಗಿ ವರದಿ ನೀಡಲು ಸೂಚಿಸಲಾಗಿದೆ ಎಂದರು.
ತುಂಗಭದ್ರಾ ಅಣೆಕಟ್ಟಿನ ಕ್ರೆಸ್ಟ್ ಗೇಟ್ ದುರಸ್ತಿ ಕಾಮಗಾರಿ ಆರಂಭಗೊಂಡಿದ್ದು, ದುರಸ್ತಿಗೆ ನೀರಿನ ಮಟ್ಟವನ್ನು ಒಂದು ಮಟ್ಟಕ್ಕೆ ಇಳಿಸುವ ಅಗತ್ಯವಿದೆ ಎಂದು ಹೇಳಿದರು.
ನಾನು ಜಲಾಶಯಕ್ಕೆ ಭೇಟಿ ನೀಡಿದ್ದೇನೆ. ದುರಸ್ತಿ ಕಾಮಗಾರಿಗೆ ನೆರವು ನೀಡುವಂತೆ ಜಿಂದಾಲ್ ಕಂಪನಿ ಹಾಗೂ ಇತರರೊಂದಿಗೆ ಮಾತನಾಡಿದ್ದೇನೆ. ಈ ಸಮಸ್ಯೆಯನ್ನು ಸರಿಪಡಿಸಲು ತಂತ್ರಜ್ಞರು 24ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ನಾನು ಶೀಘ್ರದಲ್ಲೇ ಕೆಲಸದ ಸ್ಥಿತಿಯನ್ನು ಹಂಚಿಕೊಳ್ಳುತ್ತೇನೆ ಎಂದು ತಿಳಿಸಿದರು.
ಘಟನೆಗೆ ಯಾರನ್ನಾದರೂ ಹೊಣೆಗಾರರನ್ನಾಗಿ ಮಾಡುತ್ತೀರಾ ಎಂಬ ಪ್ರಶ್ನೆಗೆ, ಅಣೆಕಟ್ಟೆಯ ಸುರಕ್ಷತೆ ಮತ್ತು ನಮ್ಮ ರೈತರ ಕಲ್ಯಾಣವನ್ನು ಖಚಿತಪಡಿಸುವುದು ನಮ್ಮ ಆದ್ಯತೆಯಾಗಿದೆ. ನಾವು ಪ್ರಸ್ತುತ ಸಮಸ್ಯೆಯನ್ನು ಸರಿಪಡಿಸಲು ಗಮನಹರಿಸುತ್ತಿದ್ದೇವೆ ಮತ್ತು ಘಟನೆಯ ಕಾರಣಗಳನ್ನು ನಾವು ನಂತರ ನೋಡುತ್ತೇವೆ. ರೈತರಿಗೆ ನೀರು ಉಳಿಸಲು ಕ್ರೆಸ್ಟ್ ಗೇಟ್ ಮುಚ್ಚಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಒಂದು ಮಟ್ಟಕ್ಕೆ ಇಳಿಯದ ಹೊರತು ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಕೆಆರ್‌ಎಸ್ ಅಣೆಕಟ್ಟಿನಲ್ಲೂ ಸಮಸ್ಯೆ ಇದೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಮಾರಸ್ವಾಮಿ ಅವರಿಗೆ ರಾಜಕೀಯ ಮಾಡುವುದನ್ನು ಬಿಟ್ಟು ಬೇರೇನೂ ಗೊತ್ತಿಲ್ಲ. ಅವರು ಕೆಆರ್‌ಎಸ್‌ನಲ್ಲಿ ಯಾವ ಸಮಸ್ಯೆ ನೋಡಿದ್ದಾರೋ ಗೊತ್ತಿಲ್ಲ. ರೈತರಲ್ಲಿ ಭಯ ಹುಟ್ಟಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ಈಗಾಗಲೇ ತಜ್ಞರ ಸಮಿತಿ ಭೇಟಿ ನೀಡಿ ಕ್ರಮ ಕೈಗೊಂಡಿದೆ. ಆಂಧ್ರಪ್ರದೇಶ, ತೆಲಂಗಾಣದ ಶಾಸಕರು, ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕರು ಮತ್ತಿತರರು ಭೇಟಿ ನೀಡಿದ್ದಾರೆ. ಕೇಂದ್ರ ನೀರಾವರಿ ಸಚಿವರು ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಜತೆಯೂ ಮಾಹಿತಿ ಹಂಚಿಕೊಂಡಿದ್ದೇನೆ ಎಂದು ತಿಳಿಸಿದರು.
ನಮಗೆ ನೀರು ಉಳಿಸುವುದು ಮುಖ್ಯವೇ ಹೊರತು ಬ್ಲೇಮ್‌ಗೇಮ್ ಅಲ್ಲ. ಪ್ರತಿಪಕ್ಷದವರು ಸಿಎಂ ಹಾಗೂ ನನ್ನನ್ನು ಬೈಯಲಿ ಆದರೆ, ನಮ್ಮ ಆದ್ಯತೆ ನೀರು ಉಳಿಸುವುದು, ರೈತರನ್ನು ರಕ್ಷಿಸುವುದೇ ಆಗಿದೆಯೇ ಹೊರತು ಬ್ಲೇಮ್‌ಗೇಮ್ ಅಲ್ಲ.-ಡಿ.ಕೆ.ಶಿವಕುಮಾರ್, ಡಿಸಿಎಂ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + fourteen =
Remember me
