ಮೈಸೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಟ್ಯಧಿಪತಿಯಾಗಿದ್ದರೂ ಅಷ್ಟೇ ಸಾಲವೂ ಇದೆ! ಕಳೆದ ಐದು ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಕುಟುಂಬದ ಒಟ್ಟು ಸಂಪತ್ತಿನ ಜತೆಗೆ ಸಾಲವೂ ದುಪ್ಪಟ್ಟಾಗಿದೆ.
ಇದನ್ನೂ ಓದಿ:ಚುನಾವಣಾ ಕಣದಲ್ಲಿ ಕೋಟ್ಯಧೀಶರ ಅದೃಷ್ಟ ಪರೀಕ್ಷೆ; ಸಾಲ ಇಲ್ಲದ ಕಾಗೇರಿ | ಶತಕೋಟಿ ಒಡೆಯ ಭೈರತಿ ಬಸವರಾಜು
2018ರಲ್ಲಿ ಅವರ ಕುಟುಂಬದ ಸಂಪತ್ತು 20.36 ಕೋಟಿ ರೂ. ಇತ್ತು. 2023ರ ಹೊತ್ತಿಗೆ 51.13 ಕೋಟಿ ರೂ.ಗೆ (ಪತ್ನಿಯ ಸಂಪತ್ತು ಸೇರಿ) ಹೆಚ್ಚಳವಾಗಿದೆ. 19,01,80,209 ರೂ. ಮೌಲ್ಯದ ಆಸ್ತಿ ಘೋಷಣೆ ಮಾಡಿಕೊಂಡಿರುವ ಸಿದ್ದರಾಮಯ್ಯ, 6,84,17,250 ರೂ. ಸಾಲ ಇರುವುದಾಗಿಯೂ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಹೆಸರಿನಲ್ಲಿ 28 ಲಕ್ಷ ರೂ. ಮೌಲ್ಯದ ಕಾರು ಹಾಗೂ 350 ಗ್ರಾಂ ಚಿನ್ನ, 2 ಕಜೆ ಬೆಳ್ಳಿ ಇದೆ. ಹೆಂಡತಿ ಪಾರ್ವತಿ ಅವರು 540 ಗ್ರಾಂ ಚಿನ್ನ, 4.5 ಕೆ.ಜಿ ಬೆಳ್ಳಿ ಹೊಂದಿದ್ದಾರೆ.
ಇದನ್ನೂ ಓದಿ:ಸಿಲಿಕಾನ್ ಸಿಟಿಯ ಚುನಾವಣಾ ಕಣದಲ್ಲಿ ಕೋಟ್ಯಧಿಪತಿಗಳು; ಇಲ್ಲಿದೆ ಅಭ್ಯರ್ಥಿಗಳ ಕೋಟಿ ರೂ. ಆಸ್ತಿ ವಿವರ…
ಕೆ.ಜೆ. ಜಾರ್ಜ್ ಬಳಿಯೇ 4 ಕೋಟಿ ರೂ. ಸಾಲ ಪಡೆದಿರುವುದಾಗಿ ತಿಳಿಸಿದ್ದಾರೆ. 9,58,08,209 ರೂ. ಮೌಲ್ಯದ ಚರಾಸ್ತಿ ಹಾಗೂ 9,43,72,000 ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಪತ್ನಿ ಪಾರ್ವತಿ ಅವರ ಹೆಸರಲ್ಲಿ 32,12,77,206 ರೂ.ಮೌಲ್ಯದ ಆಸ್ತಿ ಇದೆ. 11,26,92,288 ರೂ. ಮೌಲ್ಯದ ಚರಾಸ್ತಿ, 20,85,84,918 ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಲ್ಲೂ 16,24,99,139 ರೂ. ಸಾಲ ಇದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 2 =
Remember me
