ಮೈಸೂರು:ರಾಜ್ಯದಲ್ಲೀಗ ಗ್ರಾಮ ಪಂಚಾಯಿತಿ ಚುನಾವಣೆಯದ್ದೇ ಸದ್ದು. ಮುಂಬರುವ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಲೋಕಲ್ ವಾರ್​ ತಳಮಟ್ಟದಲ್ಲಿ ಪಕ್ಷಗಳ ಸಂಘಟನೆಯ ಶಕ್ತಿ ಪ್ರದರ್ಶನದ ವೇದಿಕೆಯೂ ಹೌದು. ಈ ಚುನಾವಣೆಯಲ್ಲಿ ಪಕ್ಷಗಳ ಚಿಹ್ನೆ ಬಳಕೆ ಇಲ್ಲವಾದರೂ ಬೆಂಬಲಿತ ಎಂಬ ಅಸ್ತ್ರವಂತೂ ವರ್ಕೌಟ್​ ಆಗುತ್ತಿದೆ. ಇಂತಹ ಮಹತ್ವದ ಚುನಾವಣೆಯ ಮತದಾನದಲ್ಲಿ ಬಳಕೆಯಾಗುವ ಶಾಯಿ ಎಲ್ಲಿಯದ್ದು ಗೊತ್ತಾ?
ಗ್ರಾಪಂ ಚುನಾವಣೆಗೆ ಅಗತ್ಯವಿರುವ ಶಾಯಿಯನ್ನು ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯು(ಮೈಲ್ಯಾಕ್​) ಪೂರೈಸುತ್ತಿದೆ. 5 ಎಂಎಲ್ ಶಾಯಿಯುಳ್ಳ 99,000 ಫಿಯಲ್ಸ್​ಗೆ ರಾಜ್ಯ ಚುನಾವಣಾ ಆಯೋಗದಿಂದ ಬೇಡಿಕೆ ಬಂದಿದೆ. 6,580 ಪ್ಯಾಕೆಟ್ ಸೀಲಿಂಗ್ ವ್ಯಾಕ್ಸ್​ಗೂ ಬೇಡಿಕೆ ಇದೆ. ಒಟ್ಟು 1.15 ಕೋಟಿ ರೂ. ವಹಿವಾಟು ಆಗುತ್ತಿದೆ.
ರಾಜ್ಯ ಚುನಾವಣಾ ಆಯೋಗದ ಬೇಡಿಕೆಯಂತೆ ಈಗಾಗಲೇ ಶೇ.50 ಇಂಕ್ ಸರಬರಾಜು ಆಗಿದೆ. ಮಹಾರಾಷ್ಟ್ರ, ರಾಜಸ್ತಾನ, ಮಧ್ಯಪ್ರದೇಶ, ಬಿಹಾರ, ತೆಲಂಗಾಣ, ಉತ್ತರ ಪ್ರದೇಶ, ಕರ್ನಾಟಕ ವಿಧಾನ ಪರಿಷತ್​ ಚುನಾವಣೆಗಳಿಗೂ ಬಾಲೆಟ್ ಮಾರ್ಕಿಂಗ್ ಪೆನ್ ಅನ್ನು ಇದೇ ಕಂಪನಿ ಸರಬರಾಜು ಮಾಡಿದೆ.
ಗುಣಮಟ್ಟದ, ಅಳಿಸಲಾಗದ ಶಾಯಿ ಉತ್ಪಾದನೆಯಲ್ಲಿ ಪ್ರಪಂಚದಲ್ಲೇ ಮೈಲ್ಯಾಕ್ ಮುಂಚೂಣಿಯಲ್ಲಿದೆ ಎಂಬುದು ಮತ್ತೊಂದು ಹೆಮ್ಮೆ ಎಂದು ಮೈಲ್ಯಾಕ್ ಅಧ್ಯಕ್ಷ ಫಣೀಶ್ ತಿಳಿಸಿದ್ದಾರೆ.(ದಿಗ್ವಿಜಯ ನ್ಯೂಸ್)
ಗ್ರಾಪಂ ಚುನಾವಣೆ: 13 ಸದಸ್ಯ ಸ್ಥಾನ ಹರಾಜು, 51 ಲಕ್ಷ ರೂಪಾಯಿಗೆ ಮಾರಾಟ

ನಾನು ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ, ನಿವೃತ್ತಿ ಪಡೆಯುವೆ: ರಮೇಶ್ ಕುಮಾರ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 3 =
Remember me
