ತುಮಕೂರು:ನಾವು ಧರ್ಮ ಸಂಸ್ಥಾಪನಾ ಯಾಗವನ್ನು ಮಾಡಬೇಕಿದೆ. ಸುರೇಶ್ ಗೌಡ ಅಶ್ವಮೇಧ ಯಾಗದ ಕುದುರೆ. ನಮ್ಮ ಕುದುರೆಗೆ ಹುಮ್ಮಸ್ಸು ಹೆಚ್ಚಿದೆ ಎಂಬುದು ಸಾಬೀತಾಗಿದೆ ಎಂದು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸಮಾವೇಶದಲ್ಲಿ ಸದಾನಂದ ಗೌಡ ಮಾತನಾಡುತ್ತಾ, ನಾನು ಕಾಂಗ್ರೆಸ್ ಹಾಗೂ ಜೆಡಿಎಸ್​​ನವರಿಗೆ ಸವಾಲ್ ಹಾಕುತ್ತೇನೆ. ನಿಮಗೆ ತಾಕತ್ತಿದ್ರೆ ನಮ್ಮ ಕುದುರೆಯನ್ನು ಮುಟ್ಟಿ. ನಮ್ಮ ಪಕ್ಷದ ಸುರೇಶ್ ಗೌಡ ಅವರು ಪ್ರಧಾನಿ ನರೇಂದ್ರ ಮೋದಿಯ ಅಭಿವೃದ್ಧಿ ಮಂತ್ರದಂತೆ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು ನಾನು ದೇಶದ ಸೇವಕ ಎಂದು ಹೇಳುತ್ತಾರೆ. ಅದೇ ರೀತಿ ಸುರೇಶ್ ಗೌಡ ಕೂಡ ನಾನು ಈ ಕ್ಷೇತ್ರದ ಸೇವಕ ಎಂದು ಹೇಳುತ್ತಾರೆ. ಕಾಂಗ್ರೆಸ್​ನವರು ಪ್ರಜಾಧ್ವನಿ ಎಂದು ಹೇಳುತ್ತಾರೆ. ಆದರೆ ಅವರಲ್ಲೇ ಬೇರೆ ಬೇರೆ ಧ್ವನಿ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರದ್ದೇ ಒಂದು ಧ್ವನಿಯಾದರೆ, ಸಿದ್ದರಾಮಯ್ಯ ಅವರದ್ದು ಮತ್ತೊಂದು ಧ್ವನಿ. ಮಲ್ಲಿಕಾರ್ಜುನ ಖರ್ಗೆಯವರದ್ದು ಇನ್ನೊಂದು ಧ್ವನಿ ಎಂದರು.
ಇದನ್ನೂ ಓದಿ:ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿಲ್ಲ ಅಂದ್ರೆ ನಾವು ಮಾಡ್ತೀವಿ; ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × four =
Remember me
