ಬೆಂಗಳೂರು: ರಾಮನಗರದ ವಿಭಾಗಾಧಿಕಾರಿಯಾಗಿದ್ದ ಸಿದ್ದಪ್ಪ ನನ್ನ ಮೇಲೆ ಕೋಪಗೊಂಡು ಸುಳ್ಳು ವರದಿ ಕೊಟ್ಟು ಹೋಗಿದ್ದಾರೆ. ಇದನ್ನು ಹಿಡಿದುಕೊಂಡು ಸಾಮಾಜಿಕ ಕಾರ್ಯಕರ್ತರಾದ ಹಿರೇಮಠ್​ ಹಾಗೂ ರವಿಕೃಷ್ಣಾರೆಡ್ಡಿ ರಾಮನಗರಕ್ಕೆ ಬಂದು ಸರ್ಕಾರಿ ಗೋಮಾಳ ಕಬಳಿಕೆ ಮಾಡಿದ್ದೀನಿ ಎಂದು ಆರೋಪ ಮಾಡಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿದರು.
ಬಿಡದಿ ಬಳಿ ಇರುವ ಕೇತಿಗಾನಹಳ್ಳಿಯಲ್ಲಿ ದುಡಿಮೆ ಮಾಡಿದ ಹಣದಿಂದ ಜಮೀನು ಖರೀದಿಸಿದ್ದೇನೆ. ಆದರೆ ಈ ಇಬ್ಬರು ರಾಮನಗರಕ್ಕೆ ಹೋಗಿ ಗೋಮಾಳ ಕಬಳಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹಿರೇಮಠ್​ ಹಾಗೂ ರವಿಕೃಷ್ಣಾರೆಡ್ಡಿ ಅವರಿಗೆ ದಾಖಲೆಯನ್ನು ನಾನೆ ಕೊಡುತ್ತಿದ್ದೆ. ರಾಮನಗರದ ಎಸಿ ಆಗಿದ್ದ ಸಿದ್ದಪ್ಪ ಅಕ್ರಮವಾಗಿ ಸಾಕಷ್ಟು ಸರ್ಕಾರಿ ಭೂಮಿ ಪರಭಾರೆ ಮಾಡಿದ್ದ. ಇದನ್ನು ತಪ್ಪಿಸಲು ಮುಂದಾಗಿದ್ದಕ್ಕೆ ಆತ ನನ್ನ ವಿರುದ್ಧ ವರದಿ ನೀಡಿದ್ದಾನೆ. ಸಿದ್ದಪ್ಪ ಎಸಗಿರುವ ಅಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪ ಅವರಿಗೆ ದಾಖಲೆ ನೀಡಿದ್ದರೂ ಇನ್ನೂ ಆತನ ವಿರುದ್ಧ ಕ್ರಮ ಜರುಗಿಸಿಲ್ಲ ಎಂದರು.
ನಮ್ಮದು ಸರ್ಕಾರಿ ಜಮೀನು ಕಬಳಿಸುವ ಕುಟುಂಬ ಅಲ್ಲ. ಈ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧ. ಯಾರು ಬೇಕಾದರೂ ಚರ್ಚೆಗೆ ಬರಬಹುದು ಎಂದು ಹಿರೇಮಠ ಹಾಗೂ ರವಿಕೃಷ್ಣಾರೆಡ್ಡಿ ಅವರಿಗೆ ಸವಾಲು ಹಾಕಿದರು. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − ten =
Remember me
