ಬೆಂಗಳೂರು:ಅಂದು ಚೆಂಡು ಹೂವು ಮುಡಿದುಕೊಂಡಿದ್ದ ಬಂದಿದ್ದವರು ಇಂದು ಎಲ್ಲರಿಗೂ ಟೋಪಿ ಹಾಕಿಕೊಂಡು ಹೋಗ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.
ನಿನ್ನೆ (ಆ. 04) ಯೂರೋಪ್​ ಪ್ರವಾಸದಿಂದ ತವರಿಗೆ ಮರಳಿದ ಬೆನ್ನಲ್ಲೇ ಇಂದು (ಆ.05) ಸುದ್ದಿಗೋಷ್ಠಿ ನಡೆಸಿದ ಎಚ್​ಡಿಕೆ, ಕಾಂಗ್ರೆಸ್​ ನಾಯಕರ ವಿರುದ್ಧ ಹರಿಹಾಯ್ದರು.
ನಾನು ಹಿಟ್ ಅಂಡ್ ರನ್ ಕೇಸ್ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ. ಆದರೆ, ನಾನು ಹಿಟ್ ಅಂಡ್ ರನ್ ಮಾಡುವವನಲ್ಲ. ಈ ಹಿಂದೆ ಕಾಂಗ್ರೆಸ್‌ನವರು ಬಿಜೆಪಿ ಸರ್ಕಾರದ ವಿರುದ್ಧ ಶೇ. 40 ಕಮಿಷನ್ ಹಾಗೂ ಪೇ ಸಿಎಂ ಎಂದು ಆರೋಪ ಮಾಡಿದ್ರಲ್ಲ ಒಂದಕ್ಕಾದರು ದಾಖಲೆಗಳನ್ನು ಕೊಟ್ಟರಾ? ಎಂದು ಪ್ರಶ್ನೆ ಮಾಡಿದರು.
ಜಯಚಂದ್ರ ಅವರಿಗೆ ಬೆದರಿಕೆ ಹಾಕಿದ್ದವರು ಯಾರು? ಇದು ನಾಡಿನ ಜನತೆಯ ಬದುಕಿನ ಪ್ರಶ್ನೆ. ಯಾವುದೋ ಒ0ದು ಪಕ್ಷದಿಂದ ಬೆಳೆದಿದ್ದೇನೆ ಎಂದು ಕಾನೂನು ಬಾಹಿರ ಚಟುವಟಿಕೆಯ ಬಗ್ಗೆ ಮೌನ ವಹಿಸಬೇಡಿ. ಸರ್ಕಾರದ ಜಾಹೀರಾತನ್ನು ನಾನು ನೋಡಿದೆ. ಯಾವ ರೀತಿ ಅವರು ನುಡಿದಂತೆ ನಡೆದಿದ್ದಾರೆ. ನೀವು ಉಚಿತ ವಿದ್ಯುತ್ ಕೊಟ್ಟ ಮೇಲೆ ಜನ ಬೆಳಕು ಕಂಡರಾ? ಅದಕ್ಕೂ ಮುಂಚೆ ಬೆಳಕು ಇರಲಿಲ್ವಾ? ವಿದ್ಯುತ್ ಗ್ಯಾರಂಟಿ ಯೋಜನೆ 200 ಯೂನಿಟ್​ ನಿಗದಿ ಮಾಡಿದ್ದೀರಿ. ಈ ಹಿಂದೆ 230 ರಿಂದ 220 ಯೂನಿಟ್ ಬಳಸುತ್ತಿದ್ದವರು ನಿಮ್ಮ ಯೋಜನೆಯಿಂದಾಗಿ ಕಡಿಮೆ ಬಳಕೆ ಮಾಡಿದರು. ಆದರೆ, ಇಂದು ಅವರಿಗೂ 230 ಯೂನಿಟ್ ಬಳಕೆಯ ಬಿಲ್ ಕಳುಹಿಸಿದ್ದಾರೆ. ಅಂಥವರಿಗೆ ಏನು ಮಾಡ್ತೀರಾ? ಇಂದು ಕಲಬುರಗಿಗೆ ಚಾಲನೆ ಕೊಡಲು ಹೋಗಿದ್ದಾರೆ. ಈ 230 ಯೂನಿಟ್​ನವರಿಗೆ ಏನು ಮಾಡ್ತೀರಾ ಎಂದು ಅಧಿಕಾರಿಗಳನ್ನು ಕೇಳಿದರೆ, ಸರ್ಕಾರ ಏನು ಮಾಡುತ್ತದೋ ಗೊತ್ತಿಲ್ಲ ಎಂದು ಹೇಳುತ್ತಾರೆ. ಈ ಹಿಂದೆ ಚೆಂಡು ಹೂವು ಮುಡಿದುಕೊಂಡು ಬಂದಿದ್ದವರೂ ಇಂದು ಎಲ್ಲರಿಗೂ ಟೋಪಿ ಹಾಕ್ಕೊಂಡು ಹೋಗುತ್ತಿದ್ದಾರೆ ಎಂದು ಎಚ್​ಡಿಕೆ ಕಿಡಿಕಾರಿದರು.
ದೇಶದ ಬಜೆಟ್ 1600 ಕೋಟಿಯಿಂದ ಬಂದಿದ್ದೇವೆ. ನಾವು 75 ವರ್ಷ ಸಾಗಿದ್ದೇವೆ. ರಾಜ್ಯದ್ದು 3 ಲಕ್ಷ ಕೋಟಿ ಬಜೆಟ್ ಆಗಿದೆ. ಕೇಳಿದರೆ ದುಡ್ಡಿಲ್ಲ ದುಡ್ಡಿಲ್ಲ ಅಂತಾರೆ, ಹಾಗಾದ್ರೆ ಕಮರ್ಷಿಯಲ್ ಟ್ಯಾಕ್ಸ್ ಎಷ್ಟು ಬಂದಿದೆ. ಆ ದುಡ್ಡೆಲ್ಲ ಎಲ್ಲೊಯ್ತು? ಸಾಲವನ್ನು 10000 ಕೋಟಿ ಏರಿಕೆ ಮಾಡಿಕೊಂಡಿದ್ದೀರಿ. ನಿಮ್ಮ 35 ಜನ ಶಾಸಕರು ಏಕೆ ಪತ್ರ ಬರೆದರು. ಪರಮೇಶ್ವರ್ ಬಗ್ಗೆ ಗೌರವ ಇಟ್ಟುಕೊಂಡಿದ್ದೆ. ಆದರೆ ಅವರು ನಿನ್ನೆ ಒಂದು ಪದ ಬಳಸಿದ್ದಾರೆ. ಅವರ ಸಲಹೆ ಏಕೆ ಎಂದಿದ್ದಾರೆ. ನಾನೇನು ಸಲಹೆ ಕೊಟ್ಟಿದ್ದೆ ಅವರಿಗೆ? ನಾನು ಎಲ್ಲವನ್ನು ಡಿಜಿ ಅವರಿಗೆ ಬಿಟ್ಟಿದ್ದೆ. ನಾನು ಯಾವುದಕ್ಕೂ ಹಸ್ತಕ್ಷೇಪ ಮಾಡಿಲ್ಲ. ಈ ಹಿಂದೆ ಸಿದ್ದರಾಮಯ್ಯ ಅವರನ್ನ ಸಮಾಜವಾದಿ ಅಲ್ಲ, ಮಜಾವಾದಿ ಎಂದು ನಾನು ಹೇಳಿದ್ದೆ. ಹ್ಯೂಬ್ಲಟ್ ವಾಚ್ ಪ್ರಕರಣ ಪ್ರಸ್ತಾಪ ಮಾಡಿದ್ದೆ ಎಂದರು.
ಈ ರಾಜ್ಯದ ರೈತರ ಸಂಪತ್ತು ಯಾವ ರೀತಿಯ ಲೂಟಿ ಆಗಿದೆ ಗೊತ್ತು. ಪ್ರಧಾನಿಯವರಿಗೆ, ಗೃಹ ಸಚಿವರಿಗೆ ಭ್ರಷ್ಟಾಚಾರ ನಿಲ್ಲಿಸುವ ಉದ್ದೇಶ ಇದ್ರೆ ದಾಖಲೆ ಕಳುಹಿಸುತ್ತೇನೆ, ಕ್ರಮ ಕೈಗೊಳ್ಳಲಿ ಎಂದರು. ರಾಜ್ಯ ಸರ್ಕಾರದ ವರ್ಗಾವಣೆ ದಂಧೆಗೆ ಲೆಕ್ಕವೇ ಇಲ್ಲ, 1000 ಕೋಟಿಗೂ ಮೇಲಾಗಿದೆ ಎಂದು ಆರೋಪ ಮಾಡಿದರು.
ಇದೇ ಸಂದರ್ಭದಲ್ಲಿ ಹೆಸರೇಳದೆ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಎಚ್​ಡಿಕೆ, ಬೆಂಗಳೂರು ಮಂತ್ರಿ ಯಾಕೆ 710 ಕೋಟಿ ಬಿಡುಗಡೆ ಮಾಡಿಲ್ಲ? ಅಧಿಕಾರಿಯೊಬ್ಬರು ಅವರ ಮನೆಗೆ ಬಂದಿದ್ದರು. 2019-20 ಕಾಮಗಾರಿಗೆ 5%, 2020-21 ಕ್ಕೆ 15% ಕೊಡಬೇಕಂತೆ. ಬ್ರ್ಯಾಂಡ್ ಬೆಂಗಳೂರು ಅಡ್ವೈಸರ್ ಮೂಲಕ ಹಣ ತಲುಪಿಸಬೇಕಂತೆ. ಹಣ ತಲುಪಿಸಿದ್ರೆ ಕಾಮಗಾರಿ ಹಣ ಬಿಡುಗಡೆ ಮಾಡ್ತಾರಂತೆ ಎಂದು ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದರು.
ನನ್ನನ್ನು ಯಾರು ಹೆದರಿಸಲು ಆಗಲ್ಲ ಎಂಬ ಡಿಕೆಶಿ ಹೇಳಿಕೆಗೆ ಉತ್ತರಿಸಿದ ಎಚ್​ಡಿಕೆ, ಅಯ್ಯೋ ಅವರನ್ನ ನಾನು ಹೆದರಿಸೊಕೆ ಆಗುತ್ತಾ? ಅವರಿಗೆ ಎಲ್ಲ ಶಕ್ತಿ ಇದೆ. ಅವರು ಎಲ್ಲವನ್ನು ನಿಭಾಯಿಸ್ತಾರೆ ಎಂದರು. ಎಸ್ಪಿ ರೋಡ್​ನಿಂದ ಪೆನ್ ಡ್ರೈವ್ ತಂದಿದ್ದಾರೆ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆಗೆ ಅಯ್ಯೋ ನಾನೇಕೆ ಎಸ್ಪಿ ರೋಡ್​ಗೆ ಹೋಗಲಿ, ಅವರೇ ಪೆನ್​ಡ್ರೈವ್​ಗಳನ್ನ ಕೊಡ್ತಿದಾರೆ. ನಾನು ಒಂದು ಪೆನ್ ಡ್ರೈವ್ ತೋರಿಸಿದ್ದಕ್ಕೆ ಎಷ್ಟು ಜನ ಮಂತ್ರಿಗಳು, ಶಾಸಕರು ನನ್ನ ಬಳಿ ಬಂದು ಯಾರದು ಅದು ಕೇಳಿದರು ಎಂದರು.
ಮೊನ್ನೆ ನಮ್ಮ ಪೋಲಿಸರೇ ಕೇರಳದಲ್ಲಿ ಸಿಕ್ಕಿಕೊಂಡಿದ್ದಾರೆ. ಇದನ್ನು ನೋಡಿದ್ರೆ ಆಡಳಿತ ಹೇಗಿದೆ ಎಂದು ಗೊತ್ತಾಗುತ್ತದೆ. ಎಲ್ಲ ಕೊಟ್ಟು ಬಂದಿರುವವರೇ, ಅದನ್ನ ವಸೂಲಿ ಮಾಡಬೇಕಲ್ಲ, ಅದಕ್ಕೆ ಇದೆಲ್ಲ ನಡೆಯುತ್ತಿದೆ. ಕಳೆದ ನಾಲ್ಕು ತಿಂಗಳಲ್ಲಿ 34700 ಕೋಟಿ ಕಮರ್ಷಿಯಲ್ ಟ್ಯಾಕ್ಸ್ ಸಂಗ್ರಹ ಆಗಿದೆ. ದುಡ್ಡೇ ಇಲ್ಲ ಎಂದು ಹೇಳ್ತಾರೆ ಎಂದು ಟೀಕಿಸಿದರು.(ದಿಗ್ವಿಜಯ ನ್ಯೂಸ್​)
ಮಾಜಿ ಸಂಸದರ ಮಗನ ಖಾತೆಗೇ ಆನ್​ಲೈನ್​ ವಂಚಕರ ಕನ್ನ!

ಇನ್‌ಸ್ಪೆಕ್ಟರ್ ವರ್ಗಾವಣೆ ವಿಚಾರ: ಸ್ಪಷ್ಟನೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 6 =
Remember me
