ಹುಬ್ಬಳ್ಳಿ:ಬಿಜೆಪಿ ಟಿಕೆಟ್​ ಮಿಸ್​ ಆದ ಹಿನ್ನೆಲೆಯಲ್ಲಿ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿರುವ ಮಾಜಿ ಸಿಎಂ ಜಗದೀಶ್​ ಶೆಟ್ಟರ್, ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಮತ್ತು ಇನ್ನೂ ಹತ್ತು ವರ್ಷಗಳ ಕಾಲ ಸಕ್ರೀಯ ರಾಜಕಾರಣದಲ್ಲಿ ಇರುತ್ತೇನೆ ಎಂದಿದ್ದಾರೆ.
ಬಿಜೆಪಿ ಹೈಕಮಾಂಡ್​ನಿಂದ ಬುಲಾವ್​ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುವ ಮುನ್ನ ಹುಬ್ಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್‌, ಕಾದು ನೋಡಿ ಎನ್ನುವ ಮೂಲಕ ಟಿಕೆಟ್‌ ಕೈ ತಪ್ಪಿದ್ದೇ ಆದರೆ ಬಂಡಾಯದ ಮುನ್ಸೂಚನೆ ನೀಡಿದರು.
ಇದನ್ನೂ ಓದಿ:ರೇಪ್​ ಕೇಸ್​ನಲ್ಲಿ ಜಾಮೀನು: ಜೈಲಿಂದ ಹೊರಬಂದ ರೀಲ್ಸ್​ ಸ್ಟಾರ್​ನಿಂದ ಹಾಡಹಗಲೇ ನಡೆಯಿತು ಘೋರ ಕೃತ್ಯ
ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ದೆಹಲಿಗೆ ತೆರಳುತ್ತಿದ್ದೇನೆ. ನನಗೆ ಸಕಾರಾತ್ಮಕ ಸ್ಪಂದನೆ ಸಿಗುವ ಭರವಸೆ ಇದೆ. ನಿನ್ನೆ ಪಕ್ಷದ ವರಿಷ್ಟರ ಜೊತೆ ಮಾತನಾಡಿದ್ದೇನೆ. ಟಿಕೆಟ್ ವಿಚಾರವಾಗಿ ನನಗೆ ವರಿಷ್ಠರು ಇಂದು ಸ್ಪಷ್ಟತೆಯನ್ನು ತಿಳಿಸಲಿದ್ದಾರೆ. ಒಬ್ಬ ಶಾಸಕನಾಗಿ ಎರಡು ವರ್ಷಗಳಿಂದ ಯಾವುದೇ ಸ್ಥಾನಮಾನ ಇಲ್ಲದೇ ಅಭಿವೃದ್ದಿ ಕೆಲಸಗಳನ್ನ ಮಾಡಿದ್ದೇನೆ. ಸಚಿವ ಸ್ಥಾನ ಇಲ್ಲದೆನೂ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದೇನೆ. ನಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.
ಭರವಸೆ ಇದೆನಾನು ರಾಜಕೀಯಕ್ಕೆ ಬಂದಿರುವುದೇ ಆಕಸ್ಮಿಕ. ನಾನು ಯಾವುದೇ ಸಂದರ್ಭದಲ್ಲಾದರೂ ರಾಜಕೀಯ ನಿವೃತ್ತಿ ಪಡೆದುಕೊಳ್ಳಲು ಸಿದ್ಧನಿದ್ದೆ. ಯಾರೇ ಆಗಲಿ ಗೌರವಯುತವಾಗಿ ಚುನಾವಣಾ ರಾಜಕೀಯದಿಂದ ಹೊರ ಹೋಗಬೇಕು. ಈ ರೀತಿ ಹೊರ ಹೋಗುವುದು ಸರಿಯಲ್ಲ. ನನ್ನ ಸಾಫ್ಟ್ ಕಾರ್ನರ್ ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ. ರಾಷ್ಟ್ರೀಯ ಅಧ್ಯಕ್ಷರನ್ನ ಭೇಟಿಯಾಗಿ ಬಂದ ಮೇಲೆ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ. ವರಿಷ್ಠರಿಂದ ನನಗೆ ಸಕಾರಾತ್ಮಕ‌ ಸ್ಪಂದನೆ ಸಿಗುವ ಭರವಸೆ ಇದೆ ಎಂದು ಹೇಳಿದರು.
ಇದನ್ನೂ ಓದಿ:World cup 2023: ವಿಶ್ವಕಪ್​ ಆಡಲು ಪಾಕಿಸ್ತಾನಕ್ಕೆ ಭಾರತದ ಈ 2 ನಗರಗಳು ಮಾತ್ರ ಸುರಕ್ಷಿತವಂತೆ!
ಸೀನಿಯರ್ಸ್ ಅಂದ್ರೆ ಯಾರು?ಸೀನಿಯರ್ಸ್ ಅಂದ್ರೆ ಯಾರೂ ಎಂದು ಪ್ರಶ್ನೆ ಮಾಡಿದ ಜಗದೀಶ್ ಶೆಟ್ಟರ್, ವಯಸ್ಸೋ ಅಥವಾ ರಾಜಕಾರಣದಲ್ಲಿ ಸೀನಿಯರ್ಸೋ? ಟಿಕೆಟ್ ಸಿಕ್ಕವರಲ್ಲಿ 75, 76 ವರ್ಷದವರು ಇದಾರೆ. ಅವರಿಗೆ ಸೀನಿಯರ್ಸ್ ಅನ್ನೋದಿಲ್ವಾ ನೀವು? ರಾಷ್ಟ್ರೀಯ ನಾಯಕರ ಭಾವನೆ‌ಮೇಲೆ ನನ್ನ ನಿರ್ಧಾರ ಅಡಗಿದೆ ಎಂದು ತಿಳಿಸಿದರು.
ಶೆಟ್ಟರ್​ ಅವರ ಹೇಳಿಕೆ ಹೈಕಮಾಂಡ್​ಗೆ ನಡುಕ ಹುಟ್ಟಿಸಿದೆ ಎನ್ನಲಾಗಿದೆ. ಅದೇ ಕಾರಣಕ್ಕಾಗಿ ಶೆಟ್ಟರ್​ ಅವರನ್ನು ಸಮಾಧಾನ ಮಾಡಲು ಕಮಲ ಕಲಿಗಳು ದೆಹಲಿಗೆ ಕರೆದಿದ್ದಾರೆ. ಸ್ವತಃ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಪೋನ್ ಮಾಡಿ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದು, ಇಂದು ಬೆಳಗ್ಗೆಯೇ ದೆಹಲಿಗೆ ತೆರಳಿದ್ದಾರೆ.(ದಿಗ್ವಿಜಯ ನ್ಯೂಸ್​)
ಗುಟುಕು ನೀರಿಗೆ ಅಂಗಲಾಚುವ ಮಂಗಗಳು: ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಮನಕರಗಿಸುವ ದೃಶ್ಯ

ಗೋಮೂತ್ರ ಮಾನವ ಬಳಕೆಗೆ ಅನರ್ಹ; ಹಾನಿಕಾರಕ ಬ್ಯಾಕ್ಟೀರಿಯಾ ಎಂದ ತಜ್ಞರು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:8 − two =
Remember me
