ಶಿವಮೊಗ್ಗ:ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಗೌರವ ಡಾಕ್ಟರೇಟ್​​​ಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ:20 ರೂ.ಗೆ ಊಟ ಮತ್ತು 50 ರೂ.ಗೆ ಸ್ನಾಕ್ಸ್​​​: ಸಾಮಾನ್ಯ ರೈಲು ಪ್ರಯಾಣಿಕರಿಗೂ ಶೀಘ್ರದಲ್ಲೇ ಆಹಾರ ವ್ಯವಸ್ಥೆಶಿವಮೊಗ್ಗದ ಸಾಗರ ತಾಲೂಕಿನ ಇರುವಕ್ಕಿ ಬಳಿ ಇರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಿಂದ ಮಾಜಿ ಸಿಎಂಗೆ ಗೌರವ ಡಾಕ್ಟರೇಟ್​​​ ಘೋಷಣೆ ಮಾಡಲಾಗಿದ್ದು, ಕುಲಪತಿ ಡಾ ಆರ್​​.ಸಿ. ಜಗದೀಶ್ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.ಈ ಸಮಾರಂಭದಲ್ಲಿ ಮೊದಲ ಬಾರಿಗೆ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಿದ್ದ ಮಾಜಿ ಸಿಎಂ ಬಿಎಸ್​​ವೈ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದು, ನಾಳೆ ಸಂಜೆ ನಡೆಯಲಿರುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.ಇದನ್ನೂ ಓದಿ:ಕಸದ ತೊಟ್ಟಿಯಿಂದ ಗ್ರಾಹಕರಿಗೆ ಸ್ನಾಕ್ಸ್​​ ನೀಡಿದ ಮಹಿಳೆ: ಘಟನೆ ಬೆಳಕಿಗೆ ಬಂದಿದ್ದು ಹೀಗೆ..ಸುದೀರ್ಘ ರಾಜಕೀಯ ಅನುಭವವಿರುವ ಹಿರಿಯ ಮುತ್ಸದ್ಧಿ, ಧೀಮಂತ ನಾಯಕ, ರೈತಬಂಧುಗೆ ಡಾಕ್ಟರೇಟ್‌ಗೆ ಭಾಜನರಾಗಿದ್ದು, ರಾಜ್ಯ ಬಿಜೆಪಿಯು ಟ್ವೀಟ್​​ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದೆ. ಈಗಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿರುವ ಮಾಜಿ ಸಿಎಂ ಬಿಎಸ್​​ವೈ, ರಾಜ್ಯ ಬಿಜೆಪಿಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ತಿಳಿಸಿದ್ದರು.(ಏಜೆನ್ಸೀಸ್​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 1 =
Remember me
