ಬೆಂಗಳೂರು:ಕಾಲೇಜಿನಲ್ಲಿ ಕಲಿತ ಶಿಕ್ಷಣ ಕೇವಲ ಪದವಿಗೆ ಮಾತ್ರ ಸೀಮಿತವಲ್ಲ; ಬದಲಿಗೆ ಆ ಶಿಕ್ಷಣದಿಂದ ಜೀವನವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಸಾಧ್ಯ ಎಂದು ಇಸ್ರೋ ಮಾಜಿ ನಿರ್ದೇಶಕ ಶ್ರೀಹರಿ ಶಾಸ್ತ್ರಿ ಅಭಿಪ್ರಾಯಿಸಿದ್ದಾರೆ. ಎಂ.ಎಸ್.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯವು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯನ ಜೀವನದಲ್ಲಿ ಜ್ಞಾನ ಮಹತ್ತರ ಪಾತ್ರವನ್ನು ವಹಿಸಲಿದೆ. ಕಾಲೇಜಿನಲ್ಲಿ ಕಲಿಯುವ ಶಿಕ್ಷಣ ಜ್ಞಾನ ಪ್ರೇರಣಾ, ಜ್ಞಾನ ಪಾಂಡಿತ್ಯ, ಜ್ಞಾನ ಶುದ್ಧೀಕರಣ, ಜ್ಞಾನದ ಆವಿಷ್ಕಾರಕ್ಕೆ ಮುನ್ನುಡಿ ಬರೆಯಲಿದ್ದು, ಈ ಜ್ಞಾನವನ್ನು ಬಳಕೆ ಮಾಡಿಕೊಂಡು ಜೀವನವನ್ನು ಉಜ್ವಲಗೊಳಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ರಾಮಯ್ಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ.
ಎಂಜಿನಿಯರಿಂಗ್‌ನಲ್ಲಿ ಹಲವು ವಿಭಾಗಗಳಿವೆ. ಅವುಗಳಲ್ಲಿ ಮೇಲು, ಕೀಳು ಎಂಬ ಭೇದವಿಲ್ಲ. ಎಲ್ಲ ವಿಭಾಗಕ್ಕೂ ಅದರದ್ದೇ ಪ್ರಾಮುಖ್ಯತೆ ಇದೆ. ಸಮಾಜದಲ್ಲಿ ಎಲ್ಲ ರೀತಿಯ ಎಂಜಿನಿಯರ್‌ಗಳು ಕೂಡ ಬೇಕು. 2030ರ ವೇಳೆಗೆ ವಿಶ್ವದಲ್ಲಿ 100 ಮಿಲಿಯಮನ್ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಇದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಇದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಎಂಎಸ್‌ಆರ್‌ಐಟಿ ಆಯೋಜಿಸಿದ್ದ ಪ್ರದರ್ಶನ-2024ರಲ್ಲಿ ಉತ್ತಮ ಪ್ರಾಜೆಕ್ಟ್‌ಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗೋಕುಲ ಶಿಕ್ಷಣ ಸಂಸ್ಥೆ ನಿರ್ದೇಶಕ ಎಂ.ಆರ್.ರಾಮಯ್ಯ, ಕಾರ್ಯದರ್ಶಿ ಬಿ.ಎಸ್.ರಾಮಪ್ರಸಾದ್, ಪ್ರಾಂಶುಪಾಲರಾದ ಡಾ.ಎನ್.ವಿ.ಆರ್.ನಾಯ್ಡು ಇನ್ನಿತರರಿದ್ದರು.
ನಾಲ್ಕು ವರ್ಷದಲ್ಲಿ ಕಲಿತ ಜ್ಞಾನವನ್ನು ಚಲಾಯಿಸಲು ನಿಮ್ಮ ಪದವಿ ಒಂದು ರೀತಿಯ ಪರವಾನಗಿ ಇದ್ದಂತೆ.ನೀವು ಒಳ್ಳೆಯ ಸಮಯಕ್ಕೆ ಹೊರಗೆ ಹೆಜ್ಜೆ ಇಡುತಿದ್ದೀರಿ,ಭಾರತ ಉತ್ತಮ ರೀತಿಯಲ್ಲಿ ಪ್ರಗತಿ ಸಾಧಿಸುತ್ತಿದ್ದು,ತಂತ್ರಜ್ಞಾನವು ವೇಗಗತಿಯಲ್ಲಿ ಬೆಳವಣಿಗೆ ಹೊಂದುತ್ತಿದೆ.ನೀವು ಅದರ ಜೊತೆಗೆ ಹೆಜ್ಜೆ ಹಾಕಬೇಕಿದೆ.ಜೀವನದಲ್ಲಿ ಸಿಗುವ ಅವಕಾಶಗಳನ್ನು ಬಳಕೆ ಮಾಡಿಕೊಂಡು ವೃತ್ತಿ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ವಿಜ್ಞಾನಿ ವಿ.ಕೆ.ಅತ್ರೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
“ಉನ್ನತ ವಿದ್ಯಾಭ್ಯಾಸಕ್ಕಾಗಿ ನಮ್ಮ ಕಾಲೇಜನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅಭಿನಂದನೆಗಳು.ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡಿದ್ದೇವೆ.ವಿದ್ಯಾರ್ಥಿಗಳು ಎಲ್ಲೇ ಹೋದರೂ ಮಾನವೀಯ ಮೌಲ್ಯಗಳ ನೆಲೆಯಲ್ಲಿ ಕೆಲಸ ಮಾಡಬೇಕು.”
–ಡಾ.ಎಂ.ಆರ್.ಸೀತಾರಾಮ್,ಉಪಾಧ್ಯಕ್ಷರು,ಗೋಕುಲ ಶಿಕ್ಷಣ ಸಂಸ್ಥೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − two =
Remember me
