ಮಾಜಿ ಮೇಯರ್​ ಸಂಪತ್​ರಾಜ್​ ಪಿಎ ಅರುಣ್​ನನ್ನು ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈತ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆಕೋರರ ಜತೆ ನಿರಂತರ ಸಂಪರ್ಕ ಹೊಂದಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದೇ ಹಿನ್ನೆಲೆಯಲ್ಲಿ ಅರುಣ್​ನನ್ನು ಬಂಧಿಸಲಾಗಿದೆ.
ಈತ ಪುಲಕೇಶಿನಗರದ ಮಾಜಿ ಮೇಯರ್​ ಸಂಪತ್​ರಾಜ್​ ಅವರ ಪಿಎ. ಇವನಿಗೆ ಎಸ್​ಡಿಪಿಐ ಜತೆ ನಿರಂತರ ಸಂಪರ್ಕವಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಆತ ಫೋನ್​, ಮೆಸೇಜ್​ಗಳ ಮೂಲಕ ಸಂಪರ್ಕ ಇಟ್ಟುಕೊಟ್ಟಿದ್ದ. ಅಷ್ಟೇ ಅಲ್ಲ ಕೆಲವೊಮ್ಮೆ ಭೇಟಿ ಕೂಡ ಮಾಡಿದ್ದ. ಗಲಭೆ ನಡೆಯುವ ದಿನ ಗಲಭೆಕೋರರ ಜತೆ ಹಲವು ಬಾರಿ ಮಾತನಾಡಿದ್ದ ಎನ್ನಲಾಗಿದೆ. ಹಾಗೇ ಸಂಪತ್​ರಾಜ್​ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
Sign in to your account
Please enter an answer in digits:5 × one =
Remember me
