ಹಾಸನ:ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಅರಕಲಗೂಡು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಾಜಿ ಸಚಿವ ಎ. ಮಂಜು ದಿಢೀರ್ ಕಾರ್ಯಕರ್ತರ ಸಭೆ ಕರೆದಿದ್ದು, ಇನ್ನು ಮುಂದೆ ಎಲ್ಲರು ಜೆಡಿಎಸ್​ ಪರ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಅರಕಲಗೂಡು ತಾಲೂಕಿನ ಹಣ್ಯಾಳು ಗ್ರಾಮದಲ್ಲಿ ಸಭೆ ಕರೆದು ಪ್ರತಿಜ್ಞೆ ಮಾಡಿಸಿದ್ದಾರೆ. ಇನ್ನು ಮುಂದೆ ನಾವೆಲ್ಲರು ಜೆಡಿಎಸ್​ನವರು, ಜೆಡಿಎಸ್ ಪಕ್ಷದಿಂದ ಎ.ಮಂಜು ಅವರನ್ನು ಗೆಲ್ಲಿಸಬೇಕು ಎಂದು ಪ್ರತಿಜ್ಞೆ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಸಾವಿರಕ್ಕೂ ಹೆಚ್ಚು ಎ.ಮಂಜು ಅಭಿಮಾನಿಗಳು ಕೈ ಎತ್ತಿ ಘೋಷಣೆ ಕೂಗುವ ಮೂಲಕ ಪ್ರತಿಜ್ಞೆ ಮಾಡಿದರು.
ಇದನ್ನೂ ಓದಿ:ಸ್ನೇಹಿತನ ತಲೆ, ಖಾಸಗಿ ಅಂಗ ಕತ್ತರಿಸಿ, ಹೃದಯ ಕಿತ್ತು ಮೃತದೇಹ ತೋರಿಸಲು ಗರ್ಲ್​ಫ್ರೆಂಡ್​ ಕರೆದೊಯ್ದ ಯುವಕ!
ಅರಕಲಗೂಡು ಕ್ಷೇತ್ರದಿಂದ ಜೆಡಿಎಸ್​ ಅಭ್ಯರ್ಥಿಯಾಗಿ ಎ.ಮಂಜು ಸ್ಪರ್ಧೆ ಮಾಡುವುದು ಫಿಕ್ಸ್ ಆಗಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರನ್ನು ಎ. ಮಂಜು ಭೇಟಿ ಮಾಡಿ ಬಂದಿದ್ದಾರೆ. ಎಚ್​.ಡಿ. ರೇವಣ್ಣ, ಎಚ್​ಡಿಕೆ ಹಾಗೂ ಎಚ್​ಡಿಡಿ ಜೊತೆ ಮಂಜು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅರಕಲಗೂಡು ಶಾಸಕ ರಾಮಸ್ವಾಮಿ ಈಗಾಗಲೇ ಜೆಡಿಎಸ್​ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎ. ಮಂಜು ಅವರನ್ನು ಜೆಡಿಎಸ್​ ಕಣಕ್ಕಿಳಿಸುತ್ತಿದೆ. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ ಮತ್ತು ಮಿತ್ರರಲ್ಲ ಎಂಬ ಮಾತಿಗೆ ಎ. ಮಂಜು ಅವರ ಜೆಡಿಎಸ್​ ಸೇರ್ಪಡೆ ಪೂರಕವಾಗಿದೆ. ಎಣ್ಣೆ ಸೀಗೆಕಾಯಿಯಂತಿದ್ದ ಜೆಡಿಎಸ್​ ಮತ್ತು ಎ. ಮಂಜು ಇದೀಗ ಒಟ್ಟಿಗೆ ಇರುವುದು ಕುತೂಹಲಕ್ಕೆ ಕಾರಣವಾಗಿದೆ. ಮಂಜು ಅವರು ಸದಾ ಜೆಡಿಎಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು.(ದಿಗ್ವಿಜಯ ನ್ಯೂಸ್​)

ಲೋಕಾಯುಕ್ತ ದಾಳಿ ಪ್ರಕರಣ: ವಿರೂಪಾಕ್ಷಪ್ಪ‌ಗೆ ಹೈಕೋರ್ಟ್​ ರಿಲೀಫ್​, ಮಧ್ಯಂತರ ಜಾಮೀನು ಮಂಜೂರು

ರೈಲಿನ ಕೊನೆಯ ಬೋಗಿ ಹಿಂದೆ ಇರುವ ‘X’ ಚಿಹ್ನೆಯ ಅರ್ಥವೇನು?

ವಿಧಾನಸೌಧದ ಆವರಣದಲ್ಲಿ ಒಡೆದು ಹೋಯ್ತು ಎಣ್ಣೆ ಬಾಟಲ್; ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿವೆ ಹಲವು ಅನುಮಾನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
