ಮೈಸೂರು:ಈ‌ ನಾಡಿನಲ್ಲಿ ನಾಲಿಗೆ ಮೇಲೆ ನಿಂತ ನಾಯಕ ಯಡಿಯೂರಪ್ಪ‌…ಮಾತಿಗೆ ತಪ್ಪದ ಮಗ ಯಡಿಯೂರಪ್ಪ…ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿ ಯಡಿಯೂರಪ್ಪ… ಇದು ಮಾಜಿ ಸಚಿವ ಎಚ್​.ವಿಶ್ವನಾಥ್​ ಆಡಿದ ಮಾತುಗಳು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್​, ಈ‌ ಮೇಲಿನ ಮಾತುಗಳಿಗೆ ನೀವು ಅಪವಾದ ಆಗಬೇಡಿ. ರಾಜ್ಯದಲ್ಲಿ ಮಾತಿನ ಮೇಲೆ ನಿಲ್ಲೋರು ನಿವೊಬ್ಬರೇ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ವಿಶ್ವಸಂಸ್ಥೆ ಅಧಿಕೃತ ವಾಹನದಲ್ಲೇ ಸಾರ್ವಜನಿಕವಾಗಿ ಉದ್ಯೋಗಿಗಳಿಬ್ಬರ ಸೆಕ್ಸ್: ವಿಡಿಯೋ ವೈರಲ್​​!
ನನಗೆ ಸಚಿವ ಸ್ಥಾನ ಕೊಟ್ಟೇ ಕೊಡಬೇಕೆಂದು ಹೇಳ್ತಿಲ್ಲ. ಕೊಡೋದು-ಬಿಡೋದು ನಿಮಗೆ ಬಿಟ್ಟ ವಿಚಾರ. ಆದರೆ, ನನ್ನ ಅನುಭವ ಬಳಸಿಕೊಳ್ಳಿ ಎಂದು ಕೇಳುತ್ತಿದ್ದೇನೆ. ದೇಶದ ರಾಜಕಾರಣ ನಡೆಯೋದೆ ಭಾವನೆ ಮತ್ತು ನಂಬಿಕೆ ಮೇಲೆ. ಇದು ಎರಡು ಮುಗಿದು ಹೋದರೆ ರಾಜಕಾರಣ ಇರೋದಿಲ್ಲ. ಜನನಾಯಕರು ಈ ಭಾವನೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಯಡಿಯೂರಪ್ಪನವರೇ ನೀವೂ ಮಾತು ತಪ್ಪದ ಮಗನಾಗಿ, ಮಾತು ತಪ್ಪಿದ ಮಗನಾಡಬೇಡಿ. ಯಡಿಯೂರಪ್ಪ ಅವರೇ ನಾಲಿಗೆ ಮೇಲೆ ನಿಂತ ನಾಯಕನಾಗಿ, ನಾಲಿಗೆ ಕಳೆದುಕೊಂಡ ನಾಯಕನಾಗಬೇಡಿ. ಇದು ಜನರ ಅಭಿಪ್ರಾಯವಾಗಿದೆ. ನನಗೇನು ಎಂಎಲ್​ಸಿ, ಶಾಸಕ ಸ್ಥಾನ ಕೊಟ್ಟರೆ ನನ್ನ ವ್ಯಕ್ತಿತ್ವ ಮೇಲೂ ಹೋಗಲ್ಲ, ಕೆಳಗೂ ಹೋಗಲ್ಲ. ವಿಶ್ವನಾಥ್ ಹೇಗಿದ್ರು ವಿಶ್ವನಾಥ್. ನನ್ನ ಅನುಭವವನ್ನು ಉಪಯೋಗಿಸಿಕೊಳ್ಳಿ ಪರೋಕ್ಷವಾಗಿ ಸಿಎಂ ಬಿಎಸ್​ವೈಗೆ ಎಚ್ಚರಿಕೆ ನೀಡಿದರು.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಹಸಿವಿಗಿಂತಲೂ ಕರೊನಾ ಉತ್ತಮ: ಕಾರ್ಮಿಕರಲ್ಲಿ ಶುರುವಾಯ್ತು ಮತ್ತೊಂದು ಭಯ…!
ಕರೊನಾ ಸೋಲಿಸೋಣ…ಅಭಿವೃದ್ಧಿ ಸಾಧಿಸೋಣ: ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ ಕರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 9 =
Remember me
