ಬೆಂಗಳೂರು:ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ದೀಕ್ಷೆ ಸ್ವೀಕರಿಸಿ25ಸಂವತ್ಸರಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ಜು.20ಕ್ಕೆ ದೀಕ್ಷಾ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು,ಭೋವಿ ಸಮಾಜವು ಕೆರೆಕಟ್ಟೆ,ರಸ್ತೆ ನಿರ್ಮಾಣದ ಕಾಯಕದಲ್ಲಿ ತೊಡಗಿಕೊಂಡ ಶ್ರಮಿಕ ವರ್ಗ.ಈ ಸಮುದಾಯವನ್ನು ಮೇಲೆತ್ತಬೇಕೆಂಬ ಹಿನ್ನಲೆಯಲ್ಲಿ ಸಮಾಜದ ಹಿರಿಯರು ಬಾಗಲಕೋಟೆಯಲ್ಲಿ ಭೋವಿ ಪೀಠವನ್ನು ಸ್ಥಾಪನೆ ಮಾಡಿದರು.ಆ ಪೀಠದ ಮೂರನೇ ಸ್ವಾಮಿಗಳಾಗಿರುವ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಬಾಗಲಕೋಟೆ ಹಾಗು ಚಿತ್ರದುರ್ಗವನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಸಮಾಜದ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.ಶ್ರೀಗಳು ಪೀಠವನ್ನಲಂಕರಿಸಿ25ವರ್ಷಗಳು ಕಳೆದಿವೆ.ಆ ಹಿನ್ನೆಲೆಯಲ್ಲಿ ದೀಕ್ಷಾ ರಜತ ಮಹೊತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಡಿಸಿಎಂ ಡಿ.ಕೆ.ಶಿವಕುಮಾರ್ ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದಾರೆ.ಮಂತ್ರಾಲಯ ಶ್ರೀಗಳು,ಕೊಪ್ಪಳ ಗವಿಮಠದ ಶ್ರೀಗಳು,ಆದಿಚುಂಚನಗಿರಿ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ.ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ,ಶೋಭಾ ಕರಂದ್ಲಾಜೆ,ವಿ.ಸೋಮಣ್ಣ ಸೇರಿದಂತೆ ನಾಡಿನ ವಿವಿಧ ಮುಖಂಡರು,ಮಠಾಧೀಶರು,ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ,ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್,ದೇವನಹಳ್ಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್,ಮಾಜಿ ಶಾಸಕರಾದ ನಾಗರಾಜ,ಸಮಾಜದ ಮುಖಂಡರಾದ ರಾಮಪ್ಪ,ದುರ್ಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಭೋವಿ ಸಮಾಜ ಕರ್ನಾಟಕ ಮಾತ್ರವಲ್ಲದೆ ದೇಶದ ಎಲ್ಲ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಿಸಿಕೊಳ್ಳುತ್ತಿದ್ದು,ಎಲ್ಲರನ್ನು ಒಟ್ಟಾಗಿಸಿ ಸಮುದಾಯವನ್ನು ರಾಷ್ಟ್ರಮಟ್ಟದಲ್ಲಿ ಸಂಘಟಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
‘ಭೋವಿ ಸಮಾಜೋತ್ಸವ’ ಎಂಬ ಹೆಸರಿನಲ್ಲಿ ನಡೆಯಲಿರುವ ಶ್ರೀಗಳ ದೀಕ್ಷಾ ರಜತ ಮಹೋತ್ಸವದ ಮೂಲಕ ರಾಷ್ಟ್ರಮಟ್ಟದ ಸಂಘಟನೆಗೆ ಚಾಲನೆ ದೊರೆಯಲಿದೆ.ಇದೇ ವೇಳೆ ರಕ್ತದಾನ ಶಿಬಿರ,ಸಮುದಾಯದ ವಧುವರರ ಸಮಾವೇಶ,ಸಮುದಾಯದ ಜನಪ್ರತಿನಿಧಿಗಳಿಗೆ ಸನ್ಮಾನ,ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ.ಕಾರ್ಯಕ್ರಮದಲ್ಲಿ ಹೊರರಾಜ್ಯದ ಮುಖಂಡರು ಭಾಗಿಯಾಗಲಿದ್ದಾರೆಂದು ಅವರು ವಿವರಿಸಿದರು.
‘ಯಾವುದೇ ಸಮುದಾಯ ಸದೃಢಗೊಳ್ಳಬೇಕಾದರೆ ಸಮಾನತೆ ಸಾಧಿಸಬೇಕು.ಭೋವಿ ಸಮುದಾಯಕ್ಕೆ ಧಾರ್ಮಿಕ ಸ್ವಾತಂತ್ರ್ಯವನ್ನು ಒದಗಿಸುವುದಕ್ಕಾಗಿಯೇ ಹಿರಿಯರು ಗುರುಪೀಠವನ್ನು ಸ್ಥಾಪಿಸಿದ್ದರು.ಪೀಠವು ಮುಂದಿನ10ವರ್ಷದಲ್ಲಿ ಮುಂದುವರೆದ ಸಮಾಜಗಳ ಮಟ್ಟಕ್ಕೆ ಸಮುದಾಯವನ್ನು ಕೊಂಡೊಯ್ಯುವ ಗುರಿ ಹೊಂದಿದೆ.ಅದಕ್ಕೆ ರಜತ ಮಹೋತ್ಸವವು ನಾಂದಿಯಾಗಲಿದೆ‘
–ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು,ಭೋವಿ ಗುರುಪೀಠ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × three =
Remember me
