ಬೆಂಗಳೂರು:ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋದಲ್ಲಿದ್ದ ಯುವತಿಯ ಮನೆ ವಿಳಾಸವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಉತ್ತರ ಕರ್ನಾಟಕ ಮನೆ ವಿಳಾಸವನ್ನು ಕಬ್ಬನ್​ ಪಾರ್ಕ್​ ಪೊಲೀಸರು ಪತ್ತೆ ಮಾಡಿದ್ದಾರೆ. ಆಡಿಯೋದಲ್ಲಿ ಮಾತನಾಡಿರುವ ಹಾಗೆ ಯುವತಿ ಪಿಜಿಯಲ್ಲಿ ಇರಲಿಲ್ಲ. ಬದಲು ಆರ್​.ಟಿ.ನಗರದ ಮನೆಯೊಂದರಲ್ಲಿ ಬಾಡಿಗೆಗೆ ಇದ್ದಳು ಎಂದು ತಿಳಿದುಬಂದಿದೆ.
ಸಿಡಿ ಬಿಡುಗಡೆ ಆಗೋ ದಿನದಿಂದ ಯುವತಿ ಕಾಣೆಯಾಗಿದ್ದಾಳೆ. ಇದುವರೆಗೂ ಯುವತಿಯ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಮನೆ ವಿಳಾಸ ಪಡೆದು ಹೋಗಿ ವಿಚಾರಣೆ ಮಾಡಿರುವ ಪೊಲೀಸರಿಗೆ ಯುವತಿ ಸ್ವಂತ ಊರಿನಲ್ಲಿಯೂ ಮತ್ತು ಬೆಂಗಳೂರಿನಲ್ಲಿಯೂ ಇಲ್ಲ ಎಂಬ ಮಾಹಿತಿ ತಿಳಿದುಬಂದಿದೆ.
ಇದನ್ನೂ ಓದಿರಿ:ಬೇಗ ಮನೆಗೆ ಬಂದು ಬಿಡಿ: ಆರ್​. ಅಶ್ವಿನ್​ಗೆ ಪತ್ನಿಯ ‘ಪ್ರೀತಿ’ಪೂರ್ವಕ ಸಂದೇಶ..!
ಫೆ.28 ರಂದು ಯುವತಿಯ ಮೊಬೈಲ್ ಫೋನ್ ಸ್ವಿಚ್ ಆಪ್ ಆಗಿದೆ. ಇದುವರೆಗೂ ಯುವತಿಯ ಮೊಬೈಲ್ ನಂಬರ್ ಸಹ ಆನ್ ಆಗಿಲ್ಲ. ಆಕೆಯ ಮೊಬೈಲ್ ಸಿಡಿಆರ್ ಆಧರಿಸಿ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಆಕೆಯ ಸ್ನೇಹಿತರನ್ನು ಗೌಪ್ಯವಾಗಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಯುವತಿಯ ಕಾಲ್ ಲೀಸ್ಟ್ ಆಧರಿಸಿ ಕೆಲವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಯುವತಿಯ ಪತ್ತೆಗಾಗಿ ಪೊಲೀಸರಿಂದ ತೀವ್ರ ಶೋಧ ನಡೆಯುತ್ತಿದ್ದು, ಯಾವುದೇ ಕ್ಷಣದಲ್ಲಾದ್ರೂ ಯುವತಿಯನ್ನು ಪೊಲೀಸರು ಪತ್ತೆ ಮಾಡಲಿದ್ದಾರೆ.(ದಿಗ್ವಿಜಯ ನ್ಯೂಸ್​)
ಲ್ಯಾಗ್​ ಮಂಜ ಹೇಳಿದ್ದನ್ನು ಕೇಳಿ ಶಾಕ್​ ಆದ ದಿವ್ಯಾ ಸುರೇಶ್​: ಬಾಡಿತು ನಗು ಮುಖ..!

ಸಂಕಷ್ಟದಲ್ಲೂ ಮಿಡಿದ ಸರ್ಕಾರ: ಕೋವಿಡ್ ಸಂದರ್ಭ ನೊಂದವರಿಗೆ 2,272 ಕೋಟಿ ರೂ. ಪ್ಯಾಕೇಜ್

14ರ ಬಾಲಕನನ್ನು ರೇಪ್​ ಮಾಡಿ ಸಿಕ್ಕಿಬಿದ್ದಿದ್ದ ಮಹಿಳೆ ಈಗ ಗರ್ಭಿಣಿ: ವೈದ್ಯರ ವರದಿಯಲ್ಲಿ ಸತ್ಯಾಂಶ ಬಯಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − thirteen =
Remember me
