ಬೆಂಗಳೂರು:ಮಾಜಿ ಸಚಿವರ ಸೆಕ್ಸ್​ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಎಂದು ಹೇಳಲಾಗಿರುವ ಯುವತಿಗಾಗಿ ಖಾಕಿ ಪಡೆ ತೀವ್ರ ತಲಾಶ್​ ನಡೆಸುತ್ತಿದೆ.
ಈಗಾಗಲೇ ಬೆಂಗಳೂರಿನ 45ಕ್ಕೂ ಹೆಚ್ಚು ಪಿಜಿಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರ್​.ಟಿ. ನಗರದಲ್ಲಿರುವ ಪ್ರತಿಯೊಂದು ಪಿಜಿಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಯುವತಿಯ ಸುಳಿವು ಮಾತ್ರ ಇನ್ನು ಪತ್ತೆಯಾಗಿಲ್ಲ.
ಇದನ್ನೂ ಓದಿರಿ:14ರ ಬಾಲಕನನ್ನು ರೇಪ್​ ಮಾಡಿ ಸಿಕ್ಕಿಬಿದ್ದಿದ್ದ ಮಹಿಳೆ ಈಗ ಗರ್ಭಿಣಿ: ವೈದ್ಯರ ವರದಿಯಲ್ಲಿ ಸತ್ಯಾಂಶ ಬಯಲು!
ಇಷ್ಟೇ ಅಲ್ಲದೆ, ಯುವತಿಯ ಟವರ್ ಲೊಕೇಷನ್ ಆಧಾರದ ಮೇಲೆ ಶೋಧಕಾರ್ಯ ನಡೆಯುತ್ತಿದೆ. ಯುವತಿ ಎಲ್ಲೆಲ್ಲಿ ಓಡಾಡಿದ್ದಾಳೋ ಅಲ್ಲೆಲ್ಲ ಖಾಕಿ ಪಡೆ ಪರಿಶೀಲನೆ ಮಾಡುತ್ತಿದೆ. ಸಿಸಿಬಿ ಪೊಲೀಸರು ಈಗಾಗಲೇ ತಾಂತ್ರಿಕ ತನಿಖೆ ನಡೆಸುತ್ತಿದ್ದಾರೆ. ಆಕೆಯ ಕಾಲ್ ಡಿಟೇಲ್ಸ್, ಆಕೆ ಯಾರೊಂದಿಗೆ ಸಂಪರ್ಕದಲ್ಲಿದ್ದಳು? ಯಾರೊಡನೆ ಮಾತುಕತೆ ನಡೆಸಿದ್ದಳು? ಎಲ್ಲದರ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಯುವತಿಯ ಕುಟುಂಬಸ್ಥರ ಮೇಲೂ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ. ಪ್ರಕರಣದಲ್ಲಿ ಯುವತಿಯ ಹೇಳಿಕೆಯೇ ಮುಖ್ಯ ಆಗಿರುವುದರಿಂದ ಆಕೆಗಾಗಿ ಪೊಲೀಸರು ಎಲ್ಲ ಕಡೆ ಹುಡುಕಾಟ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಉಪಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್ ನೀಡಿದ ವಿಜಯೇಂದ್ರ..!

ಒಕ್ಕಲಿಗರ ಸಂಘದ ಚುನಾವಣೆಗೆ ಚುನಾವಣಾಧಿಕಾರಿಯಾಗಿ ಪಿ.ಎನ್. ರವೀಂದ್ರ ನೇಮಕ

ಒಂದೂವರೆ ಕೋಟಿ ರೂಪಾಯಿ ವಂಚಿಸಿರುವ ಖತರ್ನಾಕ್​ ದಂಪತಿಯ ಬಂಧನ; ಹಲವಾರು ವರ್ಷಗಳಿಂದ ಅಕ್ರಮವಾಗಿ ಚೀಟಿ ವ್ಯವಹಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
