ಮಂಡ್ಯ:ಕಾವೇರಿ ನೀರಿನ ಸಮಸ್ಯೆ ಕುರಿತು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರು ಬರೆದಿರುವ ನಾಲ್ಕು ಪುಟದ ‘ಕರ್ನಾಟಕದಲ್ಲಿ ಹಳೆ ಮೈಸೂರು ಪ್ರಾಂತ್ಯ ಹಾಗೂ ಕಾವೇರಿಯ ಕಣ್ಣೀರಿನ ಕಥೆ ಮತ್ತು ವ್ಯಥೆ’ ಕರಪತ್ರವನ್ನು ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿಯಲ್ಲಿ ಬಿಡುಗಡೆ ಮಾಡಲಾಯಿತು.ಈ ವೇಳೆ ಮಾತನಾಡಿದ ಅವರು, ಕಾವೇರಿ ನೀರಿನ ವಿವಾದದ ಹುಟ್ಟು, ಬೆಳವಣಿಗೆ, ಆಗುತ್ತಿರುವ ಸಮಸ್ಯೆ ಹಾಗೂ ಇದಕ್ಕೆ ತೆಗೆದುಕೊಳ್ಳಬೇಕಾದ ಪರಿಹಾರದ ಬಗ್ಗೆ ಮಾಹಿತಿ ಕರಪತ್ರದಲ್ಲಿದೆ. ಪ್ರಮುಖವಾಗಿ ಕಾವೇರಿ ವಿವಾದ ಬಗೆಹರಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರಕ್ಕೆ ಹಲವು ಮಾರ್ಗಗಳನ್ನು ನೀಡಲಾಗಿದೆ. ಅಂತೆಯೇ ಇವುಗಳನ್ನು ಸುಪ್ರೀಂ ಕೋರ್ಟ್ ಎದುರು ಮಂಡಿಸಿ ನ್ಯಾಯಕ್ಕೆ ಬೇಡಿಕೆಯನ್ನಿಡುವುದರ ಜತೆಗೆ ಪ್ರಧಾನಮಂತ್ರಿ ಅವರ ಮಧ್ಯಸ್ಥಿಕೆಗೆ ಒತ್ತಾಯಿಸಬೇಕೆಂದು ತಿಳಿಸಿದ್ದಾರೆ.*ಮಳೆ ಕಡಿಮೆಯಾಗಿ ಬರ ಎದುರಾಗುವ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಿ ಹಾಗೂ ನಿಯಂತ್ರಣ ಮಂಡಳಿ ‘ಡಿಗ್ರಿ ಆಫ್ ಡಿಫಿಷಿಯೆನ್ಸಿ’ ಘೋಷಣೆ ಮಾಡಲೇಬೇಕು. ಹಾಗೆಯೇ ಹೆಚ್ಚುವರಿ ಮಳೆಯಾದ ಸಂದರ್ಭದಲ್ಲಿ ನೀರಿನ ಹಂಚಿಕೆ ಬಗ್ಗೆ ನಿಗದಿಪಡಿಸಬೇಕು.*ತೀವ್ರ ಬರಗಾಲ ಎದುರಾದಾಗ ಕರ್ನಾಟಕ ಹಾಗೂ ತ.ನಾಡಿನಲ್ಲಿರುವ ಡ್ಯಾಂನಲ್ಲಿರುವ ನೀರಿನ ಪ್ರಮಾಣವನ್ನು ನಿರ್ವಹಣಾ ಮಂಡಳಿ ಖುದ್ದು ಪರಿಶೀಲಿಸಿ ಕರ್ನಾಟಕದಿಂದ ನೀರು ಬಿಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು.*ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿರ್ವಹಣಾ ಮಂಡಳಿ ಸದಸ್ಯರನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾವಣೆ ಮಾಡಬೇಕು. ಜತೆಗೆ ಎರಡು ರಾಜ್ಯ ಸೂಚಿಸುವ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನು ನೇಮಿಸುವುದು.*ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಸಾಧಾರಣ ಮಳೆಯಾದ ಸಂದರ್ಭದಲ್ಲಿ ತ.ನಾಡಿಗೆ ಹರಿಸುವ ನೀರಿನ ಪ್ರಮಾಣ ಕಡಿಮೆಯಾದರೆ, ಅದನ್ನು ಸೆಪ್ಟಂಬರ್ ನಂತರ ಪೂರ್ಣಗೊಳಿಸುವುದು. ಜೂನ್‌ನಿಂದ ಸೆಪ್ಟಂಬರ್‌ವರೆಗೆ ನೀರಿನ ಪ್ರಮಾಣ ಕಡಿಮೆಯಾದಾಗ ತ.ನಾಡು ತನ್ನ ಡ್ಯಾಂಗಳಲ್ಲಿ ನೀರಿದ್ದರೆ ಅದನ್ನು ಉಪಯೋಗಿಸುವುದರ ಜತೆಗೆ ಯಥೇಚ್ಚವಾಗಿರುವ ಅಂತರ್ಜಲ ಬಳಸುವುದು.*ಮೇಕೆದಾಟು ಡ್ಯಾಂ ನಿರ್ಮಾಣ ಮಾಡಲು ಅನುಮತಿಗೆ ಒತ್ತಾಯಿಸುವುದು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + nine =
Remember me
