ಮೈಸೂರು: ಪಕ್ಷದಲ್ಲಿ 20ರಿಂದ 30 ವರ್ಷ ಸೇವೆ ಸಲ್ಲಿಸಿದವರು ಈಗ ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ಪಕ್ಷಾಂತರ ಕೇವಲ ಕಾಂಗ್ರೆಸ್​ನಲ್ಲಿ ಮಾತ್ರ ಅಲ್ಲ ಎಲ್ಲ ಪಕ್ಷಗಳಲ್ಲೂ ಇದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಹೇಳಿದರು.
ಮೈಸೂರು ಭಾಗದಲ್ಲಿ ಚುನಾವಣೆಗೂ ಮೊದಲು ಕೆಲವು ನಾಯಕರು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದರು. ಈಗ ನೋಡಿ ಏನಾಗಿದೆ ಎಂದು ಮಾಜಿ ಶಾಸಕ ಎಚ್​.ವಿಶ್ವನಾಥ್​ ಅವರನ್ನು ಪರೋಕ್ಷವಾಗಿ ಟೀಕಿಸಿದರು.
ಮಾಧ್ಯಮಗಳಲ್ಲೂ ಈಗ ರಾಜಕಾರಣಿಗಳಾಗಿದ್ದಾರೆ. ಬೇರೆ ಕ್ಷೇತ್ರದಂತೆ ಮಾಧ್ಯಮ ಕ್ಷೇತ್ರ ಕೂಡ ಹೆಸರುಕೆಡಿಸಿಕೊಂಡಿದೆ. ನಮ್ಮ ನೆರಳನ್ನು ನಾವೇ ನಂಬದಂತಹ ಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದರು.ಕಾಂಗ್ರೆಸ್​ ಅಧ್ಯಕ್ಷ ಹುದ್ದೆಗೆ ನಾನು ಲಾಬಿ ಮಾಡುತ್ತಿಲ್ಲ. ಹೈಕಮಾಂಡ್​ ಸೂಚಿಸುವ ವ್ಯಕ್ತಿ ಅಧ್ಯಕ್ಷರಾಗುತ್ತಾರೆ. ನಾನು ಕೇವಲ ಕಾಂಗ್ರೆಸ್​ ಕಾರ್ಯಕರ್ತ ಎಂದು ಅವರು ಹೇಳಿದರು.
ಬಿಜೆಪಿಯಲ್ಲಿ ಹೊಸಬರ ಆಡಳಿತ: ಬಿಜೆಪಿಯಲ್ಲಿ ಹೊಸಬರು ಆಡಳಿತ ನಡೆಸುತ್ತಿದ್ದಾರೆ. ಹಳಬರು ಇದನ್ನು ನೋಡುತ್ತಾ ಕುಳಿತಿದ್ದಾರೆ. ಹಳಬರಿಂದ ಬಿಜೆಪಿಯಲ್ಲಿ ಬದಲಾವಣೆಯ ಪರ್ವ ಸಂಭವಿಸಲಿದೆ ಕಾದು ನೋಡುತ್ತಿರಿ ಎಂದು ಬಾಂಬ್​ ಸಿಡಿಸಿದರು. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − fifteen =
Remember me
