ಬಾಗಲಕೋಟೆ:ಸುಭದ್ರ ಸರ್ಕಾರಕ್ಕೆ ಅಭದ್ರತೆ ಯಾಕೆ ಕಾಡಬೇಕು? ಸರ್ಕಾರವನ್ನು ಅಲಗಾಡಿಸುವ ಪಾಪದ ಕೆಲಸಕ್ಕೆ ಕೈಹಾಕಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಸ್ವ-ಸಹಾಯ ಸಂಘಗಳಿಂದ ತಯಾರಿಸಿದ ವಸ್ತುಗಳ ಪ್ರದರ್ಶನ
ಇಂದು ಬಾಗಲಕೋಟೆಯಲ್ಲಿ ಬಿಜೆಪಿಯವರು ಸರ್ಕಾರ‌ ಅಲಗಾಡಿಸುವ ಕೆಲಸ ಮಾಡ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, “ಕಾಂಗ್ರೆಸ್​ನಲ್ಕೇ ಶಾಸಕರು ಬಂಡಾಯ ಎದ್ದಿದ್ದಾರೆ. ಯಾವುದೇ ಅಡತಡೆ, ಅಡಚಣೆ ಇಲ್ಲದೇ 5 ವರ್ಷ, ಜನರಿಗೆ ಕೊಟ್ಟ ಭರವಸೆಗಳನ್ನು ಅವರು ಈಡೇರಿಸಬೇಕು. ನಾವು ಸರ್ಕಾರವನ್ನು ಅಲುಗಾಡಿಸುವ ಕೆಲಸ‌ ಮಾಡಲ್ಲ. ಆ ಪಾಪದ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ” ಎಂದರು.
ಅವರಲ್ಲೇ ಗುಂಪುಗಳಾಗಿವೆ. ಡಿಕೆಶಿ, ಮುನಿಯಪ್ಪ, ಪರಮೇಶ್ವರ, ಸಿದ್ದರಾಮಯ್ಯ ಅವರದ್ದು ಒಂದು ಗುಂಪು ಎಂದರು. ಇನ್ನು ಸಚಿವ ತಿಮ್ಮಾಪುರ್​ಗೆ ಪರೋಕ್ಷ ಟಾಂಗ್ ಕೊಟ್ಟ ಗೋವಿಂದ ಕಾರಜೋಳ, “ಸಿಎಂ ಸ್ಥಾನಕ್ಕೆ ಹಣಿಕೆ ಹಾಕಿದ್ರು ಅಂತಾ ಹೇಳಿದರು. ಅವರು (ತಿಮ್ಮಾಪುರ) ಮುಖ್ಯಮಂತ್ರಿಯಾಗಬೇಕು. 50 ವರ್ಷದ ನಂತರ ನಮ್ಮ ಜಿಲ್ಲೆಗೆ ಅವಕಾಶ ಸಿಕ್ಕಂತಾಗುತ್ತದೆ” ಎಂದು ಲೇವಡಿ ಮಾಡಿದರು.
ಇದನ್ನೂ ಓದಿ:ಸಂಸತ್ತಿನ ಚಳಿಗಾಲದ ಅಧಿವೇಶನದ ದಿನಾಂಕ ನಿಗದಿ: ಎಂದಿನಿಂದ, ಎಷ್ಟು ದಿನ? ಇಲ್ಲಿದೆ ವಿವರ..
ಬಿಜೆಪಿಯಿಂದ‌ ಕಾಂಗ್ರೆಸ್ ನಾಯಕರನ್ನು ಸೆಳೆಯವ ವಿಚಾರಕ್ಕೆ ಸ್ಪಂದಿಸಿದ ಅವರು, “31 ಜನ ಶಾಸಕರು ಸಿದ್ದರಾಮಯ್ಯ ಬಗ್ಗೆ ಬಂಡಾಯ ಎದ್ದಿದ್ದಾರೆ. ಹಾಲು ಕುಡಿದು ಸಾಯುವವರಿಗೆ, ವಿಷ ಹಾಕಿ ಸಾಯಿಸುವುದಿಲ್ಲ” ಎಂದರು. ಇನ್ನು ಸರ್ಕಾರ ಪತನವಾಗುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ, ಕಾಯ್ದು ನೋಡಿ ಎಂದು ನಸುನಕ್ಕು ಸ್ಥಳದಿಂದ ತೆರಳಿದರು.

VIDEO | ಪೆಟ್ರೋಮ್ಯಾಕ್ಸ್​ಗೂ ಈ ಕುಟುಂಬಕ್ಕೂ ಇದೆ 150 ವರ್ಷಗಳ ನಂಟು!; ಇದು ಊರು ಬೆಳಗುತ್ತಿದ್ದ ಬೆಳಕಿನ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
