ಶಿವಮೊಗ್ಗ:ರೈಲ್ವೆ ಯೋಜನೆಗಳಿಗೆ ಉಚಿತ ಭೂಮಿ, ಅರ್ಧದಷ್ಟು ಅನುದಾನ ನೀಡಿದ ದೇಶದ ಏಕೈಕ ಸಿಎಂ ಯಡಿಯೂರಪ್ಪ. ನಾನು ರೈಲ್ವೆ ಖಾತೆ ರಾಜ್ಯ ಸಚಿವನಾಗಿದ್ದಾಗ ಅವರು ನನ್ನೊಂದಿಗೆ ವ್ಯವಹರಿಸಿದ ರೀತಿ ಅನುಕರಣೀಯ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದಲ್ಲಿ ಮಾದಿಗ ದಂಡೋರ ಸಮಿತಿ ಏರ್ಪಡಿಸಿದ್ದ ಮಾದಾರ ಚನ್ನಯ್ಯ ಜಯಂತಿ ಹಾಗೂ ಮಾದಿಗ ಆಪ್ ಬಿಡುಗಡೆ ಸಮಾರಂಭದಲ್ಲಿ ಬಿಎಸ್​ವೈ ಹಾಗೂ ಬಿಜೆಪಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಸದಾಶಿವ ಆಯೋಗದ ವರದಿ ಜಾರಿಗೆ ನಾವೆಲ್ಲ ಬಹಳ ಪ್ರಯತ್ನ ಮಾಡಿದ್ದೇವೆ. ನಮ್ಮಿಂದ ಆಗಲಿಲ್ಲ. ಅದನ್ನು ಜಾರಿಗೆ ತರುವ ಶಕ್ತಿ ಯಡಿಯೂರಪ್ಪ ಅವರಿಗಿದೆ. ಅವರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು. ಸಮುದಾಯಕ್ಕೆ ಸೇರಿದ ಗೋವಿಂದ ಕಾರಜೋಳಗೆ ಬಿಜೆಪಿ ಡಿಸಿಎಂ ಸ್ಥಾನಮಾನ ನೀಡಿದೆ. 70 ವರ್ಷಗಳಲ್ಲಿ ಇದು ಇತಿಹಾಸ. ನಮ್ಮ ಸಮುದಾಯದ ಮೇಲೆ ಬಿಎಸ್​ವೈಗೆ ಎಷ್ಟು ಪ್ರೀತಿ ಇದೆ ಎಂಬುದಕ್ಕೆ ಇದು ನಿದರ್ಶನ ಎಂದು ಕೊಂಡಾಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 10 =
Remember me
