ಬೆಂಗಳೂರು: ನಗರದ ಕಿಮ್ಸ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಗಡಿಯ ಮಾಜಿ ಶಾಸಕ ಎಚ್​.ಸಿ. ಬಾಲಕೃಷ್ಣ ಅವರ ಪುತ್ರಿ ಡಾ. ರಚನಾ ಅವರಿಗೆ ಕೋವಿಡ್​ ಸೋಂಕು ತಗುಲಿದೆ.
ತಮ್ಮ ಪುತ್ರಿಗೆ ಎರಡು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್​-19 ಸೋಂಕು ದೃಢಪಟ್ಟಿದೆ ಎಂದು ಎಚ್​.ಸಿ. ಬಾಲಕೃಷ್ಣ ಟ್ವೀಟ್​ ಮಾಡಿದ್ದಾರೆ.

ಎಚ್​.ಸಿ. ಬಾಲಕೃಷ್ಣ ಸೋಮವಾರ 500 ಮಂದಿಗೆ ಆಹಾರದ ಕಿಟ್​ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆಟೋರಿಕ್ಷಾ, ಕಾರು ಮತ್ತಿತರ ವಾಹನಗಳ ಚಾಲಕರಿಗೆ ಈ ಆಹಾರದ ಕಿಟ್​ ಅನ್ನು ಮಾಗಡಿಯಲ್ಲಿ ವಿತರಿಸಲಾಗಿತ್ತು. ಮಾಜಿ ಶಾಸಕರ ಪುತ್ರಿಗೂ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲೂ ಸೋಂಕು ತಗುಲಿರುವ ಆತಂಕ ಮನೆ ಮಾಡಿದೆ.
ಆರೋಗ್ಯ ಸಚಿವ ಡಾ.ಸುಧಾಕರ್​ ತಂದೆಗೆ ಕರೊನಾ ಸೋಂಕು; ಕುಟುಂಬದ ಸದಸ್ಯರಿಗೂ ಆತಂಕ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:thirteen − eleven =
Remember me
