ಚಿಕ್ಕಬಳ್ಳಾಪುರ: ಲೀಟರ್ ಹಾಲಿಗೆ ರೈತರಿಗೆ ನೀಡುತ್ತಿದ್ದ ಹಣದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು 2 ರೂ ಕಡಿತಗೊಳಿಸಿರುವುದನ್ನು ಖಂಡಿಸಿ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕೈಗೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಶಾಸಕರು ಕೈಯಲ್ಲಿ ತಲೆ ಹೊಡೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದು ಕೈನಲ್ಲಿ ಬೇಡ, ಕಲ್ಲು ತೆಗೆದುಕೊಂಡು ಹೊಡೆದುಕೊಳ್ಳಿ ಎಂದು ಸಚಿವರು ಕಿಡಿಕಾರಿದ್ದಾರೆ.ಮೊದಲಿನಿಂದಲೂ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಡಾ ಎಂ.ಸಿ.ಸುಧಾಕರ್ ಮತ್ತು ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ನಡುವೆ ರಾಜಕೀಯ ಹೋರಾಟ ನಡೆಯುತ್ತಿದ್ದು ಆಗಾಗ ಬೆಂಬಲಿಗರ ಗಲಾಟೆಯ ಮೂಲಕ ವೈಯಕ್ತಿಕ ಪ್ರತಿಷ್ಠೆಯನ್ನು ಪ್ರದರ್ಶಿಸಿದ್ದು ಇದೆ.
ತಲೆ ಚಚ್ಚಿಕೊಂಡ ಕೃಷ್ಣಾರೆಡ್ಡಿಡಾ ಎಂ.ಸಿ.ಸುಧಾಕರ್​ ಜಿಲ್ಲಾ ಉಸ್ತುವಾರಿ ಸಚಿವರಾಗಿರೋದು ದೊಡ್ಡ ದುರಂತ ಎಂದು ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿ ತಲೆ ಚಚ್ಚಿಕೊಂಡಿದ್ದಾರೆ. ಸಚಿವರು, ಅವರ ತಂದೆ ಚೌಡರೆಡ್ಡಿ ಮತ್ತು ಸಹೋದರ ಬಾಲಾಜಿ ಭೂಗಳ್ಳರು. ಖರಾಬ್​ ಜಮೀನಿನಲ್ಲಿ 42 ನಿವೇಶನಗಳನ್ನು ವಿಂಗಡಿಸಿ, ಮಾರಲಾಗಿದೆ. ಮುಖ್ಯಮಂತ್ರಿಗಳು ಈ ಕಡೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.ಸರ್ಕಾರಿ ಆಸ್ತಿಗಳನ್ನು ಮಾರಲಾಗುತ್ತಿದೆ. ಭೂಗಳ್ಳರು ಸಚಿವರಾಗಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈಗ ಅವರ ಜತೆಯಲ್ಲಿಯೇ ಕುಳಿತುಕೊಳ್ಳುವುದರಿಂದ ನ್ಯಾಯವನ್ನು ಏನನ್ನು ನಿರೀಸಲು ಸಾಧ್ಯ? ಎಂದು ಕಿಡಿಕಾರಿದ್ದಾರೆ.
ಕಲ್ಲಲ್ಲಿ ತಲೆ ಹೊಡೆದುಕೊಳ್ಳಿಮತ್ತೊಂದೆಡೆ ಕೇವಲ ಕೈನಲ್ಲಿ ಅಲ್ಲ, ಕಲ್ಲು ತೆಗೆದುಕೊಂಡು ತಲೆಗೆ ಚಚ್ಚಿಕೊಳ್ಳಬೇಕಾಗಿತ್ತು ಎಂದು ಮಾಜಿ ಶಾಸಕ ಎಂ.ಕೃಷ್ಣಾರೆಡ್ಡಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್​ ತಿರುಗೇಟು ನೀಡಿದರು. ನಿನ್ನೆ ಮೊನ್ನೆ ರಾಜಕಾರಣಕ್ಕೆ ಬಂದಿಲ್ಲ. ಮೊದಲಿನಿಂದಲೂ ಕುಟುಂಬವು ಅಧಿಕಾರವನ್ನು ನಿರ್ವಹಿಸಿಕೊಂಡು ಬರುತ್ತಿದೆ. ಇದರಿಂದ ಇತರರಿಂದ ಕಲಿಯಬೇಕಾಗಿಲ್ಲ. ಈಗಾಗಲೇ ಅವರನ್ನು ಜನರು ಸೋಲಿಸಿ, ಮನೆಗೆ ಕಳುಹಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + ten =
Remember me
