ತುಮಕೂರು:ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರು ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆ ಎಂದು ಮಾಜಿ ಶಾಸಕ ಸುರೇಶ್​ ಗೌಡ ಗಂಭೀರ ಆರೋಪ ಮಾಡಿದ್ದು, ಜಿಲ್ಲಾ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ
ತುಮಕೂರು ಗ್ರಾಮಾಂತರ ಕ್ಷೇತ್ರದ ಅರೆಯೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸುರೇಶ್ ಗೌಡ, ಗೌರಿಶಂಕರ್​ ವಿರುದ್ಧ ವಾಗ್ಧಾಳಿ ನಡೆಸುತ್ತಲೇ ಸ್ಫೋಟಕ ಹೇಳಿಕೆ ನೀಡಿದ್ದಾರೆ. ‘ಕೊಲೆ ಅಲ್ಲ, ತಾಕತ್ ಇದ್ರೆ ನನ್ನ ಒಂದು ಕೂದಲು ಕಿತ್ತುಕೋ ನೋಡೋಣ. ನಿನ್ನ ಒಂದೊಂದು ಆಟವೂ ನನಗೆ ಗೊತ್ತಿದೆ. ನನ್ನ ಕೊಲೆ ಮಾಡಿಸೋದಿಕ್ಕೆ ನೀನು ಸಜ್ಜಾಗಿದ್ದೀಯಾ. ನನ್ನನ್ನು ಕೊಲ್ಲಲು ಜೈಲಲ್ಲಿ ಇರೋರಿಗೆ ಸುಪಾರಿ ಕೊಡ್ತೀಯಾ…’ ಎಂದು ಆಕ್ರೋಶ ಹೊರಹಾಕಿದರು.
‘ನಿನ್ನ ನಾಟಕ ಎಲ್ಲ ಬಂದ್ ಮಾಡು, ನಮ್ಮ ತಾಕತ್ ಏನು ಅನ್ನೋದನ್ನ ನಮ್ಮ ಕಾರ್ಯಕರ್ತರು ತೋರಿಸ್ತಾರೆ. ಒಂದೂವರೆ ತಿಂಗಳಿಂದ ನಮ್ಮ ಶಕ್ತಿ ಏನು ಅನ್ನೋದನ್ನ ಪ್ರತಿ ಊರಿನಲ್ಲೂ ತೊರಿಸಿದ್ದೀವಿ. ಜೈಲಲ್ಲಿ ಇರೋರಿಗೆ ನನ್ನನ್ನು ಕೊಲೆ ಮಾಡಲು ಸುಪಾರಿ ಕೊಡ್ತಿಯಾ… ಇದೆಲ್ಲಾ ನಡೆಯಲ್ಲಪ್ಪ ಮಿಸ್ಟರ್ ಗೌರಿಶಂಕರ್. ಮತದಾರರು, ನಮ್ಮ ಕಾರ್ಯಕರ್ತರು ಇರೋವರೆಗೂ ನನ್ನ ಒಂದು ಕೂದಲು ಮುಟ್ಟೋಕೆ ಆಗಲ್ಲ. ನಿನ್ಗೆ ಧಮ್ ಇದ್ರೆ ಸುಪಾರಿ ಕೊಡು ನೋಡೋಣಾ‌.. ನಾನೊಬ್ಬ ರೈತನ ಮಗ, ನಾನು ಬೆಳೆದಿರೋದು ರೈತನ ಹೊಟ್ಟೆಯಲ್ಲಿ‌. ನನ್ನ ಈ ಜನ ಇರೋವರೆಗೂ ನನ್ನ ಒಂದು ಕೂದಲೂ ಮುಟ್ಟೋಕು ನಿನ್ಗೆ ಆಗಲ್ಲ’ ಎಂದು ಶಾಸಕ ಗೌರಿಶಂಕರ್​ಗೆ ಬಹಿರಂಗವಾಗಿಯೇ ಸುರೇಶ್ ಗೌಡ ಎಚ್ಚರಿಕೆ ಕೊಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಣಬೆ ಪದಾರ್ಥ ತಿಂದು ತಂದೆ-ಮಗ ಸಾವು!? ರಾತ್ರಿಯಿಡೀ ನರಳಾಡಿ ಮನೆಯ ಅಂಗಳದಲ್ಲೇ ದುರಂತ ಅಂತ್ಯ

ಶಾಲೆಗೆ ಹೋಗುವಾಗ ಬಿಎಂಟಿಸಿ ಬಸ್​ಗೆ ಮಗಳು ಬಲಿ, ಅಮ್ಮ-ಮಗನ ಸ್ಥಿತಿ ಗಂಭೀರ

ಶಂಕಿತ ಉಗ್ರನ ಟಾರ್ಗೆಟ್​ನಿಂದ ಸಿಎಂ ಜಸ್ಟ್​ ಮಿಸ್​! ಶಾರೀಕ್​ನ ಮೊಬೈಲ್ ಡಿಪಿಯಲ್ಲಿ ಇಶಾ ಫೌಂಡೇಶನ್ ಫೋಟೋ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 13 =
Remember me
