ಬೆಂಗಳೂರು:ಮಾಜಿ ಶಾಸಕ ವರ್ತೂರು ಪ್ರಕಾಶ್ ಮೇಲೆ ದುಷ್ಕರ್ಮಿಗಳ ತಂಡ ಮಾರಣಾಂತಿಕ ಹಲ್ಲೆ ನಡೆಸಿದೆ.
ಕೋಲಾರದ ಬೆಗ್ಲಿ ಹೊಸಹಳ್ಳಿಯಲ್ಲಿ ನ.25ರಂದು ಈ ಘಟನೆ ನಡೆದಿದ್ದು, ದುಷ್ಕರ್ಮಿಗಳ ತಂಡ ಮಾಜಿ ಶಾಸಕ ಮತ್ತು ಅವರ ಕಾರು ಚಾಲಕನ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಮಾಜಿ ಶಾಸಕರನ್ನು ಕಿಡ್ನ್ಯಾಪ್​ ಮಾಡಿ ಚಿತ್ರ ಹಿಂಸೆ ನೀಡಿದೆ. ಅಪಹರಣಕ್ಕೊಳಪಟ್ಟಿದ್ದ ಮಾಜಿ ಶಾಸಕರು ಇದೀಗ ಬೆಳ್ಳಂದೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂಜೆ ವೇಳೆ ಹತ್ತಾರು ಪುಂಡರನ್ನೊಳಗೊಂಡ ತಂಡ ಕಾರಿನಲ್ಲಿ ಬಂದು ಖಾರದ ಪುಡಿ ಎರಚಿ ಮಾಜಿ ಶಾಸಕರನ್ನು ಕಿಡ್ನ್ಯಾಪ್​ ಮಾಡಿ ಕೂಡಿ ಹಾಕಿತ್ತು ಎಂದು ಗೊತ್ತಾಗಿದೆ.
‘ನನ್ನ ಮೇಲೆ 8 ಜನರಿಂದ ಹಲ್ಲೆಯಾಗಿದೆ. ಕೋಲಾರದ ಬೆಗ್ಲಿ ಹೊಸಹಳ್ಳಿಯಲ್ಲಿ ದಾಳಿ ನಡೆಸಿದ ದುಷ್ಕರ್ಮಿಗಳು ನನ್ನ ಕೈ ಹಾಗೂ ಕಾಲಿಗೆ ಹಲ್ಲೆ ಮಾಡಿ ಕಿಡ್ನ್ಯಾಪ್​ ಮಾಡಿದರು. 30 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಘಟನೆ ನಡೆದ ಸ್ಥಳದಿಂದ ನನ್ನ ಕಾರಿನ ಡ್ರೈವರ್ ಸುನೀಲ್ ತಪ್ಪಿಸಿಕೊಂಡ. ಆದರೆ ಆ ವೇಳೆ ಅವನ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿದರು. ಕಿಡ್ನ್ಯಾಪ್​ ಮಾಡಿದ ಮೂರು ದಿನಗಳ ಬಳಿಕ ಹೊಸಕೋಟೆಯಲ್ಲಿ ನನ್ನನ್ನು‌ ಬಿಟ್ಟು ಹೋದರು. ನಂತರ ನನ್ನ ಕಾರನ್ನು ಬೆಳ್ಳಂದೂರು ಹೊರ ವಲಯದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ವರ್ತೂರು ಪ್ರಕಾಶ್​ ವಿವರಿಸಿದ್ದಾರೆ.
ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇಂದು(ಡಿ.1) ಬೆಳ್ಳಂದೂರು ಸ್ಮಶಾನದ ಬಳಿ ನಂಬರ್ ಪ್ಲೇಟ್ ಇಲ್ಲದ ಕಾರು‌ ಪತ್ತೆಯಾಗಿದ್ದು, ಆ ಕಾರನ್ನು ಟ್ರಾಫಿಕ್ ಪೊಲೀಸರು ಠಾಣೆ ಬಳಿ ತಂದು ನಿಲ್ಲಿಸಿದ್ದರು. ಇದೇ ಕಾರಿನಲ್ಲಿ ಕಾರದ ಪುಡಿ ಕೂಡ ಪತ್ತೆಯಾಗಿದೆ. ಸದ್ಯ ಆ ಕಾರು ನನ್ನದು ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ. ಅದೇ ಕಾರಿನಲ್ಲಿ ಅವರನ್ನು ದುಷ್ಕರ್ಮಿಗಳ ತಂಡ ಕಿಡ್ನ್ಯಾಪ್ ಮಾಡಿದ್ದ ಶಂಕೆ ವ್ಯಕ್ತವಾಗಿದೆ.
ವಿಶ್ವನಾಥ್​ ವಿರುದ್ಧ ತೀರ್ಪು: ಈಡುಗಾಯಿ ಹೊಡೆದು ಹರಕೆ ತೀರಿಸಿದ ಶಾಸಕ!

ಡಿ.4ರಿಂದ ರಾಜ್ಯದಲ್ಲಿ ಭಾರಿ ಮಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + nineteen =
Remember me
