ಬಾಗಲಕೋಟೆ:ಮಾಜಿ ಶಾಸಕರೋರ್ವರ ಪುತ್ರ ಸೈಕ್ಲಿಂಗ್​ಗೆ ಹೋಗಿದ್ದಾಗ ಮಾರ್ಗ ಮಧ್ಯೆಯೇ ಮೃತಪಟ್ಟ ಘಟನೆ ಕೆರೂರ ಬಳಿ ನಡೆದಿದೆ.
ಮಾಜಿ ಶಾಸಕ ದಿ.ಎಸ್​.ಎಸ್​.ಪಾಟೀಲ್​ ಅವರ ಪುತ್ರ ವಿನೋದ್​ ಪಾಟೀಲ್​ ಮೃತರು. ಇವರು ಬೀಳಗಿ ಪಟ್ಟಣದ ಅರ್ಬನ್​ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿದಿನವೂ ಸುಮಾರು 50 ಕಿಮೀ ದೂರ ಸೈಕ್ಲಿಂಗ್​ಗೆ ಹೋಗುತ್ತಿದ್ದರು. ಹಾಗೇ ಇಂದೂ ಕೂಡ ಸ್ನೇಹಿತರೊಂದಿಗೆ ಬಾಗಲಕೋಟೆಯಿಂದ ಬಾದಾಮಿ ತಾಲೂಕಿನ ಕೆರೂರ ಬಳಿ ಹೋಗಿದ್ದ ವಿನೋದ್ ಅವರಿಗೆ ಅಲ್ಲಿಯೇ ತೀವ್ರ ಹೃದಯಾಘಾತವಾಗಿದೆ.ಇದನ್ನೂ ಓದಿ:ಡ್ರಗ್ಸ್ ಜಾಲದ ತನಿಖೆ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಗೃಹ ಸಚಿವ; ಮಹತ್ವದ ತಿರುವು…!
ವಿನೋದ್​ ಪಾರ್ಥಿವ ಶರೀರಕ್ಕೆ ಬೀಳಗಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ವಿನೋದ್​ ಅವರು ಎರಡು ದಿನಗಳ ಹಿಂದಷ್ಟೇ 70.ಕಿ.ಮೀ. ದೂರ ಸೈಕ್ಲಿಂಗ್ ಮಾಡಿದ್ದರು. ಹಾಗೇ ಮುಂದೆ 100 ಕಿ.ಮೀ. ಸೈಕ್ಲಿಂಗ್ ಮಾಡುವ ಗುರಿಯನ್ನೂ ಹೊಂದಿದ್ದರು.
ಗಂಡ-ಹೆಂಡ್ತಿ ನಡುವೆ ಈ ನಾಯಿಯ ಕೂದಲು ತಂದಿಟ್ಟ ಫಜೀತಿ ಅಷ್ಟಿಷ್ಟಲ್ಲ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × five =
Remember me
