ವಿಜಯಪುರ:ರಾಜ್ಯ ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಿಂಗಳು ಕಳೆದಿಲ್ಲ. ಇನ್ನೂ ಹನಿಮೂನ್ ಪೀರಿಯಡ್‌ನಲ್ಲಿದ್ದು, ಅಷ್ಟರಲ್ಲೇ ತರಾತುರಿಯಲ್ಲಿ ಪಠ್ಯ ಪರಿಷ್ಕರಣೆಗೆ ಮುಂದಾಗಿರುವುದು ದುರಂತ ಎಂದು ಬಿಜೆಪಿಯ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ವ್ಯಂಗ್ಯವಾಡಿದರು.
ಪಠ್ಯಪರಿಷ್ಕರಣೆ ವಿಚಾರಕ್ಕೆ ತನ್ನದೇ ಆದ ಇತಿಹಾಸವಿದೆ. ಕೊಟಾರಿ ಕಮಿಷನ್‌ನಿಂದ ಹಿಡಿದು ಬರಗೂರ ರಾಮಚಂದ್ರಪ್ಪವರೆಗೆ ಅಷ್ಟೇ ಏಕೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿವರೆಗೂ ತನ್ನದೇ ಆದ ಇತಿಹಾಸ ಹೊಂದಿದ್ದು, ಇದೀಗ ಯಾವುದೇ ಚರ್ಚೆ ಇಲ್ಲದೇ ತರಾತುರಿಯಲ್ಲಿ ಪಠ್ಯಪರಿಷ್ಕರಣೆಗೆ ಮುಂದಾಗಿರುವ ಕಾಂಗ್ರೆಸ್ ನಡೆ ಅಪಾಯಕಾರಿ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪ್ರತಿಭಾವಂತ ಬಾಲಕಿಗೆ ಮೂಳೆ ಕ್ಯಾನ್ಸರ್: ಜೀವ ಉಳಿಸಿಕೊಳ್ಳಲು ಬೇಕು 20 ಲಕ್ಷ ರೂ
1986 ರಲ್ಲಿ ಕೊಟಾರಿ ಕಮಿಷನ್ ಶಿಫಾರಸ್ಸಿನ ಪ್ರಕಾರ ಇಡೀ ದೇಶಕ್ಕೆ ಒಂದು ಪಠ್ಯಕ್ರಮ ಚೌಕಟ್ಟು ಇರಬೇಕೆಂಬ ತೀರ್ಮಾನಕ್ಕೆ ಬರಲಾಯಿತು. ಆಗ ಕೇಂದ್ರಲ್ಲಿದ್ದಿದ್ದು ಕಾಂಗ್ರೆಸ್ ಸರ್ಕಾರ. ಮುಂದೆ 2005ರಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಸಮಗ್ರವಾಗಿ ಸ್ಥಾಪಿಸಲಾಯಿತು. ಅದರ ಭಾಗವಾಗಿ ಕರ್ನಾಟಕದಲ್ಲಿ ಮುಡಂಬಡ ತಾಯಿ ನೇತೃತ್ವ ಸಮಿತಿ ರಚಿಸಲಾಯಿತು. ಆಗಲೂ ಸಾಕಷ್ಟು ಆಕ್ಷೇಪಣೆ ಕೇಳಿ ಬಂತು. ಕರ್ನಾಟಕದ ಪಠ್ಯವನ್ನು ಎನ್‌ಸಿಆರ್‌ಟಿ ಮರುಪರಿಶೀಲನೆ ಮಾಡಬೇಕೆಂದು ಕೇಂದ್ರ ಅದನ್ನು ತರಿಸಿಕೊಂಡಿತಲ್ಲದೇ ಮೆಚ್ಚುಗೆ ಸೂಚಿಸಿ ಅನುಷ್ಟಾನಕ್ಕೆ ಅವಕಾಶ ಕಲ್ಪಿಸಿತು. ಸಿದ್ದರಾಮಯ್ಯ ಬರುವವರೆಗೂ ಅದು ಅನುಷ್ಠಾನದಲ್ಲಿತ್ತು. ಬಳಿಕ ಕೇಸರಿಕರಣ ಆಗಿದೆ ಎಂದು ಬರಗೂರ ರಾಮಚಂದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿ ಬರೋಬ್ಬರಿ ಎರಡು ವರ್ಷಗಳ ಕಾಲ ಪರಿಷ್ಕರಣೆ ನಡೆಸಲಾಯಿತೆಂದು ಶಹಾಪುರ ತಿಳಿಸಿದರು.
ಅಂದಿನ ಸಚಿವ ತನ್ವೀರ ಶೇಠ್​ ಅವರು ಪರಿಷ್ಕೃತ ಪಠ್ಯವನ್ನು ಎನ್‌ಸಿಆರ್‌ಟಿಗೆ ಕಳುಹಿಸಲಾಗಿ ಸಾಕಷ್ಟು ನಕಾರಾತ್ಮಕ ಅಂಶ ಕೇಳಿ ಬಂತು. ನಂತರ ಆ ಸರ್ಕಾರ ಬದಲಾಗಿ ಬೇರೊಂದು ಸರ್ಕಾರ ಬಂದು ಮತ್ತೆ ವರದಿ ತರಿಸಿಕೊಳ್ಳುತ್ತದೆ. ಹೀಗೆ ಅನೇಕ ಬಾರಿ ಪಠ್ಯ ಪರಿಷ್ಕರಣೆಯಾಗುತ್ತಾ ಬಂದಿದೆ. ಹಲವಾರು ಸಮಿತಿಗಳನ್ನೂ ರಚಿಸಲಾಗಿದೆ. ಆಯಾ ಸಂದರ್ಭ ಅನೇಕ ಸಂಗತಿಗಳನ್ನು ತೆಗೆಯಲಾಗಿದೆ ಮತ್ತು ಸೇರ್ಪಡೆಯೂ ಮಾಡಲಾಗಿದೆ. ದುರಂತವೆಂದರೆ ಪಠ್ಯ ಪರಿಷ್ಕರಣ ವಿಚಾರವನ್ನು ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಿದ್ದು ಇದೇ ಮೊದಲ ಬಾರಿ ಎಂದರು.
ಸದ್ಯ ಈ ಎಲ್ಲ ನಿರ್ಣಯಗಳಾಗುತ್ತಿರುವುದು ಕೆಪಿಸಿಸಿ ರಿಸರ್ಚ್ ಡಿಪಾರ್ಟಮೆಂಟ್‌ನಲ್ಲಿ ಮಾತ್ರ ಎಂದು ಲೇವಡಿ ಮಾಡಿದ ಅರುಣ ಶಹಾಪುರ, ಸದನದಲ್ಲಿ ವಿಷಯ ಮಂಡಿಸದೇ, ಚರ್ಚೆ ಮಾಡದೇ ತರಾತುರಿಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಕೂತು ನಿರ್ಧಾರ ತೆಗೆದುಕೊಳ್ಳಲು ಇದು ಹಿಟ್ಲರ್ ಆಡಳಿತವಲ್ಲ. ಈ ಬಗ್ಗೆ ಚರ್ಚೆ ನಡೆದು ಬಳಿಕ ತೀರ್ಮಾನವಾಗಲಿ ಎಂದರು. ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಇದರಲ್ಲಿ ಬಡವರೇ ಮಕ್ಕಳೇ ಹೆಚ್ಚಾಗಿದ್ದಾರೆ. ಹೀಗಾಗಿ ಅವರಿಗೆ ಅನ್ಯಾಯವಾಗಲು ಬಿಡಲ್ಲ. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಾಗುವುದು ಎಂದರು.
ಇದನ್ನೂ ಓದಿ:ಮನನೊಂದು ಸಾವಿನ ಹಾದಿ ಹಿಡಿದ ಶಿವಮೊಗ್ಗದ ಯುವಕ: ಪೊಲೀಸರ ವಿರುದ್ಧವೇ ದಾಖಲಾಯ್ತು ದೂರು
ಮೊದಲು ಆಗಬೇಕಾಗಿದ್ದು ಇದು:ಕಾಂಗ್ರೆಸ್ ಚುನಾವಣೆ ಸಂದರ್ಭ ಕೊಟ್ಟ ಗ್ಯಾರಂಟಿ ಬಗ್ಗೆ ನೂರು ಪ್ರಶ್ನೆಗಳಿವೆ. ಮೊದಲು ಅವುಗಳಿಗೆ ಉತ್ತರಿಸುವ ಕೆಲಸ ಮಾಡಲಿ. ಅದನ್ನು ಬಿಟ್ಟು ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ? ಎಂದ ಶಹಾಪುರ, ಅಧಿಕಾರಕ್ಕೆ ಬಂದ ತಿಂಗಳೊಳಗೆ ಖಾಲಿ ಇರುವ ಎಲ್ಲ ಹುದ್ದೆ ಭರ್ತಿ ಮಾಡಿಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದು ಮೊದಲು ಆ ಕಾರ್ಯವಾಗಲಿ. ಕಾಲಮಿತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಲಿ. ಜಿಲ್ಲೆಗೊಂದು ವಿಶ್ವ ವಿದ್ಯಾಲಯ ಆಗಲಿ. ವಿಶ್ವ ವಿದ್ಯಾಲಯಗಳಿಗೆ ಅನುದಾನ ಸಿಗಲಿ. ಏಳನೇ ವೇತನ ಆಯೋಗ ಜಾರಿಯಾಗಲಿ. ಹಳೆ ಪಿಂಚಣಿ ಯೋಜನೆ ಜಾರಿಯಾಗಲಿ ಎಂದು ಶಹಾಪುರ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ವಕ್ತಾ ಸುರೇಶ ಬಿರಾದಾರ, ರಾಕೇಶ ಕುಲಕರ್ಣಿ, ವಿಜಯ ಜೋಷಿ ಇದ್ದರು.
ಪ್ರಯಾಣಿಕರ ಸೋಗಲ್ಲಿ ಬಂದು ಸುಲಿಗೆ; ಆರೋಪಿ ಬಂಧನದಿಂದ ಹೊಸ ಪ್ರಕರಣಗಳು ಬೆಳಕಿಗೆ..!

ಅಪ್ಪಿತಪ್ಪಿ ಈ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿದರೆ ದುರ್ಬಳಕೆ ಆಗಬಹುದು ನಿಮ್ಮ ಮೊಬೈಲ್ ನಂಬರ್!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 2 =
Remember me
