ಬೆಂಗಳೂರು:ಕಾವೇರಿ ವಿಚಾರವಾಗಿ ತಮಿಳುನಾಡಿನ ಸಂಸದರೆಲ್ಲರು ಒಟ್ಟಾಗಿದ್ದಾರೆ. ಆದರೆ, ನಮ್ಮಲ್ಲಿ 28 ಸಂಸದರಿದ್ದರೂ ಮೂರು ಭಾಗವಾಗಿದ್ದೇವೆ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ಬೇಸರ ಹೊರ ಹಾಕಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್​ಡಿಡಿ, ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್‌ ಇದ್ದಾಗಲು ನಾನು ಹೋರಾಟ ಮಾಡಿದ್ದೇನೆ ಮತ್ತು ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಹೋರಾಟ ಮಾಡಿದ್ದೇವೆ ಎಂದು ಹೇಳಿದರು.
ಕುಮಾರಸ್ವಾಮಿಯವರು ಕಾವೇರಿ ವಿಚಾರವಾಗಿ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ತಲುಪಿಸಿದ್ದಾರೆ. ನಾನು ಕೂಡ ಪ್ರಧಾನಿಗಳಿಗೆ ಪತ್ರ ಬರೆದಿದ್ದೇನೆ. ರಾಷ್ಟ್ರದ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿಗಳಿಗೆ ವಾಸ್ತವಾಂಶ ತಿಳಿಸುವ ಕೆಲಸ ಮಾಡಿದ್ದೇನೆ. ತಮಿಳುನಾಡಿನ ಅಣ್ಣ-ತಮ್ಮಂದಿರು ನಮ್ಮನ್ನು ಅರ್ಥಮಾಡಿಕೊಳ್ಳಬೇಕು. ಅವರು ಬದುಕಬೇಕು ಮತ್ತು ನಾವು ಬದುಕಬೇಕಿದೆ. ತಮಿಳುನಾಡು ಹಾಗೂ ಕರ್ನಾಟಕದವರನ್ನು ಹೊರತುಪಡಿಸಿ ರಾಜ್ಯಸಭೆಯ 5 ಮಂದಿಯನ್ನು ಕಳುಹಿಸಿ ಕಾವೇರಿ ಜಲಾನಯನ ಪ್ರದೇಶದ ಬೆಳೆಗಳ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಲಿ ಎಂದು ಮನವಿ ಮಾಡಿದ್ದೇನೆ ಎಂದರು.
ಇದನ್ನೂ ಓದಿ:ಚಿಂಚೋಳಿಗೆ ಆಗಮಿಸಿದ ಸಚಿವ ಪ್ರಿಯಾಂಕ್ ಖರ್ಗೆ : ಸರ್ಕಾರಿ ಯೋಜನೆಗಳ ಮಾಹಿತಿ ನೀಡುವ ಮಳಿಗೆಗಳ ಉದ್ಘಾಟನೆ
ಕಾವೇರಿ ವಿಚಾರವಾಗಿ ನಾಳೆ ಬೆಂಗಳೂರು ಬಂದ್ ಕರೆದಿದ್ದಾರೆ. ಆಮೇಲೆ ರಾಜ್ಯ ಬಂದ್​ಗೂ ಕರೆ ನೀಡಿದ್ದಾರೆ. ಬಂದ್ ವಿಚಾರವಾಗಿ ಯಾರ್ಯಾರು ಏನೇನು ಮಾತನಾಡ್ತಾರೆ ಎಂಬುದರ ಅವಶ್ಯಕತೆ ನಮಗಿಲ್ಲ. ನಮ್ಮ ಜನರನ್ನು ಉಳಿಸುವಲ್ಲಿ ನಮ್ಮ ಎಲ್ಲ ಶಾಸಕರು ಚರ್ಚೆ ಮಾಡಿದ್ದೇವೆ. ನಾಳಿನ ಬಂದ್​ಗೆ ಕುಮಾರಸ್ವಾಮಿಯವರು ಬೆಂಬಲ ಕೊಟ್ಟಿದ್ದಾರೆ. ಶಾಂತಿಯುತವಾಗಿ ಬಂದ್ ನಡೆಯುತ್ತದೆ ಎಂದರು.
ನಾನು ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮಾತನಾಡುವುದಿಲ್ಲ. ಇದು ರಾಜ್ಯ ಸರ್ಕಾರದ ವೈಫಲ್ಯವಾಗಿದೆ. 40 ಲಕ್ಷ ಹೆಕ್ಟೇರ್ ಬೆಳೆ ಒಣಗುತ್ತಿದೆ. ಪಾರ್ಲಿಮೆಂಟಿನಲ್ಲಿ ಕಣ್ಣಲ್ಲಿ ನೀರಾಕಿ ಮಾತನಾಡಿದೆ. 5 ಮಂದಿಯನ್ನು ಕಳುಹಿಸಿಕೊಡಿ ರಾಜ್ಯದ ಪರಿಸ್ಥಿತಿ ನೋಡಲಿ ಎಂದು ಮನವಿ ಮಾಡಿದೆ. ನಾನು ಅಧಿಕಾರಕ್ಕಾಗಿ ಇಲ್ಲ, ನಮ್ಮ ರಾಜ್ಯದ ಜನರನ್ನು ಉಳಿಸುವುದಕ್ಕೆ ಇದ್ದೀನಿ. ದೆಹಲಿಯಲ್ಲಿ ರಾಜಕೀಯ ನಿರ್ಧಾರ ಆಯ್ತು. ಅದರ ಬಗ್ಗೆ ಈಗ ಮಾತನಾಡುವುದಿಲ್ಲ, ನಾಡಿದ್ದು ಮಾತಾಡ್ತೀನಿ ಎಂದರು.
ಪ್ರಿಯಾಂಕಾ ಈ ಕಾರಣಕ್ಕಾಗಿ ಪರಿಣೀತಿ ಮದುವೆಗೆ ಬರಲಿಲ್ಲ; ಮಗಳು, ಅಳಿಯ ಹಾಜರಾಗದಿರುವ ಬಗ್ಗೆ ಉತ್ತರಿಸಿದ ಮಧು ಚೋಪ್ರಾ

ಮೂತ್ರದ ಬಣ್ಣ ನಿಮ್ಮ ಆರೋಗ್ಯ ಸಮಸ್ಯೆಯನ್ನು ಹೇಳುತ್ತದೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 11 =
Remember me
