ಬೆಂಗಳೂರುರಾಜ್ಯದಲ್ಲಿ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ರೂಪಿಸುವುದಕ್ಕಾಗಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ(ಯುಜಿಸಿ) ಮಾಜಿ ಅಧ್ಯಕ್ಷ, ಶಿಕ್ಷಣ ತಜ್ಞ ಪ್ರೊ.ಸುಖದೇವ್ ಥೋರಟ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಬದಲಿಗೆ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ರಚನೆ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ೋಷಿಸಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತ್ತೆ ಎಸ್‌ಇಪಿ ಜಾರಿಗೊಳಿಸುವುದಾಗಿ ಪ್ರಕಟಿಸಿತ್ತು. ಅದರಂತೆ ಬುಧವಾರ ಸಮಿತಿ ಅಧ್ಯಕ್ಷರು, 15 ಸದಸ್ಯರು ಮತ್ತು 8 ಶಿಕ್ಷಣ ತಜ್ಞರು/ವಿಷಯ ತಜ್ಞರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿ ಸಂಜಯ್ ಕೌಲ್, ವಿಶ್ರಾಂತ ಕುಲಪತಿಗಳಾದ ಪ್ರೊ.ಎಸ್. ಾಟ್, ಪ್ರೊ.ಜೋಗನ್ ಶಂಕರ್, ನ್ಯಾಷನಲ್ ಲಾ ಸ್ಕೂಲ್ ಆ್ ಇಂಡಿಯನ್ ಯೂನಿವರ್ಸಿಟಿ ಕುಲಪತಿ ಡಾ. ಸುಧೀರ್ ಕೃಷ್ಣಸ್ವಾಮಿ,ಪ್ರಾಧ್ಯಾಪಕರಾದ ಡಾ. ರಾಜೇಂದ್ರ ಚೆನ್ನಿ, ಡಾ. ಶರತ್ ಅನಂತಮೂರ್ತಿ, ಪ್ರೊ. ಪ್ರಣತಿ ಪಂಡ, ಡಾ. ಾರುಕ್ ಖಮರ್, ಎ. ನಾರಾಯಣ, ಡಾ. ಸಂತೋಷ್ ನಾಯ್ಕ, ವಿನಾಯಕ ಒಕ್ಕುಂದ, ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ, ನಿವೃತ್ತ ಪ್ರಾಧ್ಯಾಪಕ ಪ್ರೊ. ನಟರಾಜ ಬುಡಲು, ಡಾ. ಎಂ.ಎಸ್. ತಳವಾರ್ ಸೇರಿ ಬಹುತೇಕ ಕನ್ನಡಿಗರು ಹಾಗೂ ಹೊರ ರಾಜ್ಯದ ಶಿಕ್ಷಣ ತಜ್ಞರನ್ನು ನೇಮಿಸಲಾಗಿದೆ.
ವಿಷಯ ತಜ್ಞರ ನೇಮಕ:
ಪ್ರೊ. ಯೋಗೇಂದ್ರ ಯಾದವ್, ಪ್ರೊ. ರಹಮತ್ ತರಿಕೆರೆ, ಪ್ರೊ. ಜಾನಕಿ ನಾಯರ್, ಡಾ. ಎಸ್. ಚಂದ್ರಶೇಖರ ಶೆಟ್ಟಿ, ಸೋನಂ ವಾಂಗ್‌ಚುಕ್, ಪ್ರೊ. ವಲೇರಿಯನ್ ರೋಡ್ರಿಗೌಸ್, ಪ್ರೊ. ಸಬುನಾ ಭೂಮಿಕಾ ಗೌಡ ಅವರು ವಿಷಯ ತಜ್ಞರಾಗಿದ್ದಾರೆ.
ಇವರ ಜತೆಗೆ ಉನ್ನತ ಶಿಕ್ಷಣ ಇಲಾಖೆ ವಿಶೇಷಾಧಿಕಾರಿ ಡಾ. ಭಾಗ್ಯವಾನ್ ಸಭೆಯ ನಡವಳಿ ರಚಿಸುವ ಕೆಲಸಕ್ಕೆ ನಿಯೋಜಿಸಿದೆ.
ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ಇಲಾಖೆ ಹಾಗೂ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಈ ಸಮಿತಿಗೆ ಆಡಳಿತ ಕಚೇರಿ, ಲಾಜಿಸ್ಟಿಕ್ ಸಹಕಾರ, ಭತ್ಯೆಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದೆ. ಅಲ್ಲದೆ, ಇದಕ್ಕಾಗಿ ಶಿಕ್ಷಣ ಇಲಾಖೆಯು ನೋಡಲ್ ಅಧಿಕಾರಿಯನ್ನು ಸಹ ನೀಯೋಜಿಸಲಾಗುವುದು ಎಂದು ತಿಳಿಸಲಾಗಿದೆ.
ಎಸ್‌ಇಪಿ ಸಮಿತಿ ರಚಿಸುವ ಸಂಬಂಧ ಉನ್ನತ ಶಿಕ್ಷಣ ಇಲಾಖೆಯು ತಜ್ಞರ ಪಟ್ಟಿ ರಚಿಸಿತ್ತು. ಆದರೆ, ಪ್ರಾಥಮಿಕ ಶಿಕ್ಷಣ ಇಲಾಖೆಯು ತಜ್ಞರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವುದು ವಿಳಂಬವಾಗಿದ್ದ ಹಿನ್ನೆಲೆಯಲ್ಲಿ ಎಸ್‌ಇಪಿ ಸಮಿತಿ ರಚನೆ ತಡವಾಗಿತ್ತು. ಅಂತಿಮವಾಗಿ ಬುಧವಾರ ಸಮಿತಿ ಪ್ರಕಟಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
