ಬೆಂಗಳೂರು:ಯುಗಾದಿ ಹೊಸೆತನದ ಸಂಕೇತ. 2024ರಲ್ಲಿ ಶ್ರೀ ಕ್ರೋಧಿ ನಾಮ ಸಂವತ್ಸರದ ಆರಂಭವಿದು. ಈ ಶುಭ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ:ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್!
ಸಾಮಾಜಿಕ ಜಾಲತಾಣದ ಟ್ವಿಟರ್ ಮೂಲಕ ಸಂದೇಶ ಹಂಚಿಕೊಂಡಿರುವ ಮಾಜಿ ಪ್ರಧಾನಿ ದೇವೇಗೌಡರು, ಯುಗಾದಿ ಹೊಸತನದ ಸಂಕೇತ. ಹಸಿರು ಚಿಗುರುವ ಸಮಯ. ಪ್ರಕೃತಿದತ್ತವಾಗಿ ನವಚೈತನ್ಯದ ಸಮಯ. ಈ ಶುಭ ಸಂದರ್ಭದಲ್ಲಿ ನಾಡಿನ ಮಹಾಜನತೆಗೆ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ.
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.pic.twitter.com/K8U2Gj4vvl
— H D Devegowda (@H_D_Devegowda)April 8, 2024

ನಾವು ಶ್ರೀ ಕ್ರೋಧಿ ನಾಮಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಹಾಗಾಗಿ ಕ್ರೋಧ, ದ್ವೇಷಗಳೆಂಬ ಅರಿಷ್ಟಗಳು ಅಡಗಿ ಎಲ್ಲ ಸಮಸ್ತ ಜನತೆ ಪ್ರೀತಿ, ಸೌಹಾರ್ದ, ಸುಖ, ನೆಮ್ಮದಿ, ಶಾಂತಿಯಿಂದ ಬದುಕುವಂತಾಗಲಿ ಎಂದು ರಾಜ್ಯದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಬಿಸಿಲು, ಬರ, ನೀರಿನ ಹಾಹಾಕಾರ ಕಳೆದು ನಾಡು ಮಳೆ-ಬೆಳೆಯಿಂದ ಸುಭಿಕ್ಷವಾಗ್ನಿ ಜನರ ಬದುಕು ಹಸನಾಗುವಂತೆ ಪರಮಾತ್ಮನ ಕೃಪೆಯಾಗಲಿ, ಬೇವಿನ ಕಹಿ ಕಡಿಮೆಯಾಗಿ ಬೆಲ್ಲದ ಸಿಹಿ ಹೆಚ್ಚಲಿ ಎಂದು ಹಾರೈಸುತ್ತೇನೆ ಎಂದು ತಮ್ಮ ಎಕ್ಸ್​ ಖಾತೆ ಮೂಲಕ ಶುಭಾಶಯ ತಿಳಿಸಿದ್ದಾರೆ.
ಯುಗಾದಿ… ಹೆಸರೇ ಹೇಳುವಂತೆ ಯುಗದ ಆದಿ. ಭಾರತದಲ್ಲಿ ಆಚರಿಸಲ್ಪಡುವ ದೊಡ್ಡ ಹಬ್ಬಗಳಲ್ಲಿ ಯುಗಾದಿ ಕೂಡಾ ಒಂದು. ಯುಗಾದಿ ಎಂದರೆ ಹೊಸತನದ ಆರಂಭ. ಹೀಗಾಗಿ, ಹಿಂದೂ ಧರ್ಮೀಯರು ಯುಗಾದಿಯನ್ನೇ ಹೊಸ ವರ್ಷ ಎಂದೂ ಆಚರಿಸುತ್ತಾರೆ. ಬ್ರಹ್ಮ ದೇವರು ಈ ದಿನದಂದು ಜಗತ್ತನ್ನು ಸೃಷ್ಟಿಸಿದ್ದಾಗಿ ನಂಬಿಕೆ. ಇದೇ ಕಾರಣದಿಂದ ಯುಗಾದಿಯನ್ನು ಹಿಂದೂ ಪಂಚಾಂಗದ ಮೊದಲ ದಿನವನ್ನಾಗಿಯೂ ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 9 ಮಂಗಳವಾರ ಯುಗಾದಿಯನ್ನು ಆಚರಿಸಲಾಗುತ್ತಿದೆ. ಶ್ರೀ ಕ್ರೋಧಿ ನಾಮಸಂವತ್ಸರ ಆರಂಭವಾಗಲಿದೆ.
ರಂಜಾನ್​-ಯುಗಾದಿ ಹೊಸ ತೊಡಕು ದಿನ ಮಾಂಸದ ಬೆಲೆ ಏರಿಕೆ ಸಾಧ್ಯತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 + 12 =
Remember me
