ಹಾಸನ:ಲಿಂಗೈಕ್ಯ ಬಾಲಗಂಗಾಧರ ಶ್ರೀಗಳನ್ನು ಜ್ಞಾಪಿಸಿಕೊಂಡು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ಕಣ್ಣೀರು ಹಾಕಿದ ಪ್ರಸಂಗ ಹಾಸನದಲ್ಲಿಂದು (ಸೆ.26) ನಡೆದಿದೆ.
ಹಾಸನದ ಆದಿ ಚುಂಚನಗಿರಿ ಮಠದಲ್ಲಿ ನಡೆದ ಡಾ. ಬಾಲಗಂಗಾಧರ ಶ್ರೀಗಳ ಸುವರ್ಣ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮದ ವೇದಿಕೆ ಮೇಲೆ ಎಚ್​ಡಿಡಿ ಕಣ್ಣೀರು ಹಾಕಿದರು.
ನನಗೆ ಏನು ಮಾತನಾಡಬೇಕೋ ಗೊತ್ತಿಲ್ಲ, ನನಗೆ 91ನೇ ವಯಸ್ಸು ನಡೆಯುತ್ತಿದೆ. ನಾವೆಲ್ಲಾ ಶೂದ್ರ ಸಮುದಾಯ, ಯಾರನ್ನು ಮುಟ್ಟಬಾರದು ಅಂತ ಶಾಲೆಯಲ್ಲಿ ನಮ್ಮನ್ನು ಹತ್ತು ಅಡಿ ದೂರದಲ್ಲಿ ಕೂರಿಸುತ್ತಿದ್ದರು. ಕೋಲಲ್ಲಿ ನಮ್ಮನ್ನು ಹೊಡೆದು ಮಾತನಾಡಿಸುತ್ತಿದ್ದರು. ನನ್ನ ಹಳೆಯ ಎಲ್ಲಾ ನೆನಪುಗಳನ್ನು ಇಲ್ಲಿ ತೋರಿದ ಕಿರುಚಿತ್ರದಲ್ಲಿ ವರ್ಣಿಸಿದ್ದಾರೆ ಎಂದರು.
ಇದನ್ನೂ ಓದಿ:ಬಿಜೆಪಿ-ಜೆಡಿಎಎಸ್​ನವರು​ ಕಾವೇರಿ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ
ನಾನು ಜೀವನದಲ್ಲಿ ಅಸತ್ಯ‌ ನುಡಿಯಲ್ಲ ಅದೇ ನನ್ನ ಶಕ್ತಿ ಎಂದು ತಮ್ಮ ಪಕ್ಕದಲ್ಲೇ ಕುಳಿತಿದ್ದ ನಿರ್ಮಾಲಾನಂದ ಶ್ರೀಗಳಿಗೆ ದೇವೇಗೌಡರು ಇದೇ ಸಂದರ್ಭದಲ್ಲಿ ಹೇಳಿದರು. ದಶಕಗಳ ಸಮಸ್ಯೆಯಾದ ಬಾಂಗ್ಲಾದೇಶ-ಭಾರತ ನಡುವಿನ ನೀರಿನ ಹಂಚಿಕೆಯನ್ನು ಹತ್ತೇ ತಿಂಗಳಲ್ಲಿ ಬಗೆಹರಿಸಿದೆ. ಉತ್ತರ ಕರ್ನಾಟಕದಲ್ಲಿ 18 ಕೋಟಿ ಕೊಟ್ಟಿದ್ದೇನೆ. ಹೇಳುತ್ತಾ ಹೋದರೆ ಮಾತನಾಡೋಕೆ ತುಂಬಾ ಇದೆ ಎಂದರು.
ದೇಶದ ಪ್ರಗತಿ ಬಡವರ ಏಳಿಗೆ ಒಂದು ಕಡೆಯಾದರೆ, ಮತ್ತೊಂದು ಕಡೆ ನಾವು ಮೋಕ್ಷ ಬೇಕು ಅಂತ ಕೇಳುತ್ತೇವೆ. ಆದರೆ, ಅದನ್ನು ಕೊಂಡುಕೊಳ್ಳಲು ಆಗುತ್ತಾ? ಮೋಕ್ಷಕ್ಕಾಗಿ ನಾನು ದಿನ ಪ್ರಾರ್ಥನೆ ಮಾಡುತ್ತೇನೆ ಎಂದರು.
ಬಾಲಿವುಡ್​ ಲೆಜೆಂಡರಿ ನಟಿ ವಹೀದಾ ರೆಹಮಾನ್​ಗೆ ಒಲಿದ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ

ಹಿರಿಯ ನಟ ಬ್ಯಾಂಕ್ ಜನಾರ್ದನ್​ಗೆ ಹೃದಯಾಘಾತ

ಸಾರ್ವಜನಿಕವಾಗಿ ತಪ್ಪೊಪ್ಪಿಕೊಂಡು ಪುಷ್ಪ ಚಿತ್ರದ ಡೈಲಾಗ್ ಹೊಡೆದ ಅಪರಾಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 17 =
Remember me
