ಚಿಕ್ಕಬಳ್ಳಾಪುರ:ಕರೊನಾ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಯಾರನ್ನಾದರೂ ಭೇಟಿ ಮಾಡಿದ್ರೆ, ಒಂದು ವಾರ ಆತಂಕದಲ್ಲೇ ಕಾಲದೂಡಬೇಕು. ಯಾಕಂದ್ರೆ ಭೇಟಿಯಾದ ಬಳಿಕ ಎರಡೂ ಕಡೆಯ ಪೈಕಿ ಒಬ್ಬರಲ್ಲಿ ಕರೊನಾ ಸೋಂಕು ಪತ್ತೆಯಾದರೂ ಕ್ವಾರಂಟೈನ್​ ಭೀತಿ ಕಾಡುತ್ತದೆ.
ಇಂತಹದ್ದೇ ಭೀತಿಯ ಛಾಯೆ ಇದೀಗ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರನ್ನೂ ಆವರಿಸಿದೆ. ಚಿಕ್ಕಬಳ್ಳಾಪುರ ಜೆಡಿಎಸ್ ಜಿಲ್ಲಾಧ್ಯಕ್ಷ ಮತ್ತು ಅವರ ಪತ್ನಿ, ಮಗ, ಭಾಮೈದನಿಗೆ ಕರೊನಾ ಪಾಸಿಟಿವ್​ ಬಂದಿದೆ. ಈ ಸೋಂಕು ಇರುವುದು ಗೊತ್ತಾಗುವ ಮುನ್ನ ಎರಡ್ಮೂರು ದಿನಗಳ ಹಿಂದೆ ಜಿಲ್ಲಾಧ್ಯಕ್ಷರು ದೇವೇಗೌಡರನ್ನು ಭೇಟಿಯಾಗಿದ್ದರು.
ಇದನ್ನೂ ಓದಿರಿಈಶ್ವರಪ್ಪ ಮನೆಗೂ ಕಾಲಿಟ್ಟ ಕರೊನಾ, ಸೋಂಕಿನ ಭೀತಿಯಲ್ಲಿ ಕುಟುಂಬಸ್ಥರು
ಕರೊನಾ ಸೋಂಕಿತ ಜಿಲ್ಲಾಧ್ಯಕ್ಷರ ಕುಟುಂಬ ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಾಸ್ಕ್ ಇಲ್ಲದೇ ಖುದ್ದು ಅಧ್ಯಕ್ಷ ಸ್ಥಾನ ನೇಮಕಾತಿ ಪತ್ರವನ್ನು ಇವರಿಗೆ ಮಾಜಿ ಪ್ರಧಾನಿ ದೇವೇಗೌಡರು ನೀಡಿದ್ದರು. ಹಾಗಾಗಿ ಅವರಿಗೂ ಕ್ವಾರಂಟೈನ್ ಭೀತಿ ಕಾಡುತ್ತಿದೆ ಎನ್ನಲಾಗಿದೆ.
ಅಫಜಲಪುರ ತಾಪಂ ಅಧ್ಯಕ್ಷೆಯನ್ನೇ ವರಿಸಿದ ​ಉಪಾಧ್ಯಕ್ಷ, ಇನ್ಮುಂದೆ ಪತಿ-ಪತ್ನಿ ದರ್ಬಾರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 8 =
Remember me
