ಬೆಂಗಳೂರು:ಶೋಷಿತರು,ದಲಿತರು,ಅಸ್ಪೃಶ್ಯರು,ತುಳಿತಕ್ಕೊಳಗಾದ ಕೆಳಜಾತಿಯ ಜನರಿಗೆ ಮೀಸಲಾತಿ ನ್ಯಾಯದಾನದ ಒಂದು ಭಾಗವೇ ಹೊರತು ಮೀಸಲಾತಿಯೇ ಎಲ್ಲ ಸಮಸ್ಯೆಗೆ ಪರಿಹಾರವಲ್ಲ ಎಂದು ದಲಿತ ಚಿಂತಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ವಿಶ್ಲೇಷಿಸಿದ್ದಾರೆ.ಗಾಂಧಿಭವನದಲ್ಲಿ ಮಾದಿಗ ಪೊಲಿಟಿಕಲ್ ಫೋರಂ ಮತ್ತು ಶೂದ್ರ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ಐತಿಹಾಸಿಕವಾದ ಒಳಮೀಸಲಾತಿ ತೀರ್ಪು ಒಂದು ಮುನ್ನೋಟ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ವತಂತ್ರ ಬಂದು75ವರ್ಷಗಳೇ ಕಳೆದು ಹೋಗಿದ್ದರೂ ದಲಿತರಿಗೆ ಸಿಗಬೇಕಾದ ಸಾಮಾಜಿಕ ಸ್ಥಾನಮಾನ,ಉದ್ಯೋಗದಲ್ಲಿ ಮೀಸಲಾತಿ,ಸಮಾನ ಅವಕಾಶಗಳು ದೊರೆತಿಲ್ಲ.ಕಳೆದ30ವರ್ಷಗಳ ಹಿಂದೆ ಕರ್ನಾಟಕದಲ್ಲಿ ಆರಂಭವಾದ ಒಳಮೀಸಲಾತಿ ಹೋರಾಟ ಸದ್ಯ ತಾರ್ಕಿಕ ಅಂತ್ಯವನ್ನು ಕಾಣುತ್ತಿದೆ.ದೇಶದ ಸರ್ವೋಚ್ಛ ನ್ಯಾಯಾಲಯದ7ಸದಸ್ಯರ ಪೀಠವು ಒಳಮೀಸಲಾತಿಯ ಬಗ್ಗೆ ತೀರ್ಪು ಪ್ರಕಟಿಸಿದ್ದು,ಆಯಾಯ ರಾಜ್ಯಗಳು ಒಳಮೀಸಲಾತಿಯನ್ನು ಜಾರಿಗೊಳಿಸಬಹುದೆಂದು ಹೇಳಿದೆ.ಇದರಿಂದ ನಮ್ಮ ಸುದೀರ್ಘ ಹೋರಾಟಕ್ಕೆ ನ್ಯಾಯ ಸಿಕ್ಕಂತಾಗಿದೆ.ಆದರೆ ಸುಪ್ರೀಂ ಕೋರ್ಟಿನ ತೀರ್ಪಿನ ಬಗ್ಗೆ ನಮ್ಮ ಜನಾಂಗದವರೇ ಕೆಲ ರಾಜ್ಯಗಳಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದು,ಇದನ್ನು ಜಾರಿಗೊಳಿಸುವವರೆಗೆ ಹೋರಾಟವನ್ನು ನಿರಂತರಗೊಳಿಸಬೇಕಾದ ಅವಶ್ಯಕತೆ ಇದೆ.ವಿಶೇಷವಾಗಿ ವಿದ್ಯಾರ್ಥಿಗಳು,ನಿರುದ್ಯೋಗಿ ಯುವಕರು ಹೋರಾಟಕ ಮುಂದಾಳತ್ವ ವಹಿಸಬೇಕು ಎಂದು ಹನುಮಂತಯ್ಯ ಕರೆ ನೀಡಿದರು.
ಸಮಾರಂಭದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ,ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ,ಮಾಜಿ ಶಾಸಕರಾದ ಧರ್ಮಸೇನಾ,ವೀರಭದ್ರಪ್ಪ ಹಾಲರವಿ,ನಿವೃತ್ತ ಐಎಎಸ್ ಅಧಿಕಾರಿಗಳಾದ ಗೋನಾಳ್ ಭೀಮಪ್ಪ,ವಿಜಯಕುಮಾರ ಸಿಂಹ, ಆಯೋಜಕ ಲಕ್ಷ್ಮಿನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಒಳಮೀಸಲಾತಿ ಬಗ್ಗೆ ಜನಾಂಗದ ಬಹುತೇಕ ಜನರಿಗೆ ಮಾಹಿತಿ ಇಲ್ಲ.ಒಳಮೀಸಲಾತಿ ಜಾರಿಯಾಗುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಸಮುದಾಯದ ಜನರಿಗೆ,ವಿದ್ಯಾರ್ಥಿಗಳಿಗೆ,ಯುವಕರಿಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಸಮಾಜದ ಎಲ್ಲರ ಶ್ರಮದಿಂದ ನ್ಯಾಯಾಲಯದಲ್ಲಿ ನಮ್ಮ ಪರವಾದ ತೀರ್ಪು ಬಂದಿದೆ.ಈ ಹಂತದಲ್ಲಿ ತೀರ್ಪಿನ ಬಗ್ಗೆ ಅಪಸ್ವರ ಸಲ್ಲದು ಎಂದು ಹೇಳಿದರು.
“ಎಲ್ಲ ದಲಿತ ಸಂಘಟನೆಗಳ ಒಕ್ಕೂಟವನ್ನು ರಚಿಸಿಕೊಂಡು ಹೋರಾಟ ಮಾಡುವುದರಿಂದ ಹೆಚ್ಚಿನ ಬಲ ಬರುತ್ತದೆ.ದಲಿತ ಮುದಾಯದಲ್ಲಿ ಎಡ,ಬಲ ಇತ್ಯಾದಿ ಭೇದಗಳಿದ್ದು,ಅವರೆಲ್ಲರ ಮನಪರಿವರ್ತಿಸಿ ಒಳಮೀಸಲಾತಿಯನ್ನು ಜಾರಿಗೊಳಿಸಿದರೆ ಸಮುದಾಯಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬರುತ್ತದೆ.”
–ಆರ್.ಬಿ.ತಿಮ್ಮಾಪುರ,ಅಬಕಾರಿ ಸಚಿವ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
