ಬೆಂಗಳೂರು:ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ಮೌಲ್ಯದ 16 ಎಕರೆ ಭೂಮಿ ಕಬಳಿಸಲು ಭೂಮಾಲೀಕರ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದ ಆರೋಪದ ಮೇಲೆ ಮಾಜಿ ರೌಡಿ, ಮಾಗಡಿ ತಾಲೂಕಿನ ಕಾಂಗ್ರೆಸ್ ಮುಖಂಡನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರಾಜರಾಜೇಶ್ವರಿನಗರದ ಎಚ್.ಎಂ. ಕೃಷ್ಣಮೂರ್ತಿ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪ ಮತ್ತು ಈತನ ಸಹಚರ ಗೋವಿಂದರಾಜು ಬಂಧಿತರು. ಮಾಗಡಿ ರಸ್ತೆ ಹೇರೋಹಳ್ಳಿಯ ಸಮೀಪ ಸ್ಥಳೀಯ ನಿವಾಸಿ ಶಂಕರಣ್ಣ ಎಂಬುವರಿಗೆ ಸೇರಿದ 16 ಎಕರೆ ಭೂಮಿಯನ್ನು ಕಬಳಿಸಲು ಜೇಡರಹಳ್ಳಿ ಕೃಷ್ಣಪ್ಪ ಯತ್ನಿಸಿದ್ದ. ಈ ಸಂಬಂಧ ಶಂಕರಣ್ಣ ನೀಡಿದ ದೂರಿನ ಮೇರೆಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿ ಜೇಡರಹಳ್ಳಿ ಕೃಷ್ಣಪ್ಪ ಮತ್ತು ಸಹಚರನನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದಾರೆ.
ಪಿತ್ರಾರ್ಜಿತವಾಗಿ ಶಂಕರಣ್ಣಗೆ ಬಂದಿದ್ದ ಭೂಮಿ ಮೇಲೆ ಜೇಡರಹಳ್ಳಿ ಕೃಷ್ಣಪ್ಪನ ಕಣ್ಣು ಬಿದ್ದಿದೆ. ಕಡಿಮೆ ಬೆಲೆಗೆ ಭೂಮಿ ಖರೀದಿಗೆ ಜೇಡರಹಳ್ಳಿ ಯತ್ನಿಸಿದ್ದ. ಮಾರಾಟ ಮಾಡಲು ಶಂಕರಣ್ಣ ನಿರಾಕರಿಸಿದ್ದರು. ಇತ್ತೀಚೆಗೆ ಶಂಕರಪ್ಪ ಕುಟುಂಬ ಸದಸ್ಯರು ಬಡಾವಣೆ ಮಾಡಲು ಭೂಮಿಯಲ್ಲಿ ಜೆಸಿಬಿ ಮೂಲಕ ಕೆಲಸ ಮಾಡಿಸುತ್ತಿದ್ದರು. ಇದನ್ನು ಗಮನಿಸಿದ ಜೇಡರಹಳ್ಳಿ ಸಹಚರರು ಸ್ಥಳಕ್ಕೆ ಬಂದು ಶಂಕರಪ್ಪ ಕುಟುಂಬ ಸದಸ್ಯರಿಗೆ ಬೆದರಿಕೆ ಒಡ್ಡಿದ್ದರು.
ಜನವರಿಯಲ್ಲಿ ನಾಗರಬಾವಿ ಉಪ ನೋಂದಣಿ ಕಚೇರಿಯಲ್ಲಿ ನಕಲಿ ದಾಖಲೆ ಸಲ್ಲಿಸಿ ಭೂಮಿಯನ್ನು ಕ್ರಯ ಪತ್ರ ಮಾಡಿಸಿಕೊಂಡಿದ್ದರು. ಇದನ್ನು ತೋರಿಸಿ ಭೂಮಿ ಕಬಳಿಸಲು ಜೇಡರಹಳ್ಳಿ ಗ್ಯಾಂಗ್ ಪ್ರಯತ್ನಿಸಿತ್ತು. ನೊಂದ ಶಂಕರಪ್ಪ, ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿ ಎಸ್.ಗಿರೀಶ್ ಅವರನ್ನು ಭೇಟಿ ಮಾಡಿ ದೂರ ಸಲ್ಲಿಸಿ ರಕ್ಷಣೆ ಕೋರಿದ್ದರು.
ಡಿಸಿಪಿ ಸೂಚನೆ ಮೇರೆಗೆ ಬ್ಯಾಡರಹಳ್ಳಿ ಠಾಣೆಗೆ ಸಂತ್ರಸ್ತ ದೂರು ಸಲ್ಲಿಸಿದ್ದರು. ಇದರನ್ವಯ ವಂಚನೆ, ನಕಲಿ ದಾಖಲೆ ಸೃಷ್ಟಿಸಿ ಹಾಗೂ ಜೀವ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿ ಜೇಡರಹಳ್ಳಿ ಕೃಷ್ಣಪ್ಪ ಹಾಗೂ ಆತನ ಸಹಚರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರವಿಕೆ ಧರಿಸದೆ ಬಂದ ನಟಿ?! ಸೀರೆ ಜಾರಿ ಬಿದ್ದರೆ ಕೆಲವರಿಗೆ ಅದೇ ಆನಂದ ಎಂದ ಚೈತ್ರಾ, ವಿಡಿಯೋ ವೈರಲ್​

ನಿರ್ದೇಶಕ ಅಟ್ಲಿ ನನಗೆ ಮೋಸ ಮಾಡಿದ!? ರಾಜಾ-ರಾಣಿ ಚಿತ್ರದ ಮತ್ತೊಂದು ಕಹಾನಿ ಬಿಚ್ಚಿಟ್ಟ ನಟಿ ಸಾಕ್ಷಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × two =
Remember me
