ಧಾರವಾಡ:ಪೇಡಾ ನಗರಿ, ವಿದ್ಯಾ ಕಾಶಿ ಎಂದೇ ಹೆಸರಾಗಿರುವ ಧಾರವಾಡದಲ್ಲಿ ಉದ್ಯಮ ಸ್ಥಾಪಿಸಲು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್​​ ಮುಂದಾಗಿದ್ದಾರೆ.
ಮುರಳೀಧರನ್​ ಅವರು ಸ್ಪಿನ್​ ಮಾಂತ್ರಿಕ ಎಂದು ವಿಶ್ವವಿಖ್ಯಾತಿ ಪಡೆದಿದ್ದಾರೆ. ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಬಳಿಕ ಉದ್ಯಮಿಯಾಗಿರುವ ಮುರಳೀಧರನ್, ಈಗಾಗಲೇ ಲಂಕಾದಲ್ಲಿ ಯಶಸ್ವಿ ಉದ್ಯಮಿಯಾಗಿದ್ದಾರೆ. ತಮ್ಮ ತವರು ನೆಲದಲ್ಲಿ ತಂಪು ಪಾನೀಯ ಉತ್ಪಾದಕರಾಗಿದ್ದಾರೆ. ಸಿಲೋನ್ ಬೆವರೇಜಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯನ್ನು ಹೊಂದಿದ್ದು, ಈಗ ಭಾರತದಲ್ಲಿಯೂ ಉದ್ಯಮ ವಿಸ್ತರಣೆಗೆ ನಿರ್ಧಾರ ಮಾಡಿದ್ದಾರೆ.
ಭಾರತದಲ್ಲಿ ತಂಪು ಪಾನೀಯ, ಎನರ್ಜಿ ಡ್ರಿಂಕ್ ಹಾಗೂ ಅವುಗಳ ಕ್ಯಾನ್ ತಯಾರಿಸುವ ಕಂಪನಿ ಸ್ಥಾಪಿಸಲು ಮುಂದಾಗಿದ್ದು, ಇದಕ್ಕಾಗಿ 900 ಕೋಟಿ ರೂಪಾಯಿ ಹೂಡಿಕೆಗೆ ನಿರ್ಧಾರ ಮಾಡಿದ್ದಾರೆ. ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯಲ್ಲಿ ಸ್ಥಳ ಫೈನಲ್ ಆಗಿದೆ. ಖುದ್ದು ಧಾರವಾಡಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ:ಅತಿಯಾಗಿ ನೀರು ಕುಡಿದ್ರೆ ಏನಾಗುತ್ತೆ? ಈಕೆಯ ದುರಂತ ಸಾವಿಗೆ ಕಾರಣ ತಿಳಿದ್ರೆ ಶಾಕ್​ ಆಗ್ತೀರಾ!
ಮೊದಲ ಹಂತದಲ್ಲಿ 256 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಕಂಪನಿ ಸ್ಥಾಪನೆಗೆ 15 ಎಕರೆ ಜಾಗದ ಅವಶ್ಯಕತೆ ಇದೆ. ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿರುವ ಎಫ್‌ಎಂಸಿಜಿ ವಲಯದ ಪ್ಲಾಟ್ ನಂ. 157, 158ರಲ್ಲಿ ಜಾಗಾ ಮಂಜೂರಾಗಿದೆ. ತಂಪು ಪಾನೀಯ ಜತೆಗೆ ಅದರ ಕ್ಯಾನ್‌ಗಳನ್ನು ತಯಾರಿಸುವ ಘಟಕವೂ ಸ್ಥಾಪನೆಯಾಗಲಿದೆ. 7 ಬಗೆಯ ವಿವಿಧ ಗಾತ್ರದ ಅಲ್ಯೂಮಿನಿಯಂ ಕ್ಯಾನ್ ತಯಾರಾಗಲಿದೆ.
ಈ ಕಂಪನಿಯಿಂದ ಆರಂಭದಲ್ಲಿಯೇ 200 ಜನರಿಗೆ ಉದ್ಯೋಗ ದೊರೆಯಲಿದೆ. ಹಂತ ಹಂತವಾಗಿ ಕಂಪನಿಯನ್ನು ವಿಸ್ತರಿಸಲು ಮುತ್ತಯ್ಯ ಮುರಳೀಧರನ್​ ನಿರ್ಧಾರ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಇನ್ಮುಂದೆ ಕೇರಳ ಅಂತ ಕರೆಯುವಂತಿಲ್ಲ… ರಾಜ್ಯದ ಹೆಸರು ಬದಲಾಯಿಸುವ ನಿರ್ಣಯ ಅಂಗೀಕಾರ

ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್: ಕೇಂದ್ರದ ವೈಫಲ್ಯ ಎಂದು ವಾಗ್ದಾಳಿ; ತಿರುಗೇಟು ನೀಡಿದ ಸಚಿವರು, ಸಂಸತ್​ನಲ್ಲಿ ಅವಿಶ್ವಾಸ ಚರ್ಚೆ

ಅತಿಯಾಗಿ ನೀರು ಕುಡಿದ್ರೆ ಏನಾಗುತ್ತೆ? ಈಕೆಯ ದುರಂತ ಸಾವಿಗೆ ಕಾರಣ ತಿಳಿದ್ರೆ ಶಾಕ್​ ಆಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
