| ಸುಭಾಸ ಧೂಪದಹೊಂಡ ಕಾರವಾರ
ದಸರಾಕ್ಕೂ ಮುಂಚೆ ದುಬಾರೆಯಿಂದ ಮೈಸೂರಿಗೆ ಆನೆಗಳ ಸವಾರಿ ಪ್ರಾರಂಭವಾದರೆ, ಇದೇ ಅವಧಿಯಲ್ಲಿ ನೈಸರ್ಗಿಕವಾಗಿ ಕಾಡಾನೆಗಳು ಪ್ರತಿವರ್ಷ ತಮ್ಮ ಸವಾರಿ ಆರಂಭಿಸುತ್ತವೆ. ಒಂದಲ್ಲ, ಎರಡಲ್ಲ ನೂರಾರು ಕಿ.ಮೀ. ಸಂಚರಿಸುತ್ತವೆ. ಇದನ್ನು ನೋಡಿ ರೈತರು ಬೆಚ್ಚುತ್ತಾರೆ. ಓಡಿಸಲು ಅನೇಕ ವಿಧಾನ ಉಪಯೋಗಿಸುತ್ತಾರೆ. ಈ ಬಾರಿಯೂ ಆನೆಗಳ ದಂಡಯಾತ್ರೆ ಪ್ರಾರಂಭವಾಗಿದೆ. ಅದರ ರೋಚಕ ಕಥನ ಇಲ್ಲಿದೆ.
70ರಿಂದ 90 ಆನೆಗಳು:ಕೆಲ ದಶಕಗಳಿಂದ ದಾಂಡೇಲಿ-ಅಣಶಿ ಅಭಯಾರಣ್ಯ ಆನೆಗಳ ಕಾಯಂ ಆವಾಸ ಸ್ಥಾನವಾಗಿದೆ. ಇಲ್ಲಿ 70ರಿಂದ 90 ಆನೆಗಳಿವೆ, 7-8 ಹಿಂಡುಗಳಲ್ಲಿ. ಇವು ಪ್ರತಿ ಬಾರಿ ಸೆಪ್ಟೆಂಬರ್​ನಲ್ಲಿ ಪ್ರಯಾಣ ಆರಂಭಿಸುತ್ತವೆ. ಸಂತಾನೋತ್ಪತ್ತಿ, ಆಹಾರ ಸಂಚಾರದ ಮುಖ್ಯ ಉದ್ದೇಶ. ಮಳೆಗಾಲದ ನಡುವೆ ಆರಂಭವಾಗುವ ಇವುಗಳ ಯಾತ್ರೆ ಬಿರು ಬೇಸಿಗೆಗೂ ಮುಂಚೆ ಅಂದರೆ, ಫೆಬ್ರವರಿ ಅಂತ್ಯದವರೆಗೂ ನಡೆಯುತ್ತದೆ. ಕೆಲವು ತಂಡಗಳು ಹಳಿಯಾಳ, ಬೆಳಗಾವಿ ಖಾನಾಪುರ ವ್ಯಾಪ್ತಿಗೆ ಹೊರಟರೆ, ಇನ್ನು ಕೆಲವು ಯಲ್ಲಾಪುರ, ಕಿರವತ್ತಿ, ಮುಂಡಗೋಡ, ಹಾವೇರಿಯತ್ತ ಸಂಚಾರ ಆರಂಭಿಸುತ್ತವೆ. ಬಯಲು ನಾಡಿನಲ್ಲಿ ನೀರು, ಆಹಾರದ ಕೊರತೆ ಉಂಟಾಗಿ ಮೂಲ ನೆಲೆಗೆ ವಾಪಸಾಗುತ್ತವೆ. ಕಳೆದ ಬಾರಿ ಆನೆಗಳ ಹಿಂಡು ದಾಂಡೇಲಿಯಿಂದ ಸುಮಾರು 200 ಕಿಮೀ ದೂರದ ದಾವಣಗೆರೆ ಜಿಲ್ಲೆಯ ಚನ್ನಗಿರಿ ಯವರೆಗೂ ತಲುಪಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.
ನವೆಂಬರ್, ಡಿಸೆಂಬರ್​ನಲ್ಲಿ ಜೋರು:ಆನೆಗಳು ಅತಿ ಬುದ್ಧಿವಂತ ಹಾಗೂ ವಿಶಿಷ್ಟ ಜೀವಿಗಳು. ಹಿರಿಯ ಹೆಣ್ಣಾನೆ ಹಿಂಡಿನ ಯಜಮಾನಿ. 16 ವರ್ಷವಾದ ನಂತರ ಗಂಡಾನೆಯನ್ನು ಗುಂಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ಅವು ಒಂಟಿ ಸಲಗಗಳಾಗಿ ತಿರುಗುತ್ತಿರುತ್ತವೆ. ನವೆಂಬರ್ ಹಾಗೂ ಡಿಸೆಂಬರ್ ಆನೆಗಳು ಕೂಡುವ ಕಾಲ. ಈ ಕಾಲದಲ್ಲಿ ಗಂಡಾನೆಗಳು ಹೆಣ್ಣಾನೆಗಳ ಗುಂಪು ಹುಡುಕುತ್ತಿ ರುತ್ತವೆ. ಮದ ಬಂದು ಅತಿ ಹೆಚ್ಚು ದಾಂಧಲೆ ಎಬ್ಬಿಸುತ್ತವ
ಉತ್ತರ ಕನ್ನಡದ ಅರೆ ಮಲೆನಾಡಿನ ಪ್ರದೇಶಗಳಲ್ಲಿ ಆನೆಗಳ ಹಾವಳಿ ನಿಯಂತ್ರಣಕ್ಕೆ ಕೆಲ ರೈತರು ವಿವಿಧ ನೈಸರ್ಗಿಕ ವಿಧಾನ ಅಳವಡಿಸಿಕೊಂಡಿದ್ದಾರೆ. ಯಲ್ಲಾಪುರ, ಹಳಿಯಾಳ ಅರಣ್ಯ ವಿಭಾಗದ 300ಕ್ಕೂ ಅಧಿಕ ರೈತರು ಹೊಲದ ಸುತ್ತ ಜೇನು ಬೇಲಿ ಮಾಡಿಕೊಂಡಿದ್ದಾರೆ. ಅಂಥ ಹೊಲಗಳಿಗೆ ಆನೆಗಳ ದಾಳಿ ಸ್ವಲ್ಪ ತಗ್ಗಿದ್ದು ಗಮನಕ್ಕೆ ಬಂದಿದೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು. ಡಾ.ಪ್ರಾಚಿ ಹಾಗೂ ನಿವೃತ್ತ ಐಎಫ್​ಎಸ್ ಅಧಿಕಾರಿ ಜಯಂತ ನೇತೃತ್ವದ ವನ್ಯಜೀವಿ ಸಂರಕ್ಷಣೆ ಹಾಗೂ ಸಂಶೋಧನೆ ಸೊಸೈಟಿ (ಡಬ್ಲ್ಯುಆರ್​ಸಿಎಸ್) ಸಂಸ್ಥೆ ಆನೆಗಳ ಹಾವಳಿಯನ್ನು ಕಡಿಮೆ ಖರ್ಚಿನಲ್ಲಿ ನೈಸರ್ಗಿಕವಾಗಿ ತಪ್ಪಿಸುವ ಕುರಿತು 5-6 ವರ್ಷಗಳಿಂದ ಈ ಭಾಗದಲ್ಲಿ ಜಾಗೃತಿ ಮೂಡಿಸುವ ಜತೆಗೆ ರೈತರಿಗೆ ನೆರವಾಗುತ್ತಿದೆ.ಇದನ್ನೂ ಓದಿ:ನಮ್ ಲೈಫೇ ಬರ್ನ್ ಆಗ್ಹೋಯ್ತು ಎಂದು ಅಲವತ್ತುಕೊಂಡ ರಾಗಿಣಿ: ವಿಡಿಯೋ ವೈರಲ್
ಜೇನುಹುಳು ಸೊಂಡಿಲಿಗೆ ಕಚ್ಚಿದರೆ ತೀವ್ರ ಕಿರಿಕಿರಿ ಆಗುವುದರಿಂದ ಆನೆಗಳು ಅವುಗಳಿಗೆ ಹೆದರುತ್ತವೆ. ರೈತರ ಜಮೀನಿನ ಸುತ್ತ 10-15 ಮೀಟರ್​ಗೆ ಒಂದರಂತೆ ಜೇನುಗೂಡು ಇಡಲಾಗುತ್ತದೆ. ಒಂದು ಗೂಡಿನಿಂದ ಇನ್ನೊಂದಕ್ಕೆ ಸಣ್ಣ ದಾರದ ಮೂಲಕ 6-7 ಅಡಿ ಎತ್ತರದಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ. ಆನೆಗಳು ಈ ದಾರ ಮುಟ್ಟಿದಾಕ್ಷಣ, ಸುತ್ತಲಿನ ನಾಲ್ಕಾರು ಗೂಡುಗಳ ಜೇನುಹುಳುಗಳು ಅಲರ್ಟ್ ಆಗಿ ದಾಳಿ ಮಾಡುತ್ತವೆ. ಇದರಿಂದ ಆನೆಗಳು ಜೇನುಗಳ ಸಹವಾಸವೇ ಬೇಡ ಎಂದು ಅತ್ತ ಬರುವುದನ್ನು ಕಡಿಮೆ ಮಾಡುತ್ತವೆ. ಎನ್ನುತ್ತಾರೆ ಯಲ್ಲಾಪುರದ ಡಬ್ಲ್ಯುಆರ್​ಸಿಎಸ್​ನ ರವಿ.
ಆನೆಗಳು ಪ್ರತಿವರ್ಷ ಒಂದೇ ಮಾರ್ಗದಲ್ಲಿ ಸಂಚರಿಸುತ್ತವೆ. ಇದರಿಂದಲೇ ಸರ್ಕಾರ ಈ ಪ್ರದೇಶವನ್ನು ಎಲಿಫೆಂಟ್ ಕಾರಿಡಾರ್ ಎಂದು ಗುರುತಿಸಿದೆ. ಈ ಮಾರ್ಗದಲ್ಲಿ ಅತಿ ವೇಗವಾಗಿ ಆಗುತ್ತಿರುವ ಅತಿಕ್ರಮಣವು ಇವುಗಳ ದಿಕ್ಕು ತಪ್ಪಿಸುತ್ತಿದೆ. ಭತ್ತ ಬಿಟ್ಟು ಕಬ್ಬು, ಮೆಕ್ಕೆ ಜೋಳ ಮುಂತಾದ ಅತಿ ಪೌಷ್ಠಿಕ ಆಹಾರ ಕಂಡ ಆನೆಗಳು ಕಾಡು ಬಿಟ್ಟು ಹೊಲಗಳಿಗೆ ನುಗ್ಗುತ್ತಿವೆ. ಬೆಳೆಗಳಿಗೆ ಹಾನಿ ಮಾಡುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.ಇದನ್ನೂ ಓದಿ:ಕ್ರಿಮಿನಲ್​ಗಳ ವಿರುದ್ಧ ನಿಯಮ ಬಿಗಿ- ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದ ಚುನಾವಣಾ ಆಯೋಗ
ಆನೆ ಆಗಮನದ ಮಾಹಿತಿ ನೀಡಲು ಡಬ್ಲ್ಯುಆರ್​ಸಿಎಸ್ ಸಂಸ್ಥೆ ಮೂಲಕ ಎಲ್ಲೆಡೆ ಅಲಾರಾಂ ಅಳವಡಿಸಲಾಗಿದೆ. ಆನೆ ಬಂದ ತಕ್ಷಣ ಇವು ದೊಡ್ಡ ಸದ್ದು ಮಾಡಿ ರೈತರಿಗೆ ಮಾಹಿತಿ ನೀಡುತ್ತವೆ. ಒಣ ಮೆಣಸು, ಹುಲ್ಲು ಹಾಗೂ ಇತರ ಕೆಲವು ಘಾಟಿನ ಪದಾರ್ಥ ಸೇರಿಸಿ ಹೊಗೆ ಹಾಕಿ ಆನೆ ಓಡಿಸಲಾಗುತ್ತದೆ. ಆಯಾ ಭಾಗದ ರೈತರ ವಾಟ್ಸ್​ಆಪ್ ಗ್ರೂಪ್​ಗಳನ್ನು ಮಾಡಲಾಗಿದೆ. ಇದರಿಂದ ಆನೆಗಳ ಸಂಚಾರದ ಮಾಹಿತಿಯನ್ನು ಕಾಲಕಾಲಕ್ಕೆ ಒದಗಿಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಇದುವರೆಗೆ ಸುಮಾರು 100 ಕಿಮೀಗೂ ಅಧಿಕ ದೂರದವರೆಗೆ ಕಂದಕ ತೆಗೆಯಲಾಗಿದೆ. ಇಷ್ಟೆಲ್ಲ ಆದರೂ ಆನೆಗಳ ಹಾವಳಿ ಸಂಪೂರ್ಣ ತಪ್ಪಿದೆ ಎಂದಿಲ್ಲ.
ಮೈಸೂರು: ಈ ಬಾರಿ ದಸರಾ ಜಂಬೂಸವಾರಿ ಅರಮನೆ ಆವರಣದಲ್ಲಷ್ಟೇ ಇರಲಿದ್ದು, ಕರೊನಾ ಭೀತಿ ಹಿನ್ನೆಲೆಯಲ್ಲಿ ಐದು ಆನೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅರಣ್ಯ ಇಲಾಖೆ ಸಿದ್ಧಪಡಿಸಿರುವ ತಾತ್ಕಾಲಿಕ ಪಟ್ಟಿಯಲ್ಲಿ ‘ಅಭಿಮನ್ಯು’ ಅಂಬಾರಿ ಆನೆಯ ಸ್ಥಾನ ಪಡೆದಿದ್ದಾನೆ. ಗೋಪಿ ಪಟ್ಟದ ಆನೆಯಾಗಿ, ವಿಕ್ರಮ ನಿಶಾನೆಯಾಗಿ, ವಿಜಯ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಈ ಪಟ್ಟಿಯನ್ನು ಈಗಾಗಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಲಾಗಿದೆ. ಅವರು ಒಪ್ಪಿಗೆ ಸೂಚಿಸಿದರೆ ಈ ಆನೆಗಳೇ ಅಂತಿಮಗೊಳ್ಳಲಿವೆ ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಅಲೆಕ್ಸಾಂಡರ್ ಸುದ್ದಿಗಾರರಿಗೆ ತಿಳಿಸಿದರು.
ಹಳೇ ಮೈಸೂರಿನ ನಂಟು
ದಾಂಡೇಲಿ ಆನೆಗಳಿಗೆ ಹಳೇ ಮೈಸೂರು ಭಾಗದ ನಂಟಿದೆ. ಶಿವಮೊಗ್ಗ, ಕೊಡಗು ಭಾಗದ ಆನೆಗಳು ಈ ಹಿಂದೆ ದಾಂಡೇಲಿಯವರೆಗೂ ಬಂದು ಹೋಗುತ್ತಿದ್ದವು. ಶರಾವತಿ ನದಿಗೆ ಅಣೆಕಟ್ಟು ನಿರ್ವಣವಾದ ನಂತರ ಇವುಗಳ ಪಥ ಅಲ್ಲಿಗೇ ತುಂಡಾಯಿತು ಎನ್ನಲಾಗುತ್ತದೆ.
ಆನೆಗಳು ನಮ್ಮ ಆವಾಸಕ್ಕೆ ಬಂದು ದಾಂಧಲೆ ಮಾಡುತ್ತವೆಂದು ಹೇಳುತ್ತೇವೆ. ನಾವೇ ಅವುಗಳ ಸ್ಥಾನವನ್ನು ಕಸಿದುಕೊಂಡಿದ್ದೇವೆ. ಕಾಡಾನೆಗಳ ಹಾವಳಿ ವಿಪರೀತವಾಗಿದ್ದಲ್ಲಿ ನಾವು ಸರ್ಕಾರದ ಅನುದಾನ ಆಧರಿಸಿ ಟ್ರಂಚ್ ಹೊಡೆಯುತ್ತಿದ್ದೇವೆ. ಅವುಗಳನ್ನು ಓಡಿಸುವ ಕಾರ್ಯ ಮಾಡುತ್ತಿದ್ದೇವೆ.
| ಶ್ರೀಶೈಲ ವಾಲಿಎಸಿಎಫ್, ಮುಂಡಗೋಡ
ಸಿಎಂ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + two =
Remember me
